ಬೆಂಗಳೂರು: ಜ್ಯೂನಿಯರ್ ಎನ್‌ಟಿಆರ್ ಹೊಸ ವರ್ಷದಂದು ಅವರ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ಅವರ ಮುಂಬರುವ ಚಿತ್ರ ‘ದೇವರ’ ಹೊಸ ಪೋಸ್ಟರ್ ಔಟ್ ಆಗಿದೆ. ಜತೆಗೆ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಜನವರಿ 8ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ‘ದೇವರ’ ಹೊಸ ಪೋಸ್ಟರ್‌ನಲ್ಲಿ, ಜ್ಯೂನಿಯರ್ ಎನ್‌ಟಿಆರ್ ಹಡಗಿನ ಮೇಲೆ ಖಡಕ್ ಲುಕ್‌ನಲ್ಲಿ ನಿಂತಿರುವುದನ್ನು ಕಾಣಬಹುದು. ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ‘ದೇವರ’ ನಟಿ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಸೌತ್ ಚೊಚ್ಚಲ ಚಿತ್ರವಾಗಿದೆ.
ಸೈಫ್ ಚಿತ್ರದಲ್ಲಿ ಭೈರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ‘ದೇವರ‘ ಒಂದು ದೊಡ್ಡ-ಬಜೆಟ್ ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನರ್ ಆಗಿದ್ದು, ಕೊರಟಾಲ ಶಿವ ನಿರ್ದೇಶಿಸಲಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್‌ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ. ಎನ್‌ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ. ಇದೀಗ ‘ದೇವರ’ ಮೂಲಕ ಒಂದಾಗಿದ್ದಾರೆ. ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣಿಸುತ್ತಿದೆ. ಈ ಸಿನಿಮಾ 2024ರ ಏಪ್ರಿಲ್ 5ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Aditi Prabhudeva: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ
ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ. ‘ದೇವರ’ 2024 ಏಪ್ರಿಲ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಜ್ಯೂನಿಯರ್ ಎನ್‌ಟಿಆರ್ ಜತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್
ʻದೇವರʼ ಸಿನಿಮಾವಲ್ಲದೇ ಜ್ಯೂನಿಯರ್ ಎನ್‌ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರ ನಿರ್ಮಾಣ ಸಂಸ್ಥೆಯಾಗಿರುವ ಎನ್ ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಹಯೋಗದಲ್ಲಿ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ.