Site icon Vistara News

Jawan Box Office Collection: ಅಬ್ಬಾ! ಈವರೆಗಿನ ʻಜವಾನ್‌ʼ ಗಳಿಕೆ ಇಷ್ಟೊಂದಾ?

Jawan box office collection Day 17

ಬೆಂಗಳೂರು: ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ‘ಜವಾನ್’ (Jawan Box Office Collection) ಈ ವರ್ಷ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಬ್ಲಾಕ್‌ ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ. ಮುಂಬರುವ ವಾರದಲ್ಲಿ ಚಿತ್ರ ವಿಶ್ವಾದ್ಯಂತ 1000 ಕೋಟಿ ರೂ. ಗಡಿ ದಾಟಲಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ಸ್ 17ನೇ ದಿನದಂದು, ‘ಜವಾನ್’ ಭಾರತದಲ್ಲಿ ಒಟ್ಟು 546.58 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ವಿಶ್ವಾದ್ಯಂತ ಸುಮಾರು 966 ಕೋಟಿ. ರೂ. ಗಳಿಕೆ ಕಂಡಿದ್ದು, ಶೀಘ್ರದಲ್ಲೇ 1000 ಕೋಟಿ ರೂ. ಕ್ಲಬ್ ಸೇರಲಿದೆ.

ಶಾರುಖ್ ಖಾನ್‌ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್ ಈ ಸಿನಿಮಾ ನಿರ್ಮಿಸಿದೆ. ʼಜವಾನ್ʼ ಸಿನಿಮಾ ರಿಲೀಸ್ ಆಗಿ 11 ದಿನದಲ್ಲಿ ಶಾರುಖ್ ಅವರ ಪಠಾಣ್ ಹಾಗೂ ಸನ್ನಿ ಡಿಯೋಲ್ ಅವರ ಗದರ್ 2 ದಾಖಲೆಗಳನ್ನು ಬ್ರೇಕ್ ಮಾಡಿತ್ತು. 11 ದಿನದಲ್ಲಿ ಬರೋಬ್ಬರಿ 400 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಜವಾನ್.

ʼಜವಾನ್‌ʼ ಸಿನಿಮಾ ಸೆಪ್ಟೆಂಬರ್‌ 7ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ದೇಶಾದ್ಯಂತ 75 ಕೋಟಿ ರೂ. ಬಾಚಿಕೊಂಡಿತ್ತು. ಎರಡನೇ ದಿನ 80 ಕೋಟಿ ರೂ. ಗಳಿಸುವ ಜತೆಗೆ ಮೊದಲ ವಾರದಲ್ಲೇ 389 ಕೋಟಿ ರೂ. ಕಲೆಕ್ಷನ್‌ ಮಾಡಿದ ದಾಖಲೆ ಬರೆದಿತ್ತು. ಇದೀಗ ಎರಡನೇ ವಾರದಲ್ಲಿ 500 ಕೋಟಿ ರೂ. ದಾಟಿದೆ. ಕೆಲವೇ ದಿನಗಳಲ್ಲಿ ʼಜವಾನ್‌ʼ ಸಿನಿಮಾ ಸಾವಿರ ಕೋಟಿ ರೂ. ಕಲೆಕ್ಷನ್‌ ದಾಖಲೆ ಬರೆಯಲಿದೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Jawan Box Office Collection: ದೇಶದಲ್ಲಿ 500 ಕೋಟಿ ರೂ. ದಾಟಿದ ಜವಾನ್‌ ಕಲೆಕ್ಷನ್‌; ಕೆಜಿಎಫ್‌ 2 ದಾಖಲೆ ಉಡೀಸ್

ಅಟ್ಲೀ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜತೆಗೆ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ಮತ್ತು ಸಂಜಯ್ ದತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

Exit mobile version