Site icon Vistara News

Jawan Actress Priyamani: ಪ್ರಿಯಾಮಣಿಗೆ ಮೋಸ ಮಾಡಿದ ʻಜವಾನ್‌ʼ ನಿರ್ದೇಶಕ ಅಟ್ಲೀ!

Jawan Actress Priyamani Director Atlee

ಬೆಂಗಳೂರು: ಅಟ್ಲಿ ನಿರ್ದೇಶನ, ಶಾರುಖ್‌ ಅಭಿನಯದ `ಜವಾನ್‌’ ಸಿನಿಮಾ (Jawan Movie) ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತಲೇ ಇದೆ. ಜವಾನ್ ಹಿಂದಿ ಚಲನಚಿತ್ರೋದ್ಯಮದಲ್ಲಿ ಅತಿವೇಗದಲ್ಲಿ 300 ಕೋಟಿ ರೂಪಾಯಿಗಳ ಗಡಿ ದಾಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಜವಾನ್ ಬಗ್ಗೆ ಒಂದು ವಿಶಿಷ್ಟವಾದ (Jawan Actress Priyamani) ಸಂಗತಿಯೆಂದರೆ, ಪ್ರತಿ ಪಾತ್ರವರ್ಗದವರು ತಮ್ಮ ನಟನೆಯ ಮೂಲಕ ಪ್ರಶಂಸೆಯನ್ನು ಪಡೆಯುತ್ತಿದ್ದಾರೆ. ಅವರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ (Priyamani played Lakshmi) ಕೂಡ ಒಬ್ಬರು. ಹಾಗಿದ್ದರೂ ಕೂಡ ಅವರಿಗೆ ಒಂದು (Director Atlee) ಅಸಮಾಧಾನ ಇದೆ. ನಿರ್ದೇಶಕ ಅಟ್ಲೀ ಅವರು ಪ್ರಿಯಾಮಣಿಗೆ ಮೋಸ ಮಾಡಿದ್ದು ಈಗ ಬಯಲಾಗಿದೆ. ಅದೇನು? ಮುಂದೆ ಓದಿ.

ಆ ಮೋಸ ನಡೆದಿದ್ದು ದಳಪತಿ ವಿಜಯ್​ ( Tamil star Thalapthy Vijay) ಅವರ ಹೆಸರಿನಲ್ಲಿ ಎಂಬುದು ಅಚ್ಚರಿಯ ವಿಚಾರ. ಪ್ರಿಯಾಮಣಿ ಅವರು ಜವಾನ್‌ನಲ್ಲಿ ಶಾರುಖ್ ಖಾನ್ ಅವರ ಗರ್ಲ್ ಸ್ಕ್ವಾಡ್‌ನ ಸದಸ್ಯೆ ಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಇದೀಗ ಅಟ್ಲೀ ವಿರುದ್ಧ ಅಸಮಾಧಾನಗೊಂಡಿದ್ದಾರೆ. ದಳಪತಿ ವಿಜಯ್​ ಕೂಡ ಈ ಚಿತ್ರದಲ್ಲಿ ಒಂದು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಗಾಸಿಪ್ ಈ ಮುಂಚೆ​ ಹಬ್ಬಿತ್ತು. ಅದನ್ನೇ ನಂಬಿಕೊಂಡು ಪ್ರಿಯಾಮಣಿ ಕೂಡ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಚಿತ್ರ ಬಿಡುಗಡೆಯಾದ ನಂತರ ಅದು ಸುಳ್ಳಾಗಿದೆ. ಶಾರುಖ್ ಜತೆಗೆ ವಿಜಯ್ ಚಿತ್ರದಲ್ಲಿದ್ದಾರೆ ಎಂದು ಅಟ್ಲಿ ತಿಳಿಸಿದ್ದರು ಎಂದು ಪ್ರಿಯಾಮಣಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು. ಚಿತ್ರೀಕರಣದ ಸಮಯದಲ್ಲಿ ವಿಜಯ್ ʻಜವಾನ್‌ʼ ಭಾಗವಾಗದಿದ್ದಾಗ ಪ್ರಿಯಾಮಣಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Jawan Movie: ‘ಜವಾನ್‌’ ಸಿನಿಮಾಗೆ ಅಲ್ಲು ಅರ್ಜುನ್‌ ಫಿದಾ; ಶಾರುಖ್‌ ಹೊಸ ಅವತಾರಕ್ಕೆ ಮೆಚ್ಚುಗೆ

ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಸ್ವತಃ ಅಟ್ಲಿ ಅವರೇ ಪ್ರಿಯಾಮಣಿಗೆ ದಳಪತಿ ವಿಜಯ್​ ಬಗ್ಗೆ ಹೇಳಿದ್ದರು. ವಿಜಯ್​ ಅತಿಥಿ ಪಾತ್ರ ಮಾಡುತ್ತಾರೆ ಎಂಬುದು ಗೊತ್ತಾದ ಬಳಿಕ ಅವರ ಜತೆ ಒಂದು ದೃಶ್ಯದಲ್ಲಾದರೂ ತೆರೆಹಂಚಿಕೊಳ್ಳಲು ಅವಕಾಶ ಕೊಡಿ ಎಂದು ಪ್ರಿಯಾಮಣಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಅಟ್ಲಿ ಕೂಡ ಒಪ್ಪಿದ್ದರು. ಆದರೆ ಇದೆಲ್ಲವೂ ಕೇವಲ ವದಂತಿ ಎಂಬುದು ಗೊತ್ತಾದ ಬಳಿಕ ತಾವು ಮೋಸ ಹೋಗಿರುವುದು ಪ್ರಿಯಾಮಣಿಗೆ ತಿಳಿಯಿತು. ಇದರಿಂದ ಬೇಸರವಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಪ್ರಿಯಾಮಣಿ ಅವರು ಈ ಹಿಂದೆ ‘ಚೆನ್ನೈ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ಶಾರುಖ್​ ಜತೆ ‘ಒನ್​ ಟು ತ್ರಿ ಫೋರ್​..’ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಪ್ರಿಯಾಮಣಿ ಈಗ ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರ ʼದಿ ಫ್ಯಾಮಿಲಿ ಮ್ಯಾನ್ 3ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅಲ್ಲಿ ಅವರು ಮನೋಜ್ ಬಾಜ್‌ಪೇಯಿ ಎದುರು ಜೋಡಿಯಾಗಿದ್ದಾರೆ.

ಅಟ್ಲೀ ಬರೆದು ನಿರ್ದೇಶಿಸಿರುವ ʼಜವಾನ್ʼ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ, ರಿಧಿ ಡೋಗ್ರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಮೊದಲ ದಿನ ಭಾರತದ ಎಲ್ಲಾ ಭಾಷೆಗಳಲ್ಲಿ 74.50 ಕೋಟಿ ಗಳಿಸಿತು. ಈ ಚಿತ್ರವು ವಿಶ್ವಾದ್ಯಂತ 129.06 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ದಿನಕ್ಕೆ ಸಾಕ್ಷಿಯಾಯಿತು. ವ್ಯಾಪಾರ ವರದಿಗಳ ಪ್ರಕಾರ, ಸೆಪ್ಟೆಂಬರ್ 12ರಂದು 6 ನೇ ದಿನದಂದು, ‘ಜವಾನ್’ ಭಾರತದಲ್ಲಿ 26.50 ಕೋಟಿ ರೂ ಗಳಿಕೆ ಕಂಡಿದೆ. ಹಾಗಾಗಿ, ಭಾರತದಲ್ಲಿ ಈಗ ಒಟ್ಟು ಕಲೆಕ್ಷನ್ 345.58 ಕೋಟಿ ರೂ. ‘ಜವಾನ್’ ಸೆಪ್ಟೆಂಬರ್ 11ರಂದು ಒಟ್ಟಾರೆ ಶೇಕಡಾ 26.28 ಆಕ್ಯುಪೆನ್ಸಿ ಹೊಂದಿತ್ತು.

Exit mobile version