Site icon Vistara News

Jawan director Atlee: ʻಜವಾನ್‌ʼ ಆಸ್ಕರ್‌ಗೆ ಹೋಗಬೇಕು ಎಂದ ನಿರ್ದೇಶಕ ಅಟ್ಲೀ!

Jawan director Atlee Sharukh

ಬೆಂಗಳೂರು: ಅಟ್ಲೀ ನಿರ್ದೇಶನ, ಶಾರುಖ್‌ ನಟನೆಯ ಜವಾನ್‌ ಸಿನಿಮಾ (Jawan director Atlee) ಯಶಸ್ಸಿನ ಉತ್ತುಂಗದಲ್ಲಿದೆ. ಈಗಾಗಲೇ ಜವಾನ್‌ ಚಿತ್ರತಂಡ ಸಕ್ಸಸ್‌ ಮೀಟ್‌ವನ್ನು ಆಚರಿಸಿಕೊಂಡಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್‌ ಮಾಡಿದ ಜವಾನ್‌ ಬಗ್ಗೆ ನಿರ್ದೇಶಕ ಅಟ್ಲೀ ಆಸ್ಕರ್‌ ಪ್ರಶಸ್ತಿಯನ್ನು ಗೆಲ್ಲುವ ಎಲ್ಲ ಸಾಮರ್ಥ್ಯವನ್ನು ಜವಾನ್‌ ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ನಮ್ಮ ಸಿನಿಮಾವನ್ನು ಆಸ್ಕರ್​ಗೆ ಕಳಿಸೋಣವೇ ಎಂದು ಶಾರುಖ್‌ ಅವರನ್ನು ನಾನು ಕೇಳುತ್ತೇನೆ’ ಎಂದಿದ್ದಾರೆ ಅಟ್ಲೀ.

ಮಾಧ್ಯಮವೊಂದರ ಸಂದರ್ಶನದಲ್ಲಿ ಅಟ್ಲೀ ಮಾತನಾಡಿ ʻʻಖಂಡಿತವಾಗಿ ಜವಾನ್‌ ಆಸ್ಕರ್‌ಗೆ ಹೋಗಬೇಕು. ನನ್ನ ಪ್ರಕಾರ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ತಂತ್ರಜ್ಞರ ಕಣ್ಣುಗಳು ಗೋಲ್ಡನ್ ಗ್ಲೋಬ್ಸ್, ಆಸ್ಕರ್, ರಾಷ್ಟ್ರೀಯ ಪ್ರಶಸ್ತಿಗಳು, ಪ್ರತಿ ಪ್ರಶಸ್ತಿಗಳ ಮೇಲೆ ಇರುತ್ತದೆ. ಆದ್ದರಿಂದ, ಖಂಡಿತವಾಗಿಯೂ ನಾನು ಜವಾನ್ ಸಿನಿಮಾವನ್ನು ಆಸ್ಕರ್‌ಗೆ ಕಳಿಸಲು ಮುಂದಾಗುತ್ತೇನೆ. ಶಾರುಖ್‌ ಸಹ ಈ ಸಂದರ್ಶನವನ್ನು ನೋಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಅವರಿಗೆ ಕರೆ ಮಾಡಿ ‘ನಮ್ಮ ಸಿನಿಮಾವನ್ನು ಆಸ್ಕರ್​ಗೆ ಕಳಿಸೋಣವೇ? ಎಂದು ಕೇಳುತ್ತೇನೆʼʼ ಎಂದು ಹೇಳಿದ್ದಾರೆ.

ನೆಟ್ಟಿಗರಿಂದ ಟ್ರೋಲ್‌

‘ಜವಾನ್​’ ಸಿನಿಮಾಗೆ ಆಸ್ಕರ್​ ಗೆಲ್ಲುವ ಅರ್ಹತೆ ಇದೆ ಎಂದು ಶಾರುಖ್​ ಖಾನ್​ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ, ದಕ್ಷಿಣ ಭಾರತದ ಮಂದಿಗೆ ಈ ವಿಚಾರದಲ್ಲಿ ಸಹಮತ ಇಲ್ಲ. ಯಾಕೆಂದರೆ, ಅನೇಕ ಸಿನಿಮಾಗಳನ್ನು ಮಿಕ್ಸ್​ ಮಾಡಿ ‘ಜವಾನ್​’ ಚಿತ್ರ ಮಾಡಲಾಗಿದೆ ಎಂಬುದು ಬಹುತೇಕರ ಅಭಿಪ್ರಾಯ. ಹಾಗಾಗಿ, ‘ಇದನ್ನು ಅತ್ಯುತ್ತಮ​ ಕಾಪಿ ಪೇಸ್ಟ್​ ವಿಭಾಗದಲ್ಲಿ ಸ್ಪರ್ಧೆಗೆ ಕಳಿಸಬಹುದು’ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Jawan Box Office Collection: 1000 ಕೋಟಿ ರೂ. ಕಲೆಕ್ಷನ್‌ ಸನಿಹದತ್ತ ʻಜವಾನ್‌ʼ

ಆಸ್ಕರ್‌ ಹೊರತಾಗಿ ಅಟ್ಲೀ ಜವಾನ್‌ ಸೀಕ್ವೆಲ್ ಬರಲಿದೆ ಎಂತಲೂ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ವಿಜಯ್‌ ದಳಪತಿ ಜತೆ ಸಿನಿಮಾ ಮಾಡುವುದಾಗಿಯೂ ಬಹಿರಂಗಪಡಿಸಿದ್ದಾರೆ. ಜತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.

Exit mobile version