ಬೆಂಗಳೂರು: ಕಾಮಿಡಿ ಜಗತ್ತಿನ ದಂತಕಥೆ ನಟ ಚಾರ್ಲಿ ಚಾಪ್ಲಿನ್ (Charlie Chaplin) ಪುತ್ರಿ ಜೋಸೆಫಿನ್ ಚಾಪ್ಲಿನ್ (Josephine Chaplin) ಅವರು ಜುಲೈ 13 ರಂದು ಪ್ಯಾರಿಸ್‌ನಲ್ಲಿ ನಿಧನರಾದರು. ಚಾರ್ಲಿ ಚಾಪ್ಲಿನ್ ಅವರ 11 ಮಕ್ಕಳಲ್ಲಿ ಆರನೆಯವರಾಗಿದ್ದರು. ಜೋಸೆಫಿನ್ ಚಾಪ್ಲಿನ್ ಅವರಿಗೆ 74 ವರ್ಷ ವಯಸ್ಸಾಗಿತ್ತು.
1949ರ ಮಾರ್ಚ್ 28ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದರು. ಲೈಮ್‌ಲೈಟ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ತನ್ನ ತಂದೆಯ ಜತೆಯೇ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. 1952ರಲ್ಲೇ ಸಿನಿಮಾ ರಂಗ ಪ್ರವೇಶ ಮಾಡಿದ್ದ ಜೋಸೆಫಿನ್, ತಂದೆ ಚಾರ್ಲಿ ಚಾಪ್ಲಿನ್ ಜತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Ashish Sakharkar: ‘ಮಿಸ್ಟರ್ ಇಂಡಿಯಾ’ ಬಾಡಿ ಬಿಲ್ಡಿರ್ ಆಶಿಶ್ ನಿಧನ
Actrice en 'dochter van' Josephine Chaplin (74) overleden https://t.co/J1ydL1jGwB De Amerikaanse Chaplin, zelf ook actrice, overleed op 13 juli in Parijs. Ze werd 74 jaar. pic.twitter.com/x07caghWqt
— Joey van Maanen (@JoeyvanMaanen) July 22, 2023
ನ್ಯೂಟಿಸ್ ರೂಜ್ಸ್, ದಿ ಪೀಕ್ಸ್ ಆಫ್ ಝೆಲೆಂಗೋರಾ, ಜ್ಯಾಕ್ ದಿ ರಿಪ್ಪರ್, ದಿ ಬೇ ಬಾಯ್ ಮತ್ತು ಡೌನ್‌ಟೌನ್, ದಿ ಕ್ಯಾಂಟರ್ಬರಿ, ಎಸ್ಕೇಪ್ ಟು ದಿ ಸನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ದೂರದರ್ಶನಕ್ಕಾಗಿ ಹಲವಾರು ಸಿರೀಸ್‌ಗಳಲ್ಲಿ ನಟಿಸಿದ್ದಾರೆ. ಜೋಸೆಫಿನ್ ನಿಧನಕ್ಕೆ ಹಲವರು ಕಂಬನಿ ಕೂಡ ಮಿಡಿದಿದ್ದಾರೆ.