Site icon Vistara News

Jawan OTT : ಶಾರುಖ್‌ ʻಜವಾನ್‌ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Jawan OTT Premiere Date Finally Revealed

ಬೆಂಗಳೂರು: 2023ರಲ್ಲಿ, ಶಾರುಖ್ ಖಾನ್ “ಪಠಾಣ್‌” ಮತ್ತು “ಜವಾನ್” ಎರಡು ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆದವು. ನಿರ್ದೇಶಕ ಅಟ್ಲೀ ಅವರು ಕಿಂಗ್ ಖಾನ್ ಅವರನ್ನು ಮಾಸ್ ಅವತಾರದಲ್ಲಿ ಜವಾನ್‌ನಲ್ಲಿ ಪ್ರಸ್ತುತಪಡಿಸಿದ್ದರಿಂದ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ಚಿತ್ರವು ವಿಶ್ವಾದ್ಯಂತ ಅಂದಾಜು 1150 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ. ಹಿಂದಿ ಆವೃತ್ತಿಯು 590 ಕೋಟಿ ರೂ. ಗಳಷ್ಟು ನಿವ್ವಳವನ್ನು ಸಂಗ್ರಹಿಸಿತು. ಇದೀಗ ಜವಾನ್‌ ಸಿನಿಮಾ ಒಟಿಟಿ ರಿಲೀಸ್‌ (Jawan OTT) ದಿನಾಂಕ ಪ್ರಕಟಗೊಂಡಿದೆ.

ಇದೇ ನವೆಂಬರ್‌ 2ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಜವಾನ್‌ ಬರಲಿದೆ. ಅಂದೇ ಶಾರುಖ್‌ ಅವರ ಜನುಮದಿನ. ಹೀಗಾಗಿ ಫ್ಯಾನ್ಸ್‌ ಸಖತ್‌ ಖುಷ್‌ ಆಗಿದ್ದಾರೆ. ನೆಟ್‌ಫ್ಲಿಕ್ಸ್ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. “ಜವಾನ್” ಇನ್ನೂ ಹೆಚ್ಚು ಗಮನಾರ್ಹವಾದುದು ತಮಿಳು ಮತ್ತು ತೆಲುಗು ಮಾರುಕಟ್ಟೆಗಳಲ್ಲಿ. ಈ ಭಾಷೆಗಳಲ್ಲಿನ ಡಬ್ಬಿಂಗ್ ಆವೃತ್ತಿಗಳು 60 ಕೋಟಿ ರೂ, ನಿವ್ವಳವನ್ನು ಸಂಗ್ರಹಿಸಿದ್ದವು.

ಸೆಪ್ಟಂಬರ್‌ 7ರಂದು ಬಿಡುಗಡೆಯಾದ ʼಜವಾನ್‌ʼ ಚಿತ್ರವನ್ನು ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ನಿರ್ಮಿಸಿದ್ದಾರೆ. ಭ್ರಷ್ಟಾಚಾರದ ವಿರುದ್ದ ಹೋರಾಡುವ ಪಾತ್ರದಲ್ಲಿ ಕಿಂಗ್‌ ಖಾನ್‌ ಕಾಣಿಸಿಕೊಂಡಿದ್ದು, ದ್ವಿಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇದನ್ನೂ ಓದಿ: Leo advance booking: ಟಿಕೆಟ್‌ ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ʻಜವಾನ್‌ʼ ಹಿಂದಿಕ್ಕಿದ ಲಿಯೋ!

ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಶಾರುಖ್‌ ಖಾನ್‌ನ ಲಕ್‌ ಎಂದೇ ಪರಿಗಣಿಸಲಾಗುವ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ದಕ್ಷಿಣ ಭಾರತದ ಕಲಾವಿದರಾದ ವಿಜಯ್‌ ಸೇತುಪತಿ, ಪ್ರಿಯಾಮಣಿ ಮುಂತಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ.

ಒಂದೇ ವರ್ಷ ಎರಡು ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ ಶಾರುಖ್‌ ಖಾನ್‌ ಅವರ ಇನ್ನೊಂದು ಸಿನಿಮಾ ಈ ವರ್ಷಾಂತ್ಯದಲ್ಲಿ ತೆರೆ ಕಾಣಲಿದೆ. ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ʼಡಂಕಿʼ ಚಿತ್ರ ಡಿಸೆಂಬರ್ 22ರಂದು ಬಿಡುಗಡೆಯಾಗಲಿದ್ದು, ಅಂದೇ ಪ್ರಭಾಸ್‌ ನಟನೆಯ ʼಸಲಾರ್‌ʼ ಸಿನಿಮಾ ಕೂಡ ರಿಲೀಸ್‌ ಆಗಲಿದೆ. ಈ ಮೂಲಕ ಕ್ರಿಸ್‌ಮಸ್‌ ವೇಳೆಗೆ ಬಹುದೊಡ್ಡ ಪೈಪೋಟಿ ನಡೆಯಲಿದೆ.

Exit mobile version