Site icon Vistara News

Junior NTR | ಹೊಸ ವರ್ಷಕ್ಕೆ ಸಂತಸ ಸುದ್ದಿ ಹಂಚಿಕೊಂಡ ಜೂ. ಎನ್‌ಟಿಆರ್‌!

Junior NTR

ಬೆಂಗಳೂರು : ಜೂನಿಯರ್‌ ಎನ್‌ಟಿಆರ್‌ (Junior NTR ) ಹೊಸ ವರ್ಷಕ್ಕೆ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಎನ್‌ಟಿಆರ್ ಅವರ 30ನೇ ಸಿನಿಮಾ ಶೂಟಿಂಗ್ ಆರಂಭವಾಗುವಕ್ಕಿಂತ ಮುಂಚೆಯೇ ಅದರ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದ್ದಾರೆ.

ಮುಂದಿನ ತಿಂಗಳು ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಈ ಸಿನಿಮಾ ಏಪ್ರಿಲ್ 5, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ. ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಜೂನಿಯರ್ ಎನ್‌ಟಿಆರ್, ಇತ್ತೀಚೆಗೆ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್‌ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್‌, ಜ್ಯೂ.ಎನ್‌ಟಿಆರ್‌ ಭಾಗಿ

NTR 30 ಹೊರತುಪಡಿಸಿ, ನಟ ಪ್ರಶಾಂತ್ ನೀಲ್ ಜತೆಗೆ NTR ಅವರು 31 ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್‌ ನಟ ಆಮೀರ್‌ ಖಾನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ವರದಿ ಪ್ರಕಾರ, ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಹೆಸರಿಡದ ಈ ಚಿತ್ರಕ್ಕೆ ಆದಷ್ಟು ಬೇಗ ಶೀರ್ಷಿಕೆ ಹಾಗೂ ಉಳಿದ ಮಾಹಿತಿ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Appu Namana | ಕರ್ನಾಟಕ ರತ್ನ ಪುನೀತ್‌ ಅವರ ಪ್ರೀತಿಯ ಗೆಳೆಯ ಜ್ಯೂನಿಯರ್‌ ಎನ್‌ಟಿಆರ್‌ ಆಗಮನ

Exit mobile version