ಬೆಂಗಳೂರು: ʻಅಶ್ವಿನಿ ನಕ್ಷತ್ರʼ ಖ್ಯಾತಿಯ ನಟ ಕಾರ್ತಿಕ್ ಜಯರಾಮ್ (Karthik Jayram) ಅಲಿಯಾಸ್ ಜೆಕೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸಖತ್ ಸುದ್ದಿಯಾಗಿತ್ತು. ಇತ್ತೀಚೆಗೆ ಅವರ ಬಗ್ಗೆ ಅಷ್ಟೇನೂ ಸುದ್ದಿಯಿರಲಿಲ್ಲ. ಆದರೀಗ ಜೆಕೆ ಸಿನಿಮಾ ಇಂಡಸ್ಟ್ರಿ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡುತ್ತಿದ್ದೇನೆ’ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಜೆಕೆ, ʻʻನನಗೆ ಬರುವ ಸಿನಿಮಾ ಅವಕಾಶಗಳನ್ನು ತಪ್ಪಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತ್ತು ಅದಕ್ಕೂ ಕಲ್ಲು ಹಾಕಿದರು. ದುಷ್ಟರಿಂದ ನಾನು ದೂರ ಇರುತ್ತೇನೆ. ಹಾಗಾಗಿ ಸಿನಿಮಾ ಇಂಡಸ್ಟ್ರಿ ನನಗೆ ಬೇಡ. ನನಗೆ ನೆಮ್ಮದಿ ಮುಖ್ಯ. ನನ್ನ ಮಾತು ಯಾರಿಗೆ ಅರ್ಥವಾಗಬೇಕು ಅವರಿಗೆ ಅರ್ಥ ಆದರೆ ಸಾಕು. ಇಂಡಸ್ಟ್ರಿಯಲ್ಲಿ 14ವರ್ಷದಿಂದ ಇದ್ದೇನೆ. ನಟನೆ ನನ್ನ ಫ್ಯಾಶನ್. ಈ ವೃತ್ತಿ ಇಲ್ಲ ಅಂದರೆ ಬೇರೆ ಇದೆ. ನಾನು ವಿದ್ಯಾವಂತʼʼ ಎಂದರು.
ನಟ ಜೆಕೆಗೆ, ಕನ್ನಡ- ಹಿಂದಿ ಕಿರುತೆರೆಯಲ್ಲಿ ಯಶಸ್ಸು ಸಿಕ್ಕ ಹಾಗೇ ಸಿನಿಮಾದಲ್ಲಿ ಸಿಗಲಿಲ್ಲ. ಆದರೆ, ಜೆಕೆ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಆದರೆ ಈಗ ಹಠಾತ್ತನೇ ಚಿತ್ರರಂಗ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ʻʻಈಗ ಸದ್ಯಕ್ಕೆ ನನ್ನ ಮುಂದಿರುವ ಸವಾಲೆಂದರೆ ‘ಐರಾವನ್’ ಸಿನಿಮಾದ ಬಿಡುಗಡೆ ಮತ್ತು ‘ಕಾಡ’ ಸಿನಿಮಾದ ಬಿಡುಗಡೆ ಇದೆರಡನ್ನೂ ಮುಗಿಸಿ ನಾನು ಮುಂದಿನ ಹೆಜ್ಜೆ ಇಡುತ್ತೇನೆ. ಈ ನಿರ್ಧಾರ ನನ್ನ ಪಾಲಿಗೆ ಬಹಳ ಕಠಿಣವಾದ ನಿರ್ಧಾರ. ಆದರೆ ಈ ನಿರ್ಧಾರವನ್ನು ನಾನು ತೆಗೆದುಕೊಳ್ಳಲೇ ಬೇಕಿದೆ ಎಂದಿದ್ದಾರೆ ಜೆಕೆ. ಅವರ ನಟನೆಯ ‘ಐರಾವನ್’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
ಜೆಕೆ ಹೇಳಿದ್ದೇನು?
ಇದನ್ನೂ ಓದಿ: Karthik Jayram: ಎಂಗೇಜ್ ಆಗಿರುವ ಕುರಿತು ಫೋಟೊ ಮೂಲಕ ಅಧಿಕೃತಗೊಳಿಸಿದ ಜೆಕೆ
ಇತೀಚೆಗೆ ನಟ ಜೆಕೆ ತಮ್ಮ ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿದ್ದರು. ಜೆಕೆ ಅವರು ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್‌ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದರು.