ಬೆಂಗಳೂರು: ಯುವ ನಿರ್ದೇಶಕ ಅಟ್ಲಿ (ಅರುಣ್ ಕುಮಾರ್) ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕೃತವಾಗಿ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶಾರುಖ್ ಹಾಗೂ ನಯನ ತಾರಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರಕ್ಕೆ ʼಜವಾನ್ʼ ಎಂದು ಹೆಸರಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಟೈಟಲ್ ರಿವೀಲ್ ಸದ್ಯದಲ್ಲೆ ಆಗಲಿದೆ. ಈ ಚಿತ್ರದಲ್ಲಿ ನಯನ ತಾರಾ ತನಿಖಾಧಿಕಾರಿಯಾಗಿ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ನಟಿ ಪ್ರೀಯಾಮಣಿ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲಿದ್ದು, ಈ ಇಬ್ಬರು ನಟಿಯರ ಜೊತೆಗೆ ಕಾಲಿವುಡ್‌ನ ಟಾಪ್ ಕಾಮಿಡಿಯನ್ ಯೋಗಿ ಬಾಬು ಕೂಡ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ | ಬಾಲಿವುಡ್ ನ ಜನ ಮೆಚ್ಚಿದ ಗಾಯಕ ಕೆಕೆ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, 3,000 ಜಿಂಗಲ್ಸ್ ಹಾಡಿದ್ದರು!
ಯೋಗಿ ಬಾಬು ಶಾರುಖ್ ಜೊತೆಗೆ “ಚೆನ್ನೈ ಎಕ್ಸ್‌ಪ್ರೆಸ್ʼನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುನಿರೀಕ್ಷಿತ ಈ ಚಿತ್ರದಲ್ಲಿ ನಟರಾದ ಸನ್ಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ | ʼಹ್ಯಾಪಿ ಬರ್ತಡೇʼ ದಿನವೇ ʼಹ್ಯಾಪಿ ಡೇಸ್ʼ ನಿಖಿಲ್ ಕೊಟ್ಟ ಗುಡ್ ನ್ಯೂಸ್?