Site icon Vistara News

Jugal bandi Trailer : ಕಾಂತಾರ ಖ್ಯಾತಿಯ ಮಾನಸಿ ಸುಧೀರ್‌ ನಟನೆಯ ʼಜುಗಲ್‌ ಬಂದಿʼ ಟ್ರೇಲರ್‌ ರಿಲೀಸ್‌

#image_title

ಬೆಂಗಳೂರು: ಕಾಂತಾರ ಸಿನಿಮಾದ ಪ್ರತಿ ಪಾತ್ರಗಳೂ ಕೂಡ ಕನ್ನಡಿಗರ ಮನ ಮುಟ್ಟಿವೆ. ಅದರಲ್ಲೂ ರಿಷಭ್‌ಗೆ ತಾಯಿಯಾಗಿ ನಟಿಸಿದ ಮಾನಸಿ ಸುಧೀರ್‌ ಅವರಿಗೆ ಮೆಚ್ಚುಗೆಯ ಮಳೆಯೇ ಸುರಿದಿದೆ. ಇದೀಗ ಮಾನಸಿ ಅವರು ʼಜುಗಲ್‌ ಬಂದಿʼ ಸಿನಿಮಾದ ಪ್ರಮುಖ ಪಾತ್ರವಾಗಿ ನಟಿಸುತ್ತಿದ್ದು, ಸಿನಿಮಾದ ಟ್ರೇಲರ್‌ (Jugal bandi Trailer) ಬಿಡುಗಡೆಯಾಗಿದೆ.

ಇದನ್ನೂ ಓದಿ: Rishab Shetty | ಹ್ಯಾಷ್‌ ಟ್ಯಾಗ್‌ ಮ್ಯಾಗಜಿನ್‌ ಮುಖಪುಟದಲ್ಲಿ ರಿಷಬ್ ಶೆಟ್ಟಿ: ವೈರಲ್‌ ಆಯ್ತು ವಿಡಿಯೊ!
ಹೊಸಬರ ವಿನೂತನ ಪ್ರಯತ್ನವಿರುವ ‘ಜುಗಲ್ ಬಂದಿ’ ಸಿನಿಮಾ ಸಸ್ಪೆನ್ನನ, ಥ್ರಿಲ್ಲರ್‌ ಕಥಾಹಂದರವನ್ನು ಹೊಂದಿದೆ. ದಿವಾಕರ ಡಿಂಡಿಮ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದೆ. ಸಿನಿಮಾ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಹೆಜ್ಜೆ ಇಡಲಿದ್ದು, ಅದಕ್ಕೂ ಮುನ್ನ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ ಚಿತ್ರತಂಡ.‌


ಡಿಂಡಿಮ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರ ಹಲವು ಕಥೆಗಳ ಜುಗಲ್ ಬಂದಿ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆ ಒಳಗೊಂಡ ಟ್ರೇಲರ್ ತುಣುಕು ಸಿನಿಮಾದ ಝಲಕ್ ಕಟ್ಟಿಕೊಟ್ಟಿದೆ. ಚಿತ್ರದಲ್ಲಿ ಮಾನಸಿ ಸುಧೀರ್ ಜತೆಗೆ ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ ಹಾಗೂ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್ ಜನುಮದಿನದಂದೇ ಪುಷ್ಪ 2 ಸಿನಿಮಾದ ಟೀಸರ್‌ ರಿಲೀಸ್‌?
ದಿವಾಕರ ಡಿಂಡಿಮ ಅವರು ನಿರ್ದೇಶನದ ಜತೆಗೆ ಡಿಂಡಿಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯ ಬರೆದಿದ್ದಾರೆ.

Exit mobile version