Site icon Vistara News

Devara Movie : ಜ್ಯೂ. ಎನ್​ಟಿಆರ್​ ಹುಟ್ಟುಹಬ್ಬಕ್ಕೆ ‘ದೇವರಾ’ ಫಸ್ಟ್ ಲುಕ್​​ ಪೋಸ್ಟರ್​ ರಿಲೀಸ್​​

Jr NTR's NTR 30 titled Devara

#image_title

ಜ್ಯೂನಿಯರ್ ಎನ್​ಟಿಆರ್​ ಅವರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದ ಅಧಿಕೃತ ಶೀರ್ಷಿಕೆ ಮತ್ತು ಅದರ ಮೊದಲ ಲುಕ್​​ನ ಪೋಸ್ಟರ್​ ಶುಕ್ರವಾರ ಬಿಡುಗಡೆಯಾಗಿದೆ. ಇಂದು ಮೇ 20, ಜ್ಯೂನಿಯರ್​ ಎನ್​ಟಿಆರ್​ 40ನೇ ವರ್ಷದ ಹುಟ್ಟುಹಬ್ಬ (NTR Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​ ಡೇ ನಿಮಿತ್ತ ಈ ಫಸ್ಟ್​ ಲುಕ್​ ಪೋಸ್ಟರ್​​ನ್ನು ಮೇ 19ರ ರಾತ್ರಿ ಬಿಡುಗಡೆ ಮಾಡಲಾಗಿದೆ. ಇನ್ನು ಸಿನಿಮಾಕ್ಕೆ ಎನ್​ಟಿಆರ್​ 30 ಎಂದು ತಾತ್ಕಾಲಿಕವಾಗಿ ಒಂದು ಶೀರ್ಷಿಕೆಯನ್ನಿಟ್ಟುಕೊಂಡು, ಇಷ್ಟು ದಿನ ಚಿತ್ರೀಕರಣ ಮಾಡಲಾಗುತ್ತಿತ್ತು. ಅದಕ್ಕೀಗ ‘ದೇವರಾ’ (Devara Movie)ಎಂದು ಅಧಿಕೃತ ಟೈಟಲ್​ ಕೊಡಲಾಗಿದೆ.

ಜ್ಯೂನಿಯರ್ ಎನ್​ಟಿಆರ್​ ದೇವರಾ ಸಿನಿಮಾದ ಮೊದಲ ಲುಕ್​ನ ಪೋಸ್ಟರ್​ ನೋಡಿದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಇದರಲ್ಲಿ ಜ್ಯೂ.ಎನ್​ಟಿಆರ್ ಅವರು ಅತ್ಯಂತ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪುಲುಂಗಿ-ಅದೇ ಬಣ್ಣದ ಶರ್ಟ್​. ಕೆದರಿದ ಕೂದಲು, ಮುಖದಲ್ಲಿ ಕ್ರೋಧ ತುಂಬಿಕೊಂಡು, ಎಡಗೈಯಲ್ಲಿ ರಕ್ತಸಿಕ್ತವಾದ ಈಟಿಯಂಥ ಆಯುಧ ಹಿಡಿದು, ಕಲ್ಲಿನ ಮೇಲೆ ಬಲಗಾಲನ್ನು ಇಟ್ಟು ನಿಂತಿದ್ದಾರೆ. ಅಲ್ಲಿ ಮೋಡಗಳು ಆವರಿಸಿದೆ. ನೀರೂ ಇದೆ. ಒಟ್ಟಾರೆ ಈ ಪೋಸ್ಟರ್​ ನೋಡಿದರೆ ಜ್ಯೂನಿಯರ್ ಎನ್​ಟಿಆರ್​ ಪಾತ್ರದ ಬಗ್ಗೆ ಸಖತ್ ಕುತೂಹಲ ಮೂಡುತ್ತಿದೆ. ಇದೊಂದು ಪಕ್ಕಾ ಆ್ಯಕ್ಷನ್​ ಚಿತ್ರದಂತೆ ಕಾಣಿಸುತ್ತಿದೆ. ಈ ಸಿನಿಮಾ 2024ರ ಏಪ್ರಿಲ್ 5ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂಗಳಲ್ಲಿ ಬಿಡುಗಡೆಯಾಗಲಿದೆ.

https://twitter.com/tarak9999/status/1659552462410498048?s=20

ಜ್ಯೂ.ಎನ್​​​ಟಿಆರ್ ಅಭಿನಯದ ಈ ದೇವರಾ ಸಿನಿಮಾವನ್ನು ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್​ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್​ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ. ಇದೀಗ ‘ದೇವರಾ’ ಮೂಲಕ ಒಂದಾಗಿದ್ದಾರೆ. ಇನ್ನು ದೇವರಾ ಸಿನಿಮಾದಲ್ಲಿ ಜ್ಯೂನಿಯರ್ ಎನ್​ಟಿಆರ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ.

ಈಗಾಗಲೇ ಇದಕ್ಕೆ ಎನ್​ಟಿಆರ್ 30 ಎಂದು ಹೆಸರಿಟ್ಟುಕೊಂಡು ಶೂಟಿಂಗ್ ಮಾಡಲಾಗುತ್ತಿದೆ. ಇಂದು ಜ್ಯೂನಿಯರ್ ಎನ್​ಟಿಆರ್​ ಬರ್ತ್​ ಡೇ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಪೋಸ್ಟರ್ ಹೊರಬರುವ ಸಾಧ್ಯತೆಯೂ ದಟ್ಟವಾಗಿದೆ. ಕೆಲ ದಿನಗಳ ಹಿಂದೆ ಹಿಂದಿ ನಟ ಸೈಫ್​ ಅಲಿ ಖಾನ್ ಅವರು ದೇವರಾ ಸಿನಿಮಾ ಸೆಟ್​ಗೆ ಭೇಟಿ ಕೊಟ್ಟಿದ್ದರು. ಅದರ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಸೈಫ್ ಅಲಿಖಾನ್​ ಭೇಟಿ ನೀಡಿದ್ದ ಕ್ಷಣ

https://twitter.com/NTRArtsOfficial/status/1648197277683691520?s=20
Exit mobile version