ಬೆಂಗಳೂರು: ʻಪುಷ್ಪಾ: ದಿ ರೂಲ್ʼ( Pushpa 2: The Rule) ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಬ್ಲಾಕ್ ಬಸ್ಟರ್ ಹಿಟ್ ಆದ ಪುಷ್ಪ : ದಿ ರೈಸ್ ರಷ್ಯನ್ ಭಾಷೆಯ ಟ್ರೈಲರ್ ಬಿಡುಗಡೆಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ʻಪುಷ್ಪ-1ʼ ಸಿನಿಮಾದಲ್ಲಿ ಸಮಂತಾ ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ.. ಊಊ ಅಂಟವಾ..’ ಸಖತ್ ಹಿಟ್ ಕಂಡಿತ್ತು. ಇದೀಗ ಪುಷ್ಪ-2ನಲ್ಲಿಯೂ ಐಟಂ ಡ್ಯಾನ್ಸ್ ಇರಲಿದ್ದು, ನಟಿ ಸಮಂತಾ ಬದಲು ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್ (Janhvi Kapoor) ಅವರು ಅಲ್ಲು ಅರ್ಜುನ್ ಜತೆ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಅವರು ಈ ಬಾರಿ ಐಟಂ ಸಾಂಗ್ನಲ್ಲಿ ಕುಣಿದು ಕುಪ್ಪಳಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪುಷ್ಪ: ದಿ ರೂಲ್ (Pushpa 2: The Rule) ಎಂಬ ಉಪ ಶೀರ್ಷಿಕೆಯಡಿ ಪುಷ್ಟ-೨ ಸೆಟ್ಟೇರಿದೆ. ಸಿನಿ ರಸಿಕರಲ್ಲಿ ಎರಡನೇ ಪಾರ್ಟ್ ಹೇಗಿರಲಿದೆ ಎಂಬ ಕೂತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್ ಶೂಟಿಂಗ್ ಆರಂಭಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Rakul Preet Singh | ಮಾಲ್ಡೀವ್ಸ್ ಪ್ರವಾಸದಲ್ಲಿ ರಾಕುಲ್ ಪ್ರೀತ್ ಸಿಂಗ್: ಹಾಟ್ ಫೋಟೊ ಹಂಚಿಕೊಂಡ ನಟಿ!
2021ರಲ್ಲಿ ಚಿತ್ರ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪಾರ್ಟ್ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್ ಫಾಸಿಲ್ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.
ಇದನ್ನೂ ಓದಿ | Janhvi Kapoor | ನೂಲಿನಂತೆ ಸೀರೆ! ಶ್ರೀದೇವಿ ಮಗಳು ಜಾಹ್ನವಿಯ ಬ್ಯೂಟಿ ಕಹಾನಿ