Site icon Vistara News

John Abraham : ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ಜಾನ್ ಅಬ್ರಾಹಂ; ಕಾರಣವೇನು ಗೊತ್ತಾ?

#image_title

ಮುಂಬೈ: ಶಾರುಖ್‌ ಖಾನ್‌ ನಟನೆಯ ʼಪಠಾಣ್‌ʼ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನೆಚ್ಚಿನ ನಟನನ್ನು ನಾಲ್ಕು ವರ್ಷಗಳ ನಂತರ ಹಿರಿತೆರೆಯಲ್ಲಿ ನೋಡುತ್ತಿರುವ ಅಭಿಮಾನಿಗಳು ಶಾರುಖ್‌ಗೆ ಜೈಕಾರ ಹೇಳುತ್ತಿದ್ದಾರೆ. ಈ ಮಧ್ಯೆಯೇ ಬಾಲಿವುಡ್‌ನ ನಟ ಜಾನ್‌ ಅಬ್ರಾಹಂ (John Abraham) ಕೂಡ ಟ್ರೆಂಡ್‌ ಆಗುತ್ತಿದ್ದಾರೆ.

ಇದನ್ನೂ ಓದಿ: Pathaan Movie: ʻಪಠಾಣ್‌ʼ ಸಕ್ಸೆಸ್‌ ಬೆನ್ನಲ್ಲೇ ಮನೆಯ ಗ್ಯಾಲರಿಗೆ ಬಂದು  ಅಭಿಮಾನಿಗಳತ್ತ ಕೈ ಬೀಸಿದ ಶಾರುಖ್‌!

ಪಠಾಣ್‌ ಸಿನಿಮಾ ನೋಡಿದವರಿಗೆ ಅದರಲ್ಲಿನ ʼಜಿಮ್ʼ ಬಗ್ಗೆ ತಿಳಿದಿರುತ್ತದೆ. ಸಿನಿಮಾದಲ್ಲಿನ ಜಿಮ್‌ ಹೆಸರಿನ ಪಾತ್ರಕ್ಕೆ ನಟ ಜಾನ್‌ ಅಬ್ರಾಹಂ ಬಣ್ಣ ಹಚ್ಚಿದ್ದಾರೆ. ಅತ್ಯಂತ ವಿಶೇಷವಾಗಿರುವ ಈ ಪಾತ್ರವನ್ನು ನಟ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು, ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅದೇ ಹಿನ್ನೆಲೆ ಜಾನ್‌ ಅವರ ಬಗ್ಗೆ ಟ್ವಿಟರ್‌ನಲ್ಲಿ ಭಾರೀ ಚರ್ಚೆಯೂ ನಡೆಯುತ್ತಿದ್ದು, ನಟ ಟ್ರೆಂಡ್‌ ಆಗುತ್ತಿದ್ದಾರೆ.‌

ಕೆಲವರಂತೂ ಜಾನ್‌ ಅಬ್ರಾಹಂಗೋಸ್ಕರವೇ ಪಠಾಣ್‌ ಸಿನಿಮಾ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಇನ್ನು ಕೆಲವರು, “ಶಾರುಖ್‌ ಖಾನ್‌ಗೋಸ್ಕರ ಪಠಾಣ್‌ ನೋಡಲು ಹೋದೆ. ಆದರೆ ವಾಪಸು ಬರುವಾಗ ನಾನು ಜಾನ್‌ ಅಬ್ರಾಹಂ ಫ್ಯಾನ್‌ ಆಗಿಹೋಗಿದ್ದೆ” ಎಂದು ಪೋಸ್ಟ್‌ಗಳನ್ನು ಹಾಕಲಾರಂಭಿಸಿದ್ದಾರೆ. ಟ್ವಿಟರ್‌ನಾದ್ಯಂತ ಜಾನ್‌ ಅಬ್ರಾಹಂ ಅವರ ಜಿಮ್‌ ಪಾತ್ರದ ಫೋಟೋಗಳೇ ಮಿಂಚಲಾರಂಭಿಸಿವೆ.

ಇದನ್ನೂ ಓದಿ: Pathaan Movie | ರಬಕವಿ ಪಟ್ಟಣದಲ್ಲಿ ಪಠಾಣ್‌ ಸಿನಿಮಾಕ್ಕೆ ಮುಂದುವರಿದ ವಿರೋಧ, ಪ್ರದರ್ಶನ ನಡೆಸದಂತೆ ತಾಕೀತು

ʼಪಠಾಣ್‌ʼ ಸಿನಿಮಾ ಬಾಲಿವುಡ್‌ ಸಿನಿಮಾಗಳಲ್ಲೇ ಹೊಚ್ಚ ಹೊಸದೊಂದು ದಾಖಲೆ ನಿರ್ಮಿಸಿದೆ. 100ಕ್ಕೂಅಧಿಕ ರಾಷ್ಟ್ರಗಳಲ್ಲಿ ತೆರೆ ಕಂಡಿರುವ ಈ ಸಿನಿಮಾ ಬಿಡುಗಡೆಯಾದ ಮೊದಲನೇ ದಿನವೇ 100 ಕೋಟಿಗೂ ಅಧಿಕ ಹಣ ಸಂಪಾದಿಸಿದೆ. ಸಿನಿಮಾದಲ್ಲಿ ಶಾರುಖ್‌ಗೆ ಜತೆಯಾಗಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

Exit mobile version