ಬೆಂಗಳೂರು: ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಜವಾನ್ (Jawan Box Office Collection) ಕಲೆಕ್ಷನ್ ʼಪಠಾಣ್ʼ ಸಿನಿಮಾ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ. ಮೊದಲ ದಿನವೇ ಜವಾನ್ 75 ಕೋಟಿ ರೂ. ಬಾಚಿಕೊಂಡಿತು. ವರದಿಯ ಪ್ರಕಾರ ನಾಲ್ಕನೇ ದಿನ 81 ಕೋಟಿ ರೂಪಾಯಿ ಗಳಿಕ ಕಂಡಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ 287 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 500 ಕೋಟಿ ರೂಪಾಯಿ ಬಾಚಿಕೊಂಡಿದೆ.
ʼಪಠಾಣ್ʼ ಐತಿಹಾಸಿಕ ಯಶಸ್ಸಿನ ನಂತರ ಈ ವರ್ಷ ಶಾರುಖ್ ಖಾನ್ ಅವರ ಎರಡನೇ ಚಲನಚಿತ್ರ ಜವಾನ್. 57 ಕೋಟಿ ರೂ. ಗಳಿಸಿದ ʼಪಠಾಣ್ʼ ಸಿನಿಮಾವನ್ನು ಹಿಂದಿಕ್ಕಿ ʼಜವಾನ್ʼ 75 ಕೋಟಿ ರೂಪಾಯಿ ಗಳಿಸಿ ವರ್ಷದ ಬೆಸ್ಟ್ ಹಿಂದಿ ಓಪನರ್ ಸಿನಿಮಾ ಆಗಿ ಹೊರಹೊಮ್ಮಿದೆ. ಕೇವಲ ಮೂರೇ ದಿನಗಳಲ್ಲಿ 200 ಕೋಟಿ ಗಳಿಸಿದ ದಾಖಲೆ ʼಜವಾನ್ʼ ಸಿನಿಮಾದ್ದು. ʼಪಠಾಣ್ʼ ಈ ದಾಖಲೆ ಮಾಡಲು 4 ದಿನಗಳನ್ನು ಪಡೆದುಕೊಂಡಿತು. ಅದೇ ರೀತಿ ʼಗದರ್ 2ʼ ಸಿನಿಮಾ 5 ದಿನಗಳನ್ನು ಪಡೆದುಕೊಂಡಿತು.
ಟ್ರೇಡ್ ವರದಿಗಳ ಪ್ರಕಾರ, ಮೊದಲ ದಿನದಂದು, ‘ಜವಾನ್’ ಭಾರತದ ಎಲ್ಲಾ ಭಾಷೆಗಳಲ್ಲಿ 74.50 ರೂ. ಗಳಿಸಿದೆ. ಗುರುವಾರ ಹಿಂದಿ ಆವೃತ್ತಿಯಲ್ಲಿ ಚಿತ್ರವು ಒಟ್ಟಾರೆ ಶೇಕಡಾ 58.67ರಷ್ಟು ಆಕ್ಯುಪೆನ್ಸಿಯನ್ನು ಕಂಡಿದೆ. ನಂತರ, ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ 1ನೇ ದಿನದ ಕಲೆಕ್ಷನ್ ಬಗ್ಗೆ ಹಂಚಿಕೊಂಡರು. ಚಿತ್ರವು ಮೊದಲ ದಿನವೇ 129.06 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ದಿನವಾಯಿತು ಎಂದು ಪೋಸ್ಟ್ ಹಂಚಿಕೊಂಡರು.
ಇದನ್ನೂ ಓದಿ: Jawan box office collection: 120 ಕೋಟಿ ರೂ. ದಾಟಿದ ʻಜವಾನ್ʼ; ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ!
ಶಾರುಖ್ ಮತ್ತು ನಯನತಾರಾ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಕ್ಯೂಟ್ ಜೋಡಿಯನ್ನು ಜನ ಹಾಡಿ ಹೊಗಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ʼಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲೀ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್ ರೈಟ್ಸ್ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.