Site icon Vistara News

Jr NTR: ಗೋವಾದಲ್ಲಿ ಜ್ಯೂ. ಎನ್‌ಟಿಆರ್ ಸಿನಿಮಾ ಶೂಟಿಂಗ್‌; ಲೀಕ್‌ ಆಯ್ತು ದೃಶ್ಯ!

Jr NTR Devara leak

ಬೆಂಗಳೂರು: ಈ ನಡುವೆ ಟಾಲಿವುಡ್‌ ಸಿನಿಮಾಗಳ ಶೂಟಿಂಗ್‌ ದೃಶ್ಯಗಳು (Jr NTR) ಲೀಕ್‌ ಆಗುವುದು ಸರ್ವೇ ಸಾಮಾನ್ಯವಾಗಿದೆ. ರಾಮ್‌ಚರಣ್‌ ಅವರ `ಗೇಮ್‌ ಚೇಂಜರ್‌’ ಮೂರು ಬಾರಿ ಈ ಸಮಸ್ಯೆಗೆ ಗುರಿಯಾಯ್ತು. ಚಿತ್ರತಂಡ ಕೇಸ್‌ ಕೂಡ ದಾಖಲಿಸಿತ್ತು. ಆದರೀಗ ಜ್ಯೂನಿಯರ್ ಎನ್‌ಟಿಆರ್ ಅವರ ʻದೇವರʼ ಸಿನಿಮಾ(Devara: Part 1) ದೃಶ್ಯವೊಂದು ಲೀಕ್‌ ಆಗಿದೆ. ಗೋವಾದಲ್ಲಿ (Devara clip leaked) ಚಿತ್ರೀಕರಣ ನಡೆಸುತ್ತಿದ್ದು, ಅಭಿಮಾನಿಯೊಬ್ಬರು ದೂರದಿಂದ ತೆಗೆದ ಸೆಟ್‌ಗಳ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜ್ಯೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕೊರಟಾಲ ಶಿವ (Koratala Siva) ನಿರ್ದೇಶನದ ದೇವರ: ಭಾಗ 1 ಸಿನಿಮಾ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಗೋವಾದಲ್ಲಿ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಅಭಿಮಾನಿಯೊಬ್ಬರು ಗೋವಾದಲ್ಲಿ ಹೊರಾಂಗಣದಲ್ಲಿ ತೆಗೆದ ಜ್ಯೂನಿಯರ್ ಎನ್‌ಟಿಆರ್ ಅವರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ನಟ ಅಲೆಯ ಹತ್ತಿರ ನಡೆದಾಡುವುದನ್ನು ನೋಡಬಹುದು. ಸೋರಿಕೆಯಾದ ವೀಡಿಯೊ ಹೆಚ್ಚು ಏನನ್ನೂ ಬಹಿರಂಗಪಡಿಸದಿದ್ದರೂ, ಬಹುತೇಕ ಸಿನಿಮಾದ ದೃಶ್ಯಗಳು ಸಮುದ್ರದ ಬಳಿ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: Banners Of Jr NTR: ಜ್ಯೂ. ಎನ್‌ಟಿಆರ್‌ ಬ್ಯಾನರ್, ಫ್ಲೆಕ್ಸ್ ಕಿತ್ತು ಬಿಸಾಕಿ ಎಂದ ಬಾಲಯ್ಯ!

ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ‘ದೇವರ’ ತಂಡ ಗೋವಾದಲ್ಲಿದೆ. ಅಲ್ಲಿರುವಾಗಲೇ ಒಂದು ಹಾಡಿನ ಚಿತ್ರೀಕರಣವನ್ನೂ ಮಾಡಲಿದ್ದಾರೆ ನಿರ್ದೇಶಕರು. 2023ರಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಹೆಚ್ಚಾಗಿ ಹೈದರಾಬಾದ್ ಮತ್ತು ಗೋವಾದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್‌ಗಳಲ್ಲಿ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ. ಬಹುತೇಕ ಚಿತ್ರೀಕರಣವು ಡಿಸೆಂಬರ್‌ನೊಳಗೆ ಮುಕ್ತಾಯಗೊಂಡಿದೆ, ಕೆಲವು ಪ್ರಮುಖ ದೃಶ್ಯಗಳು ಮತ್ತು ಹಾಡುಗಳ ಚಿತ್ರೀಕರಣ ಮಾತ್ರ ಉಳಿದಿದೆ.

ಮೊದಲ ಭಾಗಕ್ಕೆ ‘ದೇವರ: ಭಾಗ 1’ ಎಂದು ಹೆಸರಿಡಲಾಗಿದೆ. ಈ ಮುಂಚೆ ಚಿತ್ರತಂಡ ಏಪ್ರಿಲ್ 5ರಂದು ಸಿನಿಮಾ ರಿಲೀಸ್‌ ಡೇಟ್‌ವನ್ನು ಘೋಷಿಸಿತ್ತು. ಜ್ಯೂನಿಯರ್‌ ಎನ್‌ಟಿಆರ್‌, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್​ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್​ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.

ಇದನ್ನೂ ಓದಿ: Jr NTR: ಹೊಸ ವರ್ಷಕ್ಕೆ ಪೋಸ್ಟರ್‌ ಹಂಚಿಕೊಂಡು ಗುಡ್‌ನ್ಯೂಸ್‌ ಕೊಟ್ಟ ಜ್ಯೂನಿಯರ್‌ ಎನ್‌ಟಿಆರ್

‘ದೇವರ’ ಸಿನಿಮಾದಲ್ಲಿ ಜ್ಯೂನಿಯರ್ ಎನ್​ಟಿಆರ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್​ ಚಿತ್ರದಂತೆ ಕಾಣಿಸುತ್ತಿದೆ. ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ.

ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Exit mobile version