Site icon Vistara News

Junior Mehmood: ‘ಮೇರಾ ನಾಮ್ ಜೋಕರ್’ ಖ್ಯಾತಿಯ ನಟ ಜೂನಿಯರ್ ಮೆಹಮೂದ್ ಇನ್ನಿಲ್ಲ

Junior Mehmood

ಬೆಂಗಳೂರು; ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ, ಜೂನಿಯರ್ ಮೆಹಮೂದ್ (Junior Mehmood) ಎಂದೇ ಜನಪ್ರಿಯರಾಗಿದ್ದ ಹಿರಿಯ ನಟ ಮತ್ತು ಚಲನಚಿತ್ರ ನಿರ್ದೇಶಕ ನಯೀಮ್ ಸಯ್ಯದ್ ನಿನ್ನೆ (ಡಿ.7) ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ನಟ ಐದು ದಶಕಗಳ ಕಾಲ ತನ್ನ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಎರಡು ವಾರಗಳ ಹಿಂದೆ, 4ನೇ ಹಂತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಎಂದು ವರದಿಯಾಗಿದೆ.

ಬ್ರಹ್ಮಚಾರಿ (1968), ಮೇರಾ ನಾಮ್ ಜೋಕರ್, ಪರ್ವಾರೀಶ್ ಮತ್ತು ದೋ ಔರ್ ದೋ ಪಾಂಚ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಸಂಜೀವ್ ಕುಮಾರ್, ಹಿರಿಯ ನಟ ಬಾಲರಾಜ್ ಸಾಹ್ನಿ ಮತ್ತು ಇಂದ್ರಾಣಿ ಮುಖರ್ಜಿ ನಟಿಸಿದ ‘ನೌನಿಹಾಲ್’ ಚಿತ್ರದ ಮೂಲಕ ಅವರು ಬಾಲ ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1967ರಲ್ಲಿ ಬಿಡುಗಡೆಯಾದ ‘ನೌನಿಹಾಲ್’ನಿಂದ ಇಲ್ಲಿಯವರೆಗೆ, ನಟ ಜೂನಿಯರ್ ಮೆಹಮೂದ್ ಎಂದೇ ಚಿರಪರಿಚಿತರು.

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವುದರ ಜತೆಗೆ, ನಟ ಹಲವಾರು ಮರಾಠಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಗುರುತು ಹಿಡಿಯದ ಸ್ಥಿತಿಯಲ್ಲಿರುವ ಜೂನಿಯರ್ ಮೆಹಮೂದ್ ಅವರನ್ನು ಹಾಸ್ಯನಟ ಜಾನಿ ಲಿವರ್ ಭೇಟಿ ಮಾಡಿದ್ದರು.

ಇದನ್ನೂ ಓದಿ: Death News: ರಾಮದುರ್ಗ ಗಂಗಮ್ಮ ನಿಧನ

ಹಿರಿಯ ನಟ ಜೀತೇಂದ್ರ ಮತ್ತು ಸಚಿನ್ ಪಿಲ್ಗಾಂವ್ಕರ್ ಅವರೊಂದಿಗೆ ಹಲವಾರು ಚಲನಚಿತ್ರಗಳಲ್ಲಿ ಜೂನಿಯರ್ ಮೆಹಮೂದ್ ಕೆಲಸ ಮಾಡಿದ್ದಾರೆ. ಸಚಿನ್ ಮತ್ತು ಜೂನಿಯರ್ ಮೆಹಮೂದ್ ‘ಬಚ್ಪನ್’, ‘ಗೀತ್ ಗಾತಾ ಚಲ್’ ಮತ್ತು ‘ಬ್ರಹ್ಮಚಾರಿ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಚಲನಚಿತ್ರಗಳ ಹೊರತಾಗಿ, ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಟೇಜ್ ಶೋಗಳ ಭಾಗವಾಗಿದ್ದರು.

Exit mobile version