Site icon Vistara News

Jawan Box Office Collection: ದೇಶದಲ್ಲಿ 500 ಕೋಟಿ ರೂ. ದಾಟಿದ ಜವಾನ್‌ ಕಲೆಕ್ಷನ್‌; ಕೆಜಿಎಫ್‌ 2 ದಾಖಲೆ ಉಡೀಸ್

Shahrukh Khan In Jawan Movie Scene

Jawan Box Office Collection: Shah Rukh Khan film crosses Rs 500 crore in India, Breaks KGF 2 Record

ಮುಂಬೈ: ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ನಟನೆಯ ಜವಾನ್‌ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದರೂ ಸಿನಿಮಾದ ಅಬ್ಬರ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲ, ಜವಾನ್‌ ಸಿನಿಮಾವು 13ನೇ ದಿನ ಭಾರತದಲ್ಲಿ ಒಟ್ಟಾರೆ 500 ಕೋಟಿ ರೂ.ಗಿಂತ ಹೆಚ್ಚಿನ ಗಳಿಕೆ (Jawan Box Office Collection) ಕಾಣುವ ಮೂಲಕ ಕೆಜಿಎಫ್‌ 2 ದಾಖಲೆಯನ್ನು ಪುಡಿಗಟ್ಟಿದೆ. ಸಿನಿಮಾ ಬಿಡುಗಡೆಯಾಗಿ 13ನೇ ದಿನವಾದ ಮಂಗಳವಾರ (ಸೆಪ್ಟೆಂಬರ್‌ 19) ಜವಾನ್‌ ಸಿನಿಮಾ 14 ಕೋಟಿ ರೂ. ಬಾಚಿಕೊಂಡಿದೆ. ಇದರೊಂದಿಗೆ 13 ದಿನದಲ್ಲಿ ಭಾರತದಾದ್ಯಂತ ಜವಾನ್‌ 507.88 ಕೋಟಿ ರೂ. ಗಳಿಸಿದಂತಾಗಿದೆ.

ಇದರೊಂದಿಗೆ ಹಿಂದಿ ವರ್ಷನ್‌ನಲ್ಲಿ ಕೆಜಿಎಫ್‌ 2 ಮಾಡಿದ್ದ ಗಳಿಕೆಯ ದಾಖಲೆಯನ್ನು ಜವಾನ್‌ ಸಿನಿಮಾ ಬ್ರೇಕ್‌ ಮಾಡಿದೆ. ಜವಾನ್‌ ಸಿನಿಮಾ ಭಾರತ ಸೇರಿ ಜಗತ್ತಿನಾದ್ಯಂತ ಒಟ್ಟು 907 ಕೋಟಿ ರೂ. ಬಾಚಿಕೊಂಡು ಸಾವಿರ ಕೋಟಿ ರೂ.ನತ್ತ ಸಾಗುತ್ತಿದೆ. ಪಠಾಣ್‌, ಬಾಹುಬಲಿ 2 ಹಾಗೂ ಗದರ್‌ 2 ನಂತರ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆಗೂ ಜವಾನ್‌ ಸಿನಿಮಾ ಪಾತ್ರವಾಗಿದೆ.

ಜವಾನ್‌ ಸಿನಿಮಾ ಸೆಪ್ಟೆಂಬರ್‌ 7ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ದೇಶಾದ್ಯಂತ 75 ಕೋಟಿ ರೂ. ಬಾಚಿಕೊಂಡಿತ್ತು. ಎರಡನೇ ದಿನ 80 ಕೋಟಿ ರೂ. ಗಳಿಸುವ ಜತೆಗೆ ಮೊದಲ ವಾರದಲ್ಲೇ 389 ಕೋಟಿ ರೂ. ಕಲೆಕ್ಷನ್‌ ಮಾಡಿದ ದಾಖಲೆ ಬರೆದಿತ್ತು. ಇದೀಗ ಎರಡನೇ ವಾರದಲ್ಲಿ 500 ಕೋಟಿ ರೂ. ದಾಟಿದೆ. ಕೆಲವೇ ದಿನಗಳಲ್ಲಿ ಜವಾನ್‌ ಸಿನಿಮಾ ಸಾವಿರ ಕೋಟಿ ರೂ. ಕಲೆಕ್ಷನ್‌ ದಾಖಲೆ ಬರೆಯಲಿದೆ ಎಂದೇ ಹೇಳಲಾಗುತ್ತಿದೆ.

ಅಟ್ಲೀ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜತೆಗೆ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ಮತ್ತು ಸಂಜಯ್ ದತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Shah Rukh Khan: ಗ್ರೂಪ್‌ ಫೋಟೊ ತೆಗೆಯುವ ವೇಳೆ ನೆಲದ ಮೇಲೆ ಮಲಗಿ ಪೋಸ್‌ ಕೊಟ್ಟ ಶಾರುಖ್‌!

ಜವಾನ್‌ ಚಿತ್ರದ ಯಶಸ್ಸಿನ ಸಂಭ್ರಮ ಹಂಚಿಕೊಂಡ ಶಾರುಖ್ ಖಾನ್, “ಇದೊಂದು ಸಂಭ್ರಮಾಚರಣೆ. ಒಂದು ಚಿತ್ರದೊಂದಿಗೆ ವರ್ಷಗಳ ಕಾಲ ಬದುಕುವ ಅವಕಾಶ ನಮಗೆ ಸಿಗುವುದು ಅಪರೂಪ. ಕೋವಿಡ್ ಮತ್ತು ಸಮಯದ ಕೊರತೆಯಿಂದಾಗಿ ನಾಲ್ಕು ವರ್ಷಗಳಿಂದ ಜವಾನ್ ನಿರ್ಮಾಣ ಹಂತದಲ್ಲಿತ್ತು. ಈ ಚಿತ್ರದಲ್ಲಿ ಸಾಕಷ್ಟು ಮಂದಿ ಶ್ರಮವಹಿಸಿ ದುಡಿದಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಜನ ಮುಂಬೈಗೆ ಬಂದು ನೆಲೆಸಿರುವವರು. ಕಳೆದ ನಾಲ್ಕು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ ಮತ್ತು ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದು ಅತ್ಯಂತ ಕಷ್ಟದ ಕೆಲಸʼʼ ಎಂದು ಹೇಳಿದ್ದರು.

Exit mobile version