Site icon Vistara News

Jr NTR: ಆಸ್ಕರ್‌ನಿಂದ ಹಿಂತಿರುಗಿದ ಬಳಿಕ ಜ್ಯೂ. ಎನ್‌ಟಿಆರ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ

Jr NTR Welcome From Oscars By Fans

ಬೆಂಗಳೂರು: ತೆಲುಗು ಸೂಪರ್‌ಸ್ಟಾರ್ ಜ್ಯೂನಿಯರ್‌ ಎನ್‌ಟಿಆರ್ (Jr NTR) ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಾರ್ಚ್‌ 14ರ ತಡರಾತ್ರಿ ಹೈದರಾಬಾದ್‌ಗೆ ಮರಳಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ 95 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ RRR ಹಾಡು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪತ್ನಿ ಲಕ್ಷ್ಮಿ ಪ್ರಣತಿ ಅವರೊಂದಿಗೆ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವಾಗ ಅವರ ಅಭಿಮಾನಿಗಳು ಮುತ್ತಿಗೆ ಹಾಕಿ ಸಂತಸ ಹೊರಹಾಕಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಜ್ಯೂನಿಯರ್‌ ಎನ್‌ಟಿಆರ್ ಕಾರಿನ ಹತ್ತಿರ ತೆರಳುತ್ತಿದ್ದಂತೆ ತಮ್ಮ ನೆಚ್ಚಿನ ನಟನ ದರ್ಶನ ಪಡೆಯಲು ಬಂದಿದ್ದ ಅವರ ಅಭಿಮಾನಿಗಳು ಸುತ್ತುವರಿದಿದ್ದರು. ನಟ ತನ್ನ ಕಾರಿನ ಮೇಲೆ ನಿಂತು, ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಮಾಧ್ಯಮದವರೊಂದಿಗೆ ನಟ ಮಾತನಾಡಿʻʻ ಆರ್‌ಆರ್‌ಆರ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನೋಡುವುದು ಅತ್ಯುತ್ತಮ ಕ್ಷಣವಾಗಿದೆ. ಆರ್‌ಆರ್‌ಆರ್‌ ಸಿನಿಮಾವನ್ನು ಪ್ರೋತ್ಸಾಹಿಸಿದ್ದಕ್ಕಾಗಿ, ನಾನು ಪ್ರತಿಯೊಬ್ಬ ಭಾರತೀಯನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಗೆದ್ದಿರುವ ಈ ಪ್ರಶಸ್ತಿ (ಆಸ್ಕರ್) ಪ್ರೇಕ್ಷಕರು ಮತ್ತು ಚಿತ್ರರಂಗದ ಪ್ರೀತಿಯಿಂದ ಮಾತ್ರ ಸಾಧ್ಯವಾಗಿದೆʼʼಎಂದರು.

ಇದನ್ನೂ ಓದಿ: Oscars 2023 : ನಾಟು ನಾಟು ಹಾಡಿಗೆ ಆಸ್ಕರ್​ ಸಿಕ್ಕಿದ್ದಲ್ಲ, ಖರೀದಿಸಿದ್ದು; ನಟಿ ಜಾಕ್ವೆಲಿನ್​ ಗೆಳೆಯನ ಕುಹಕ

ಜ್ಯೂನಿಯರ್‌ ಎನ್‌ಟಿಆರ್‌ ಪ್ರಶಸ್ತಿಯ ಬಗ್ಗೆ ಮಾತನಾಡಿ ʻʻಇದು ಕೇವಲ ಆರ್‌ಆರ್‌ಆರ್‌ಗೆ ಮಾತ್ರವಲ್ಲ, ಒಂದು ದೇಶವಾಗಿ ಭಾರತಕ್ಕೆ ಸಂದ ಗೆಲುವು. ಇದು ಕೇವಲ ಆರಂಭ ಎಂದು ನಾನು ನಂಬುತ್ತೇನೆ. ಭಾರತೀಯ ಚಿತ್ರರಂಗ ಎಷ್ಟು ದೂರ ಹೋಗಬಹುದು ಎಂಬುದನ್ನು ನಮಗೆ ತೋರಿಸುತ್ತಿದೆ. ಕೀರವಾಣಿ ಮತ್ತು ಚಂದ್ರಬೋಸ್‌ಗೆ ಅಭಿನಂದನೆಗಳು. ಖಂಡಿತವಾಗಿಯೂ ರಾಜಮೌಳಿ ಎಂಬ ಮಾಸ್ಟರ್ ಸ್ಟೋರಿ ಟೆಲ್ಲರ್ ಇಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಭಾರತಕ್ಕೆ ಮತ್ತೊಂದು ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟಿರುವ ‘ದಿ ಎಲಿಫೆಂಟ್ ವಿಸ್ಪರರ್ಸ್’ ತಂಡವನ್ನು ನಾನು ಅಭಿನಂದಿಸುತ್ತೇನೆ” ಎಂದು ಹೇಳಿದರು.

Exit mobile version