Site icon Vistara News

Javed Akthar | ಪತ್ನಿಯಿದ್ದರೂ ನಟಿಯ ಪ್ರೀತಿಯಲ್ಲಿ ಬಿದ್ದಿದ್ದ ಜಾವೇದ್‌; ಚಿತ್ರ ಸಾಹಿತಿ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು ಇಲ್ಲಿವೆ…

ಮುಂಬೈ: ಬಾಲಿವುಡ್‌ನ ಪ್ರಸಿದ್ಧ ಚಿತ್ರ ಸಾಹಿತಿ ಜಾವೇದ್‌ ಅಖ್ತರ್ (Javed Akthar) ಅವರ 78ನೇ ಜನ್ಮದಿನ. ʼಜಿಂದಗೀ ನಾ ಮಿಲೇಗಿ ದುಬಾರಾʼ, ʼಜೋಧಾ ಅಕ್ಬರ್‌ʼ, ʼಓಂ ಶಾಂತಿ ಓಂʼಗಳಂಥ ಹಿಟ್‌ ಸಿನಿಮಾಗಳಿಗೆ ಸಾಹಿತ್ಯ ಬರೆದ ಜಾವೇದ್‌ ಅವರ ಬದುಕಿನ ವಿಶೇಷ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Gulzar-Akhtar | ಜಾವೇದ್‌ ಅಖ್ತರ್‌ಗೋಸ್ಕರ ಕವಿತೆ ವಾಚಿಸಿದ ಗುಲ್ಜಾರ್; ಸಾಹಿತಿಗಳ ಸಮ್ಮಿಲನಕ್ಕೆ ಎಲ್ಲಿಲ್ಲದ ಮೆಚ್ಚುಗೆ!

ಜಾವೇದ್‌ ಅವರು ಹುಟ್ಟಿದ್ದು 1945ರ ಜ.17ರಂದು ಗ್ವಾಲಿಯರ್‌ನಲ್ಲಿ. ಸಲೀಂ ಖಾನ್‌ ಅವರೊಂದಿಗೆ ಸಿನಿಮಾಗಳ ಚಿತ್ರಕಥೆ ಬರೆಯುವ ಮೂಲಕ ಪ್ರಸಿದ್ದರಾದವರಿವರು. ಒಂದು ಕಾಲದಲ್ಲಿ ಸಲೀಂ-ಜಾವೇದ್‌ ಜೋಡಿ ಎಂದೇ ಪ್ರಸಿದ್ಧರಾಗಿದ್ದರು. ಹಲವಾರು ಸಿನಿಮಾಗಳಿಗೆ ಚಿತ್ರಕಥೆ ಬರೆದ ಜಾವೇದ್‌ ಅವರಿಗೆ ಅವಧ್‌ ಸಮ್ಮಾನ್‌ ಪ್ರಶಸ್ತಿ ಲಭಿಸಿದೆ.

ಜಾವೇದ್‌ ಅವರು ನಟಿ ಹನಿ ಇರಾನಿ ಅವರನ್ನು ವಿವಾಹವಾಗಿದ್ದರು. ಅವರಿಬ್ಬರಿಗೆ ಫರಾನ್‌ ಅಖ್ತರ್ ಮತ್ತು ಜೋಯಾ ಅಖ್ತರ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. 1970ರ ಸಮಯದಲ್ಲಿ ಜಾವೇದ್‌ ಅವರು ಕವಿ ಮತ್ತು ಸಾಹಿತಿಯಾಗಿರುವ ಕೈಫಿ ಅಜ್ಮಿ ಅವರ ಮನೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದರು. ಆಗ ಅವರಿಗೆ ಅಜ್ಮಿ ಅವರ ಪುತ್ರಿ ಶಬಾನಾ ಅಜ್ಮಿ ಅವರೊಂದಿಗೆ ಪ್ರೇಮ ಅಂಕುರಿಸಿತು.


ಶಬಾನಾ ಮತ್ತು ಜಾವೇದ್‌ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದಾರೆ. ಈ ವಿಚಾರ ಅಜ್ಮಿ ಅವರಿಗೆ ತಿಳಿದಾಕ್ಷಣ ಅವರ ಪ್ರೀತಿಗೆ ಸಮ್ಮತಿ ಕೊಟ್ಟಿರಲಿಲ್ಲ. ಮದುವೆಯಾಗಿ ಕುಟುಂಬವಿರುವ ಜಾವೇದ್‌ಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡುವುದಕ್ಕೆ ಅವರು ಒಪ್ಪಿಗೆ ನೀಡಿರಲಿಲ್ಲ. ಆದರೆ ಮುಂದೆ ಜಾವೇದ್‌ ಅವರು ಹನಿ ಇರಾನಿ ಅವರಿಗೆ ವಿಚ್ಛೇದನ ನೀಡಿದ ನಂತರ ಅಜ್ಮಿ ಅವರು ಜಾವೇದ್‌ ಹಾಗೂ ಶಬಾನಾ ಮದುವೆಗೆ ಒಪ್ಪಿಕೊಂಡರು. ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

ಇದನ್ನೂ ಓದಿ: Javed Akhtar | ತಾಲಿಬಾನ್‌ ಜತೆ ಆರೆಸ್ಸೆಸ್‌ ಹೋಲಿಕೆ, ಜಾವೇದ್‌ ಅಖ್ತರ್‌ಗೆ ಕೋರ್ಟ್‌ ಸಮನ್ಸ್

ಬಾಲಿವುಡ್‌ನಲ್ಲಿ ಜಾವೇದ್‌ ಅವರ ಸಾಹಿತ್ಯ ಕೃಷಿಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ. ಭಾರತದ ಸರ್ಕಾರದಿಂದ 1999ರಲ್ಲಿ ಪದ್ಮಶ್ರೀ ಹಾಗೂ 2007ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Exit mobile version