Site icon Vistara News

Junior NTR | ಜೂ. ಎನ್‌ಟಿಆರ್‌ 30ನೇ ಸಿನಿಮಾಗೆ ಇಬ್ಬರು ಸೂಪರ್‌ ಸ್ಟಾರ್‌ಗಳು ಎಂಟ್ರಿ?

Junior NTR #NTR30

ಬೆಂಗಳೂರು : ಜೂನಿಯರ್‌ ಎನ್‌ಟಿಆರ್‌ (Junior NTR ) ಹೊಸ ವರ್ಷಕ್ಕೆ ತಮ್ಮ 30ನೇ ಸಿನಿಮಾ ರಿಲೀಸ್‌ ಡೇಟ್‌ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ಸಿನಿಮಾದಲ್ಲಿ ಪ್ರಮುಖ ನಟರಿಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಜೂ. ಎನ್‌ಟಿಆರ್‌ ನಟನೆಯ ಮೂವತ್ತನೇ ಸಿನಿಮಾದಲ್ಲಿ ಮಲಯಾಳಂನ ಸ್ಟಾರ್ ನಟ ಮೋಹನ್‌ಲಾಲ್ ಹಾಗೂ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆಯ ಮುಂಚೆ ಈ ಸಿನಿಮಾವನ್ನು ಘೋಷಿಸಿದ್ದರು. ಮೋಹನ್‌ಲಾಲ್ ಹಾಗೂ ಜೂ. ಎನ್‌ಟಿಆರ್ ಈ ಹಿಂದೆಯೂ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ‘ಜನತಾ ಗ್ಯಾರೇಜ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಮತ್ತೊಮ್ಮೆ ಈ ತಾರಾ ಜೋಡಿ ಒಟ್ಟಿಗೆ ನಟಿಸುತ್ತಿದೆ.

ಇದನ್ನೂ ಓದಿ | Junior NTR | ಹೊಸ ವರ್ಷಕ್ಕೆ ಸಂತಸ ಸುದ್ದಿ ಹಂಚಿಕೊಂಡ ಜೂ. ಎನ್‌ಟಿಆರ್‌!

ಸೈಫ್ ಅಲಿ ಖಾನ್ ಈಗಾಗಲೇ ಪ್ರಭಾಸ್ ಜತೆ ‘ಆದಿಪುರುಷ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಜೂ.ಎನ್‌ಟಿಆರ್‌ ಜತೆಗೂ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೂ. ಎನ್‌ಟಿಆರ್‌ ರ 30ನೇ ಸಿನಿಮಾದ ಬಳಿಕ 31ನೇ ಸಿನಿಮಾವನ್ನು ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಜತೆಗೆ ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. NTR 30 ಏಪ್ರಿಲ್ 5, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ. ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ? ಚೇತರಿಕೆಗೆ ಕೋಟ್ಯಂತರ ಭಕ್ತರ ಪ್ರಾರ್ಥನೆ

Exit mobile version