Site icon Vistara News

Janhvi Kapoor: ಜ್ಯೂ. ಎನ್‌ಟಿಆರ್‌ 30 ಸಿನಿಮಾದಲ್ಲಿ ಜಾಹ್ನವಿ ಕಪೂರ್?  

Janhvi Kapoor

ಬೆಂಗಳೂರು: ʻಮಿಲ್ಲಿʼ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಜಾಹ್ನವಿ ಕಪೂರ್ (Janhvi Kapoor), ಕೊರಟಾಲ ಶಿವ ನಿರ್ದೇಶನದ ಮುಂಬರುವ ಇನ್ನೂ ಹೆಸರಿಡದ ಯೋಜನೆಯಲ್ಲಿ ಜೂನಿಯರ್ ಎನ್‌ಟಿಆರ್ ಎದುರು ಕಾಣಿಸಿಕೊಳ್ಳಲಿದ್ದಾರಂತೆ. ಈ ಮೂಲಕ ನಟಿ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಜನತಾ ಗ್ಯಾರೇಜ್ ನಂತರ ಎಎನ್‌ಟಿಆರ್‌ ಈ ಸಿನಿಮಾ ಮೂಲಕ ಕೊರಟಾಲ ಶಿವ ಅವರೊಂದಿಗೆ ಕೈ ಜೋಡಿಸುತ್ತಿದ್ದಾರೆ.

ʻʻಜಾಹ್ನವಿ ಕಪೂರ್ ಸಿನಿಮಾಗೆ ಸಹಿ ಮಾಡಿದ್ದಾರೆ. ಶೀಘ್ರದಲ್ಲೇ ಜೂನಿಯರ್ ಎನ್‌ಟಿಆರ್ ಜತೆ ಫೋಟೊಶೂಟ್‌ ಕೂಡ ಹೊಂದಿದ್ದಾರೆ. ಜಾಹ್ನವಿ ಸಹಿ ಮಾಡಿರುವುದು ನಿಜ. ಇನ್ನೆರಡು ವಾರಗಳಲ್ಲಿ ಫೋಟೊಶೂಟ್ ಮಾಡಲು ಚಿತ್ರತಂಡ ಮುಂದಾಗಿದೆ. ”ಎಂದು ಮೂಲಗಳು ತಿಳಿಸಿವೆ.

ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾದಾಗಿನಿಂದ, ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಟೇಟ್‌ಗಳಿಗಾಗಿ ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ, ಜೂನಿಯರ್ ಎನ್‌ಟಿಆರ್ ಅಭಿಮಾನಿಗಳಿಗೆ ಪದೇ ಪದೇ ಅಪ್‌ಟೇಟ್‌ ಕೇಳದಂತೆ ವಿನಂತಿಸಿದ್ದಾರೆ. ಸಹೋದರ ಕಲ್ಯಾಣ್ ರಾಮ್ ಅವರ ಅಮಿಗೋಸ್ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಎನ್‌ಟಿಆರ್, ʻʻಕೆಲವೊಮ್ಮೆ, ನಾವು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವಾಗ, ಹಂಚಿಕೊಳ್ಳಲು ಹೆಚ್ಚಿನ ಮಾಹಿತಿ ಇರುವುದಿಲ್ಲ. ನಾವು ಪ್ರತಿದಿನ ಅಥವಾ ಗಂಟೆಯ ಆಧಾರದ ಮೇಲೆ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ. ಕೆಲವೊಮ್ಮೆ ಇದೆಲ್ಲವೂ ನಿರ್ದೇಶಕರು ಮತ್ತು ಚಲನಚಿತ್ರ ನಿರ್ಮಾಪಕರ ಮೇಲೆ ಸಾಕಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ಒತ್ತಡದಿಂದಾಗಿ, ಕೆಲವೊಮ್ಮೆ ನಾವು ಸರಿಯಾದ ಅಪೆಡೇಟ್‌ಗಳನ್ನು ಹಂಚಿಕೊಂಡಿರುವುದಿಲ್ಲ. ಅದು ಅಭಿಮಾನಿಗಳನ್ನು ಇನ್ನಷ್ಟು ಅಸಮಾಧಾನಗೊಳಿಸುತ್ತದೆ, ”ಎಂದು ಅವರು ಹೇಳಿದರು.

ಇದನ್ನೂ ಓದಿ: Appu Namana | ಕರ್ನಾಟಕ ರತ್ನ ಪುನೀತ್‌ ಅವರ ಪ್ರೀತಿಯ ಗೆಳೆಯ ಜ್ಯೂನಿಯರ್‌ ಎನ್‌ಟಿಆರ್‌ ಆಗಮನ

ಇದನ್ನೂ ಓದಿ: Janhvi Kapoor | ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಜಾಹ್ನವಿ ಕಪೂರ್-ಶಿಖರ್: ವೈರಲ್‌ ಆಯ್ತು ಫೋಟೊ

ಬಹಳಷ್ಟು ನಟರು ಇದೇ ರೀತಿಯ ಒತ್ತಡವನ್ನು ಎದುರಿಸುತ್ತಾರೆ, ಅದು ಆರೋಗ್ಯಕರವಲ್ಲ ಎಂದು ಎನ್‌ಟಿಆರ್‌ ಹೇಳಿದರು. “ಅಪ್ಡೇಟ್ ಇದ್ದರೆ, ನಾವು ಅದನ್ನು ಮನೆಯಲ್ಲಿ ನಮ್ಮ ಹೆಂಡತಿಯೊಂದಿಗೆ ಹಂಚಿಕೊಳ್ಳುವ ಮೊದಲು ಅದನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ನೀವೆಲ್ಲರೂ ಎಷ್ಟು ಮುಖ್ಯರು ಎಂಬುದನ್ನು ನಾವು ಅರ್ಥಮಾಡಿಕೊಂಡಿರುವುದರಿಂದ ಹೇಳಿದೆʼʼಎಂದಿದ್ದಾರೆ.

Exit mobile version