Site icon Vistara News

Jawan Box Office Collection: ಆರು ದಿನಕ್ಕೆ 600 ಕೋಟಿ ರೂ. ಕಲೆಕ್ಷನ್‌ ಮಾಡಿ ಓಟ ಮುಂದುವರಿಸಿದ ʻಜವಾನ್‌ʼ

Jawan Box Office

ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ (Jawan Box Office Collectio) ಮತ್ತೊಂದು ಮೈಲಿಗಲ್ಲಿನತ್ತ ಸಾಗುತ್ತಿದೆ. ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರ ಭಾರತದಲ್ಲಿ 350 ಕೋಟಿ ಕ್ಲಬ್‌ನ ಸಮೀಪದಲ್ಲಿದೆ. ಅಟ್ಲಿ ನಿರ್ದೇಶನದ, ಆಕ್ಷನ್-ಥ್ರಿಲ್ಲರ್ ಸಿನಿಮಾ ಒಂದು ವಾರದೊಳಗೆ ವಿಶ್ವಾದ್ಯಂತ 600 ಕೋಟಿ ರೂ. ಗಡಿ ದಾಟಿತು. ಬಹುತೇಕ ಎಲ್ಲಾ ಆರಂಭಿಕ ದಾಖಲೆಗಳನ್ನು ಚಿತ್ರವು ಮುರಿದು ತನ್ನ ಓಟವನ್ನು ಮುಂದುವರಿಸಿದೆ.

ಮೊದಲ ದಿನ ಭಾರತದ ಎಲ್ಲಾ ಭಾಷೆಗಳಲ್ಲಿ 74.50 ಕೋಟಿ ಗಳಿಸಿತು. ಈ ಚಿತ್ರವು ವಿಶ್ವಾದ್ಯಂತ 129.06 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ದಿನಕ್ಕೆ ಸಾಕ್ಷಿಯಾಯಿತು. ವ್ಯಾಪಾರ ವರದಿಗಳ ಪ್ರಕಾರ, ಸೆಪ್ಟೆಂಬರ್ 12ರಂದು 6 ನೇ ದಿನದಂದು, ‘ಜವಾನ್’ ಭಾರತದಲ್ಲಿ 26.50 ಕೋಟಿ ರೂ ಗಳಿಕೆ ಕಂಡಿದೆ. ಹಾಗಾಗಿ, ಭಾರತದಲ್ಲಿ ಈಗ ಒಟ್ಟು ಕಲೆಕ್ಷನ್ 345.58 ಕೋಟಿ ರೂ. ‘ಜವಾನ್’ ಸೆಪ್ಟೆಂಬರ್ 11ರಂದು ಒಟ್ಟಾರೆ ಶೇಕಡಾ 26.28 ಆಕ್ಯುಪೆನ್ಸಿ ಹೊಂದಿತ್ತು.

ಜವಾನ್‌ ಸಿನಿಮಾ ‘ಗದರ್ 2’ ಮತ್ತು ‘ಪಠಾಣ್‌’ ಹಿಂದಿಕ್ಕಿ 300-ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಅತ್ಯಂತ ವೇಗವಾಗಿ ಚಲನಚಿತ್ರವಾಗಿದೆ. ಮತ್ತೊಂದೆಡೆ, ಜಾಗತಿಕ ಮಟ್ಟದಲ್ಲಿ, ‘ಜವಾನ್’ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ವ್ಯಾಪಾರ ತಜ್ಞ ರಮೇಶ್ ಬಾಲಾ ಹೇಳಿದ್ದಾರೆ.

ಇದನ್ನೂ ಓದಿ: Jawan box office collection: 120 ಕೋಟಿ ರೂ. ದಾಟಿದ ʻಜವಾನ್‌ʼ; ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ!

ಚಿತ್ರದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರಾದ ನಯನತಾರಾ, ವಿಜಯ್ ಸೇತುಪತಿ ಇದ್ದಾರೆ. ಅಟ್ಲಿ ನಿರ್ದೇಶನ ಚಿತ್ರಕ್ಕಿದೆ. ಈ ಕಾರಣದಿಂದಲೇ ಸಿನಿಮಾಗೆ ಭಾರತಾದ್ಯಂತ ಬೇಡಿಕೆ ಸೃಷ್ಟಿ ಆಗಿದೆ.

ಶಾರುಖ್ ಮತ್ತು ನಯನತಾರಾ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಕ್ಯೂಟ್‌ ಜೋಡಿಯನ್ನು ಜನ ಹಾಡಿ ಹೊಗಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲೀ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

Exit mobile version