Site icon Vistara News

Jawan New Poster: ʻಡೇರಿಂಗ್, ಡೇಂಜರಸ್‌ʼ ಪೋಸ್ಟರ್‌ ಹಂಚಿಕೊಂಡ ಶಾರುಖ್‌ ಖಾನ್‌!

Jawan New Poster

ಬೆಂಗಳೂರು: ಶಾರುಖ್ ಖಾನ್ ನಟನೆಯ `ಜವಾನ್‌’ ಸಿನಿಮಾ ದಿನೇ ದಿನೇ ಹೊಸ ಸುದ್ದಿಗಳ ಮೂಲಕ ಕ್ರೇಜ್‌ ಹುಟ್ಟುಹಾಕುತ್ತಲೇ ಇದೆ. ಸೆಪ್ಟೆಂಬರ್ 7ರಂದು ಜವಾನ್‌ ಸಿನಿಮಾ (Jawan New Poster) ಚಿತ್ರಮಂದಿರಗಳಲ್ಲಿ ಲಗ್ಗೆ ಇಡುತ್ತಿದೆ. ಕಳೆದ ವಾರ, ಚಿತ್ರತಂಡ ಜಿಂದಾ ಬಂದಾ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ವ್ಯಾಪಕ ಮೆಚ್ಚುಗೆ ಪಡೆಯಿತು. ಇದೀಗ ಶಾರುಖ್ ಖಾನ್, ವಿಜಯ್ ಸೇತುಪತಿ ಮತ್ತು ನಯನತಾರಾ ಒಳಗೊಂಡಿರುವ ಹೊಚ್ಚ ಹೊಸ ಪೋಸ್ಟರ್ ಶೇರ್‌ ಮಾಡಿಕೊಂಡಿದೆ ಚಿತ್ರತಂಡ.

ಆಗಸ್ಟ್‌ 10ರಂದು ಶಾರುಖ್ ಖಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಪೋಸ್ಟರ್‌ಗೆ ‘ದಿ ಡೇರಿಂಗ್’ ಎಂದು ಶೀರ್ಷಿಕೆ ನೀಡಿದ್ದಾರೆ. ಬೆರಗುಗೊಳಿಸುವ. ಜವಾನ್ ವಿಶ್ವಾದ್ಯಂತ 7ನೇ ಸೆಪ್ಟೆಂಬರ್ 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: Army jawan: ಕಾಶ್ಮೀರದಲ್ಲಿ ನಾಪತ್ತೆಯಾಗಿದ್ದ ಯೋಧ ಪತ್ತೆ ಎಂದ ಕಾಶ್ಮೀರ ಪೊಲೀಸರು

ಈ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಕಳೆದ ವಾರ ವರದಿಯಾಗಿತ್ತು. ಟೈಮ್ಸ್ ನೌ ಪ್ರಕಾರ ಕಿಂಗ್ ಖಾನ್ ಚಿತ್ರದಲ್ಲಿ ಫೈಟರ್ (ತಂದೆ) ಮತ್ತು ಜೈಲರ್ (ಮಗ) ಪಾತ್ರವನ್ನು ನಿರ್ವಹಿಸಲಿದ್ದಾರೆ. ಎಸ್‌ಆರ್‌ಕೆ ಆರು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಜವಾನ್‌ನಲ್ಲಿ ಶಾರುಖ್ ಖಾನ್ ಅವರ ಜೈಲರ್ ಪಾತ್ರಕ್ಕೆ ಆಜಾದ್ ಎಂದು ಹೆಸರಿಡಲಾಗಿದೆ. ಶಾರುಖ್‌ ಜತೆಗೆ, ಜವಾನ್ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಸನ್ಯಾ ಮಲ್ಹೋತ್ರಾ ಕೂಡ ನಟಿಸಿದ್ದಾರೆ.

ಈ ಹಿಂದೆ ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದೀಗ ದೀಪಿಕಾ ನಟಿಸುತ್ತಿರುವುದು ಕನ್‌ಫರ್ಮ್‌ ಆಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಶಾರುಖ್ ಬ್ಯಾಂಡೇಜ್‌ನಲ್ಲಿ ಕಾಣಿಸಿಕೊಂಡಿದ್ದರು.ಈಗಾಗಲೇ ಜವಾನ್‌ ಪ್ರಿವ್ಯೂ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: Jawan Prevue: ಚಿಯಾನ್ ವಿಕ್ರಮ್ ಲುಕ್‌ ಕಾಪಿ ಮಾಡಿದ್ರಾ ಶಾರುಖ್‌; ಗುರುಗಳ ಹಾದಿಯಲ್ಲೇ ನಡೆದ್ರಾ ಅಟ್ಲೀ?

‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲಿಯವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ. ಮಾರಾಟವಾಗಿದೆ ಎಂದು ವರದಿಯಾಗಿದೆ.

Exit mobile version