Site icon Vistara News

Janhvi Kapoor | ಮಾಲ್ಡೀವ್ಸ್‌ಗೆ ಹಾರಿದ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌: ಚಳಿ ನಡುವೆ ಹಾಟ್‌ ಫೋಟೊ ವೈರಲ್‌!

Janhvi Kapoor

ಬೆಂಗಳೂರು: ಬಾಲಿವುಡ್‌ ನಟಿ ದಿವಂಗತ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್‌ (Janhvi Kapoor) ಈ ಹಿಂದೆ ಸಖತ್‌ ಟ್ರೋಲ್‌ ಆಗಿದ್ದರು. ತಮ್ಮ ಸಿನಿಮಾ ಪ್ರಮೋಷನ್‌ ವೇಳೆ ‘ಪಾಪ್‌ ಕಾರ್ನ್‌’ ಮಾರಾಟ ಮಾಡಿದ್ದಕ್ಕೆ ನೆಟ್ಟಿಗರು ನಟಿಯ ಕಾಲೆಳೆದಿದ್ದರು. ಇದರ ಬೆನ್ನಲ್ಲೇ ನಟಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೂಲ್ ಆಗಿರುವ ಪ್ರದೇಶದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ನಟಿ ಶೇರ್‌ ಮಾಡಿಕೊಂಡಿದ್ದಾರೆ.

ಪ್ರವಾಸಿಗರ ತಾಣ ಮಾಲ್ಡೀವ್ಸ್‌ ಚಳಿಯಲ್ಲಿ ಹಾಟ್‌ ಆಗಿ ಪೋಸ್‌ ಕೊಟ್ಟಿದ್ದಾರೆ ಜಾಹ್ನವಿ ಕಪೂರ್‌. ಜಾಹ್ನವಿ ಕಪೂರ್‌ ಕೆಲವು ಸಿನಿಮಾಗಳನ್ನು ಮಾಡಿದ್ದರೂ ಅಷ್ಟಾಗಿ ಯಶಸ್ಸು ಕಂಡಿಲ್ಲ.

ಸೌತ್‌ ಸಿನಿಮಾ ಕಡೆ ಜಾಹ್ನವಿ ಕಪೂರ್‌ ಕಾಣಿಸಿಕೊಳ್ಳುತ್ತಾರೆ ಎಂಬ ವದಂತಿಗಳು ಹರಿದಾಡಿದ್ದವು. ಇದೀಗ ಎಲ್ಲ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿ ಮಾಲ್ಡೀವ್ಸ್‌ನಲ್ಲಿ ಎಂಜಾಯ್‌ ಮಾಡ್ತಿದ್ದಾರೆ ನಟಿ.

ಇದನ್ನೂ ಓದಿ | Janhvi Kapoor | ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ನಿಂದ ಪಾಪ್‌ ಕಾರ್ನ್‌ ಮಾರಾಟ: ಟ್ರೋಲ್‌ ಆದ್ರು ನಟಿ!

Exit mobile version