Site icon Vistara News

Jeremy Renner | ಅಪಘಾತದ ನಂತರ ಮೊದಲ ಫೋಟೊ ಹಂಚಿಕೊಂಡ ಅವೆಂಜರ್ಸ್ ನಟ ಜರ್ಮಿ

ವಾಷಿಂಗ್ಟನ್: ಹೊಸ ವರ್ಷದ ದಿನ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವ ‘ಅವೆಂಜರ್ಸ್’ ಖ್ಯಾತಿಯ ನಟ ಜರ್ಮಿ ರೆನ್ನರ್ (Jeremy Renner) ಅವರು ಆಸ್ಪತ್ರೆಯಿಂದಲೇ ಅಭಿಮಾನಿಗಳಿಗಾಗಿ ವಿಶೇಷ ಪೋಸ್ಟ್ ಒಂದನ್ನು ಮಾಡಿದ್ದಾರೆ. ಹಾಸಿಗೆ ಮೇಲಿರುವ ತಮ್ಮ ಸೆಲ್ಫಿ ಹಂಚಿಕೊಂಡಿರುವ ಅವರು, ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇದನ್ನೂ ಓದಿ: Pathaan Film | ಜರ್ಮನಿಯಲ್ಲಿ ಪಠಾಣ್‌ ಸಿನಿಮಾಗೆ ಸಖತ್‌ ರೆಸ್ಪಾನ್ಸ್‌: ಬಹುತೇಕ ನಗರಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್!
ಜರ್ಮಿ ಅವರಿಗೆ ಅಪಘಾತ ಆಗಿರುವ ವಿಚಾರ ಹೊರಬೀಳುತ್ತಿದ್ದಂತೆಯೇ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಮೆಚ್ಚಿನ ನಟನಿಗಾಗಿ ದೇವರ ಮೊರೆ ಹೋಗಿದ್ದರು. ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದು ನೂರಾರು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳ ಹಾರೈಕೆಯನ್ನು ಕಂಡಿರುವ ನಟ, “ನಿಮ್ಮೆಲ್ಲರ ಪ್ರೀತಿಯ ಹಾರೈಕೆಗೆ ನನ್ನ ಧನ್ಯವಾದಗಳು. ಈಗ ನನಗೆ ಟೈಪ್ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಆದರೆ ನಿಮ್ಮೆಲ್ಲರಿಗೂ ನನ್ನ ಪ್ರೀತಿಯನ್ನು ಹಂಚುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.


ಜರ್ಮಿ ಹಂಚಿಕೊಂಡಿರುವ ಸೆಲ್ಫಿಯಲ್ಲಿ ಅವರ ಮುಖಕ್ಕೆ ಗಾಯಗಳಾಗಿರುವುದನ್ನು ಕಾಣಬಹುದು. ಈ ಫೋಟೋಗೆ ಅನೇಕ ಗಣ್ಯರು, ನಟ-ನಟಿಯರು ಹಾಗೂ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಶೀಘ್ರವೇ ಗುಣಮುಖವಾಗಿ ಬಂದು, ಮತ್ತಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಿ ಎಂದು ಹಾರೈಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ನವೆಡಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆಂದು ಜರ್ಮಿ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಹಿಮಾವೃತವಾಗಿದ್ದ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಅವರನ್ನು ಏರ್‌ಲಿಫ್ಟ್‌ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: Veerendra Heggade | ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ
ಜರ್ಮಿ ಅವರು 2012ರಲ್ಲಿ ಬಿಡುಗಡೆಯಾದ ಅವೆಂಜರ್ಸ್ ಸಿನಿಮಾದಲ್ಲಿ Hawkeye ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದರು. ಕ್ಯಾಪ್ಟನ್ ಅಮೆರಿಕ ಸೇರಿ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹರ್ಟ್ ಲಾಕರ್ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿಯೂ ಲಭಿಸಿದೆ.

Exit mobile version