Site icon Vistara News

Atlee Kumar | 8 ವರ್ಷಗಳ ನಂತರ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಅಟ್ಲೀ ದಂಪತಿ

Atlee Kumar

ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ಅಟ್ಲೀ (Atlee Kumar) ಇದೀಗ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಮಿಳಿನಲ್ಲಿ ಖ್ಯಾತ ನಟ ದಳಪತಿ ವಿಜಯ್​ ಅಭಿನಯದಲ್ಲಿ ‘ಥೇರಿ’, ‘ಬಿಜಿಲ್​’ ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದವರು. 2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಟ್ಲೀ ಹಾಗೂ ಕೃಷ್ಣ ಪ್ರಿಯಾ, ಮದುವೆಯಾಗಿ ಎಂಟು ವರ್ಷಗಳ ನಂತರ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ ಈ ಜೋಡಿ.

ಆಗಾಗ ಪೋಸ್ಟ್‌ ಹಂಚಿಕೊಳ್ಳುವುದರ ಮೂಲಕ ಸುದ್ದಿಯಲ್ಲಿರುವ ಈ ಜೋಡಿ, ಅದೇ ಕಾರಣಕ್ಕಾಗಿ ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ”ನೀವು ನಮ್ಮ ಮೇಲೆ ತೋರಿದ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಮಗುವಿಗೆ ನಿಮ್ಮ ಪ್ರೀತಿಯನ್ನು ತೋರಿಸುವುದನ್ನು ಮುಂದುವರಿಸಬೇಕೆಂದು ನಾವು ಬಯಸುತ್ತೇವೆ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಮ್ಮ ಮಗುವನ್ನು ಈ ಜಗತ್ತಿಗೆ ತರಲು ಕಾತುರದಿಂದ ಕಾಯುತ್ತಿದ್ದೇವೆ’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Jawan Teaser: ಲಿಯಾಮ್ ನೀಸನ್ ಅವರ 1990ರ ಚಿತ್ರ ಡಾರ್ಕ್‌ಮ್ಯಾನ್ ಕಾಪಿ ಮಾಡಿದ್ರಾ SRK?

ಅಟ್ಲೀ ಥೇರಿ, ಮೆರ್ಸಲ್ ಮತ್ತು ಬಿಗಿಲ್ ಸಿನಿಮಾ ಮೂಲಕ ಯಶಸ್ವಿ ನಿರ್ದೇಶಕ ಎಂದೆನಿಸಿಕೊಂಡರು. ತಮಿಳು ಚಿತ್ರರಂಗದಲ್ಲಿ ಉನ್ನತ ಚಲನಚಿತ್ರ ತಯಾರಕರಲ್ಲಿ ಒಬ್ಬರೆಂಬ ಖ್ಯಾತಿ ಹೊಂದಿದ್ದಾರೆ. ಅಟ್ಲೀ ಪ್ರಸ್ತುತ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರ ʻಜವಾನ್ʼ ಅನ್ನು ನಿರ್ದೇಶಿಸಲಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Shah Rukh Khan Birthday | 57ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌

Exit mobile version