ಬೆಂಗಳೂರು: ಸೆಪ್ಟೆಂಬರ್ 7ರಂದು ಜವಾನ್ (Jawan Box Office Collection) ಬಿಡುಗಡೆಯಾದಾಗಿನಿಂದ ದೇಶೀಯ ಮತ್ತು ವಿದೇಶಗಳ ಸಿನಿಮಾ ಬಾಕ್ಸ್ಆಫೀಸ್ಗಳಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಜವಾನ್ ಬಿಡುಗಡೆಯಾದ ಒಂಬತ್ತನೇ ದಿನದಂದು ಜಾಗತಿಕವಾಗಿ 700 ಕೋಟಿ ರೂ. ಗಳಿಕೆಯನ್ನು ಕಂಡಿದೆ ಎಂದು ಸೆ. 16ರಂದು ಟ್ವೀಟ್ ಮಾಡಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮನೋಬಾಲಾ ಟ್ವೀಟ್‌ನಲ್ಲಿ “ಜವಾನ್ ಬಾಕ್ಸ್ ಆಫೀಸ್ ಕೇವಲ 9 ದಿನಗಳಲ್ಲಿ 700 ಕೋಟಿ ರೂ. ಗ್ರಾಸ್ ಮಾರ್ಕ್ ಮೀರಿದೆ. ಈ ಸಾಧನೆಯನ್ನು ಸಾಧಿಸಿದ ಅತ್ಯಂತ ವೇಗದ ಬಾಲಿವುಡ್ ಚಿತ್ರ ಎಂಬ ಖ್ಯಾತಿ ಪಡೆದಿದೆ. ಆರನೇ ದಿನದ ಕಲೆಕ್ಷನ್ 38.21 ಕೋಟಿ ರೂ , ಏಳನೇ ದಿನದಂದು 34.06 ಕೋಟಿ ರೂ, ಎಂಟನೇ ದಿನದಂದು 28.79 ಕೋಟಿ ರೂ. ಒಂಬತ್ತನೇ ದಿನದಂದು 26.35 ಕೋಟಿ ರೂಪಾಯಿ ಸೇರಿದಂತೆ ಒಂಟ್ಟು 711.06 ಕೋಟಿ ರೂ. ಗಳಿಕೆ ಕಂಡಿದೆ.”ಎಂದು ಟ್ವೀಟ್ ಮಾಡಿದ್ದಾರೆ.
ಈ ಬಾರಿ ಶಾರುಖ್ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಡಂಕಿ ಸಿನಿಮಾವನ್ನು ಫ್ಯಾನ್ಸ್‌ಗೆ ಗಿಫ್ಟ್ ಆಗಿ ನೀಡಲಿದ್ದಾರೆ. ಡಂಕಿ ಚಿತ್ರಕ್ಕೆ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬೆಂಬಲ ನೀಡಿವೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ತಾಪ್ಸಿ ಪನ್ನು ನಾಯಕಿಯಾಗಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿಯ ಹೊರತಾಗಿ ಬೊಮನ್ ಇರಾನಿ ಕೂಡ ನಟಿಸಲಿದ್ದಾರೆ.
ಇದನ್ನೂ ಓದಿ: Jawan Box Office Collection: ಆರು ದಿನಕ್ಕೆ 600 ಕೋಟಿ ರೂ. ಕಲೆಕ್ಷನ್ ಮಾಡಿ ಓಟ ಮುಂದುವರಿಸಿದ ʻಜವಾನ್ʼ
Jawan WW Box Office
— Manobala Vijayabalan (@ManobalaV) September 16, 2023
ZOOMS past ₹700 cr gross mark in just 9 days.
FASTEST Bollywood film to achieve this feat.
Second entrant for Shah Rukh Khan after #Pathaan.
||#Jawan|#ShahRukhKhan|#Nayanthara|#Atlee||
Day 1 – ₹ 125.05 cr
Day 2 – ₹ 109.24 cr
Day 3 – ₹ 140.17 cr… pic.twitter.com/8Arxe38fGV
ಚಿತ್ರದ ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡ ಶಾರುಖ್ ಖಾನ್, “ಇದೊಂದು ಸಂಭ್ರಮಾಚರಣೆ. ಒಂದು ಚಿತ್ರದೊಂದಿಗೆ ವರ್ಷಗಳ ಕಾಲ ಬದುಕುವ ಅವಕಾಶ ನಮಗೆ ಸಿಗುವುದು ಅಪರೂಪ. ಕೋವಿಡ್ ಮತ್ತು ಸಮಯದ ಕೊರತೆಯಿಂದಾಗಿ ನಾಲ್ಕು ವರ್ಷಗಳಿಂದ ಜವಾನ್ ತಯಾರಿಯಲ್ಲಿ ಇತ್ತು. ಈ ಚಿತ್ರದಲ್ಲಿ ಸಾಕಷ್ಟು ಮಂದಿ ಶ್ರಮ ಪಟ್ಟಿದ್ದಾರೆ. ಅದರಲ್ಲೂ ದಕ್ಷಿಣದ ಜನರು ಮುಂಬೈಗೆ ಬಂದು ನೆಲೆಸಿರುವವರು. ಕಳೆದ ನಾಲ್ಕು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ ಮತ್ತು ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದು ಅತ್ಯಂತ ಕಷ್ಟದ ಕೆಲಸವಾಗಿದೆʼʼಎಂದರು.
ಶಾರುಖ್, ನಯನತಾರಾ ಮತ್ತು ವಿಜಯ್ ಸೇತುಪತಿ ಅವರಲ್ಲದೆ, ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ನಟಿಸಿದ್ದಾರೆ.