ಬೆಂಗಳೂರು: ಲೆನ್ಸ್ ಧರಿಸಿದ್ದ ಬಹುಭಾಷಾ ನಟಿ ಜಾಸ್ಮಿನ್ ಭಾಸಿನ್ (Jasmin Bhasin) ಕಣ್ಣಿಗೆ ಸಮಸ್ಯೆ ಎದುರಾಗಿದೆ. ದೃಷ್ಟಿ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿದೆ. ಈ ಬಗ್ಗೆ ನಟಿ ವಿವರವಾಗಿ ಹಂಚಿಕೊಂಡಿದ್ದಾರೆ. ರಾಜಸ್ಥಾನ್ ಮೂಲದ ನಟಿ ಜಾಸ್ಮಿನ್ ಭಾಸಿನ್‌ಗೆ ಈ ಸಮಸ್ಯೆ ಎದುರಾಗಿದೆ. ಕನ್ನಡ ಚಿತ್ರದಲ್ಲಿ ಕೂಡ ನಟಿ ನಟಿಸಿದ್ದರು. ಇದೀಗ ನಟಿ ಲೆನ್ಸ್ ಧರಿಸಿ ಎದುರಾಗಿರುವ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಲೆನ್ಸ್ ಸರಿಯಾಗಿ ಧರಿಸದ ಕಾರಣ ಕಣ್ಣು ಕಾಣಿಸುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಲೆನ್ಸ್ ಸರಿಯಾಗಿ ಧರಿಸದ ಕಾರಣ ಜಾಸ್ಮಿನ್ ಭಾಸಿನ್ ಕಾರ್ನಿಯಲ್ ಹಾನಿಯಿಂದ ಬಳಲುತ್ತಿದ್ದಾರೆ.
ನಟಿಯ ಕಣ್ಣಿಗೆ ಬ್ಯಾಂಡೇಜ್ ಹಾಕಲಾಗಿದೆ. ಜುಲೈ 17 ರಂದು, ಲೆನ್ಸ್ ಧರಿಸಿದ ನಂತರ ನಟಿಗೆ ಕಣ್ಣುಗಳು ತುಂಬಾ ನೋಯಲಾರಂಭಿಸಿದ್ದವು. ಆದಾಗ್ಯೂ, ಅವರು ಕೆಲಸ ಮಾತ್ರ ಮುಂದುವರಿಸಿದ್ದರು. ತಕ್ಷಣ ವೈದ್ಯರನ್ನು ನೋಡಲು ಸಾಧ್ಯವಾಗಲಿಲ್ಲ. ಇದಲ್ಲದೆ, ದೆಹಲಿಯಲ್ಲಿ ನಡೆದ ಈವೆಂಟ್‌ನಲ್ಲಿ ನಟ ಸನ್‌ಗ್ಲಾಸ್ ಧರಿಸಿದ್ದರು. ಬಳಿಕ ನಟಿಗೆ ಕಣ್ಣು ನೋವಾಗಿ. ಕಾಣಿಸದಂತಾಗಿ ವೈದ್ಯರ ಮೊರೆ ಹೋಗಿದ್ದಾರೆ.
ಇದೀಗ ನಟಿಯ ಕಣ್ಣಿನ ಕಾರ್ನಿಯಾಗಳು ಹಾನಿಗೊಳಗಾಗಿವೆ. ಮುಂಬೈಗೆ ಧಾವಿಸಿ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ. ʻʻನಾನು ತುಂಬಾ ನೋವು ಅನುಭವಿಸುತ್ತಿದ್ದೇನೆ. ನಾನು ಮುಂದಿನ ನಾಲ್ಕೈದು ದಿನಗಳಲ್ಲಿ ಚೇತರಿಸಿಕೊಳ್ಳಬಹುದುʼʼ ಎಂದು ನಟಿ ಹೇಳಿದ್ದಾರೆ.
ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?
ಇದೀಗ ನಟಿಗೆ ಮಲಗಲು ಕೂಡ ಆಗುತ್ತಿಲ್ಲವಂತೆ. ಜಾಸ್ಮಿನ್ ಭಾಸಿನ್ ತಮಿಳಿನ ‘ವಾನಂ’ ಸಿನಿಮಾ ಮೂಲಕ ಜಾಸ್ಮಿನ್ ಬಣ್ಣದಲೋಕ್ಕೆ ಬಂದರು. ಬಳಿಕ ಕನ್ನಡ ‘ಕರೋಡ್‌ಪತಿ’ ಚಿತ್ರದಲ್ಲಿ ಕೋಮಲ್ ಜೋಡಿಯಾಗಿ ನಟಿಸಿದ್ದರು. ‘ ತೆಲುಗು, ತಮಿಳು, ಪಂಜಾಬಿ ಸಿನಿಮಾಗಳಲ್ಲಿ ನಟಿ ನಟಿಸಿದ್ದಾರೆ.
ಕಾಂಟ್ಯಾಕ್ಟ್ ಲೆನ್ಸ್‌ಗಳಿಂದಾಗಿ ಕಣ್ಣಿನ ಸೋಂಕುಗಳಿಗೆ ಹೆಚ್ಚಿನ ಅಪಾಯವಾಗಿದೆ. ಕಣ್ಣಿನ ಸೋಂಕುಗಳಿಂದ ಹಿಡಿದು ಕಣ್ಣಿಗೆ ಹುಣ್ಣುಗಳು ಆಗಬಹುದು. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ನಿರ್ವಹಿಸುವಾಗ ನೈರ್ಮಲ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.