Site icon Vistara News

Jr. NTR : ತಂದೆ-ತಾಯಿಯಾದ ರಾಮ್‌ಚರಣ್‌, ಉಪಾಸನಾಗೆ ವಿಶೇಷವಾದ ಗಿಫ್ಟ್‌ ಕಳಿಸಿಕೊಟ್ಟ ಜೂ. ಎನ್‌ಟಿಆರ್

jr ntr gift for ram charan

ಹೈದರಾಬಾದ್: ಆರ್‌ಆರ್‌ಆರ್‌ ಸಿನಿಮಾ ಮೂಲಕ ವಿಶ್ವಕ್ಕೇ ಪರಿಚಿತರಾದ ರಾಮ್‌ಚರಣ್‌ ಅವರು ಇತ್ತೀಚೆಗೆ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಅವರ ಪತ್ನಿ ಉಪಾಸನಾ ಅವರು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಕ್ಲೀಂಕಾರಾ ಕೊನಿಡೆಲಾ ಎಂದು ನಾಮಕರಣ ಮಾಡಿದ್ದಾರೆ. ವಿಶೇಷವೆಂದರೆ ಈ ವಿಚಾರದಲ್ಲಿ ಅಭಿನಂದನೆ ತಿಳಿಸುವ ನಿಟ್ಟಿನಲ್ಲಿ ನಟ ಜೂ.ಎನ್‌ಟಿಆರ್‌ (Jr. NTR) ವಿಶೇಷವಾದ ಉಡುಗೊರೆಯೊಂದನ್ನು ರಾಮ್‌ಚರಣ್‌ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

ಹೌದು. ಉಪಾಸನಾ ಅವರಿಗೆ ಹೆರಿಗೆ ಆದ ವಿಚಾರ ಹೊರಬಿದ್ದ ತಕ್ಷಣವೇ ಜೂ. ಎನ್‌ಟಿಆರ್‌ ಅವರು ರಾಮ್‌ಚರಣ್‌ ಮತ್ತು ಉಪಾಸನಾಗೆ ಅಭಿನಂದನೆ ತಿಳಿಸಿದ್ದರು. ಇದೀಗ ಅವರು ಮತ್ತು ಅವರ ಪತ್ನಿ ಪ್ರಣತಿ ವಿಶೇಷವಾದ ಉಡುಗೊರೆಯನ್ನು ರಾಮ್‌ಚರಣ್‌ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಚಿನ್ನದ ನಾಣ್ಯವೊಂದರ ಮೇಲೆ ರಾಮ್‌ಚರಣ್‌, ಉಪಾಸನಾ ಮತ್ತು ಕ್ಲೀಂಕಾರಾ ಕೊನಿಡೆಲಾ ಹೆಸರನ್ನು ಕೊರೆಯಿಸಿ ಅದನ್ನು ರಾಮ್‌ಚರಣ್‌ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್‌ ಎಂದ ಮಗಳು! ಭಾವುಕರಾದ ತಂದೆ!
ರಾಮ್‌ಚರಣ್‌ ಮತ್ತು ಜೂ.ಎನ್‌ಟಿಆರ್‌ ಆರ್‌ಆರ್‌ಆರ್‌ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ಸಿನಿಮಾದಲ್ಲಿನ ಅವರ ಸ್ನೇಹ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ನಿಜ ಜೀವನದಲ್ಲೂ ಕೂಡ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅವರಿಬ್ಬರು ಜತೆಗಿರುವ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿವೆ.

ಜೂ.ಎನ್‌ಟಿಆರ್‌ ಅವರು ಆರ್‌ಆರ್‌ಆರ್‌ ಸಿನಿಮಾ ನಂತರ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕೊರಟಲ ಶಿವ ನಿರ್ದೇಶನದ ʼದೆವರʼ ಸಿನಿಮಾದಲ್ಲಿ ಜೂ.ಎನ್‌ಟಿಆರ್‌ ಕಾಣಿಸಿಕೊಳ್ಳಲಿದ್ದಾರೆ. ಅವರ 30ನೇ ಸಿನಿಮಾವಾಗಿರುವ ಇದು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಹಾಗೆಯೇ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌ ಅವರೊಂದಿಗೂ ಜೂ.ಎನ್‌ಟಿಆರ್‌ ಸಿನಿಮಾ ಒಂದನ್ನು ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರ ಜತೆಯಲ್ಲಿ ಬಾಲಿವುಡ್‌ನ ವಾರ್‌ 2 ಸಿನಿಮಾದಲ್ಲಿಯೂ ಕೂಡ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದತ್ತ ರಾಮ್‌ಚರಣ್‌ ಅವರು ಎಸ್‌.ಶಂಕರ್‌ ನಿರ್ದೇಶನದ ಗೇಮ್‌ ಚೇಂಜರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Exit mobile version