ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾ (veera madakari) 2009ರಲ್ಲಿ ತೆರೆ ಕಂಡು ಹಿಟ್ ಕಂಡಿತ್ತು. ವೀರ ಮದಕರಿ ಸಿನಿಮಾ ರಾಜಮೌಳಿ (SS Rajamouli) ಅವರ ತೆಲುಗುವಿನ `ವಿಕ್ರಮಾರ್ಕುಡು’ (vikramarkudu) ರಿಮೇಕ್ ಆಗಿತ್ತು. ಆದರೆ ಕಿಚ್ಚನ ಅದ್ಭುತ ನಿರ್ದೇಶನದಲ್ಲಿ ಎಲ್ಲೂ ಇದು ರಿಮೇಕ್ ಸಿನಿಮಾ ಅನಿಸಲೇ ಇಲ್ಲ. ಅಪ್ಟಟ ಕನ್ನಡ ಸಿನಿಮಾನೇ ಆಗಿ ಬಿಟ್ಟಿತ್ತು. ವಿಶೇಷವಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಈ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಎಂ. ಎಂ. ಕೀರವಾಣಿ ಸಂಗೀತದ ಹಾಡುಗಳೂ ಜನಕ್ಕೆ ಇಷ್ಟ ಆದವು. ನಿರ್ಮಾಪಕ ದಿನೇಶ್ ಗಾಂಧಿ ದುಡ್ಡು ಹಾಕಿದ್ದ ಈ ಚಿತ್ರದ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಜೆರುಶಾ ಕ್ರಿಸ್ಟೋಫರ್ (Jerusha Christopher) ಕಾಣಿಸಿಕೊಂಡಿದ್ದರು. ಈಗ ಅವರು ನಾಯಕಿ ಆಗಿ ಮಿಂಚುತ್ತಿದ್ದಾರೆ. ಅವರು ನೀಡಿದ ಸಂದರ್ಶನದ ಕ್ಲಿಪ್ ಒಂದು ವೈರಲ್ ಆಗಿದೆ. ಈ ನಟಿ ‘ಧೂಮಂ’ ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ನಂಬಲೇ ಬೇಕು.
ಜೆರುಶಾ ಬೆಂಗಳೂರಿನವರೇ. ಪವನ್ ಕುಮಾರ್ ನಿರ್ದೇಶನದ, ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಸುದೀಪ್ ಮಗಳ ಪಾತ್ರ ಮಾಡಿದ್ದರು ಎನ್ನುವ ವಿಚಾರ ಇತ್ತೀಚೆಗೆ ರಿವೀಲ್ ಆಗಿದೆ. ಸಂದರ್ಶನ ಒಂದರಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದೆ.
‘ನಾನು ಕನ್ನಡದ ವೀರ ಮದಕರಿ ಸಿನಿಮಾದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರ ಮಾಡಿದ್ದೆ’ ಎಂದು ಜೆರುಶಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Spandana Vijay Raghavendra: ಸ್ಯಾಂಡಲ್‌ವುಡ್ ಸಾವಿನ ಸರಣಿಗೆ ಸ್ಪಂದನಾ ಸೇರ್ಪಡೆ; ಅಗಲಿದ ಯುವಜೀವಗಳು
ಜೆರುಶಾ ಅವರು 50ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ‘ನಾನು ಏನು ಮಾಡುತ್ತೇನೋ ಅದಕ್ಕೆ ನನ್ನ ತಂದೆ-ತಾಯಿ ಬೆಂಬಲವಾಗಿ ನಿಂತಿದ್ದಾರೆ. ಅವರು ನನ್ನ ಆಧಾರಸ್ತಂಭ’ ಎಂದು ಜೆರುಶಾ ಸಂತೋಷ ಹೊರಹಾಕಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದ ಹಾಗೇ ‘ಸುದೀಪ್ ಮಗಳ ಪಾತ್ರದಲ್ಲಿ ಜೆರುಶಾ ಕಾಣಿಸಿಕೊಂಡಿದ್ದರು. ಈಗ ಸುದೀಪ್ಗೆ ನಾಯಕಿ ಆಗಿ ಅವರು ಕಾಣಿಸಿಕೊಳ್ಳಬಹುದು. ಅಷ್ಟು ಸುಂದರವಾಗಿ ಬೆಳೆದಿದ್ದಾರೆ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
‘ಕಿಚ್ಚ 46’
ಕಿಚ್ಚ 46 ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್ ಧಾನು ಇತ್ತೀಚೆಗೆ ಘೋಷಿಸಿದ್ದರು. ಸಿನಿಮಾದ ಟೀಸರ್ (Kiccha 46 Teaser) ಬಿಡುಗಡೆಗೊಂಡಿದೆ. ಗಾಗಲೇ ಕಿಚ್ಚನ ಕೈಯಲ್ಲಿ ಮೂರು ಸಿನಿಮಾಗಳಿವೆ. ವರದಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನಲಾಗಿದೆ. ಭಾರಿ ಬಜೆಟ್ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.