Site icon Vistara News

Junior NTR: ಪುಷ್ಪ-2 ಸೆಟ್‌ಗೆ ಭೇಟಿ ಕೊಟ್ಟ ಜ್ಯೂನಿಯರ್‌ ಎನ್‌ಟಿಆರ್‌!

Junior NTR visits sets of Pushpa 2

ಬೆಂಗಳೂರು: ಜ್ಯೂನಿಯರ್‌ ಎನ್‌ಟಿಆರ್‌ (Junior NTR) ಶೀಘ್ರದಲ್ಲೇ ವಾರ್ -2 ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ (ಆರ್‌ಎಫ್‌ಸಿ) ಸೆಟ್‌ನಲ್ಲಿ ನಟ ಅಲ್ಲು ಅರ್ಜುನ್‌ ಮತ್ತು ಸುಕುಮಾರ್ ಅವರನ್ನು ಜ್ಯೂನಿಯರ್‌ ಎನ್‌ಟಿಆರ್‌ ಭೇಟಿ ಮಾಡಿದ್ದಾರೆ. ಪುಷ್ಪ-2ನಲ್ಲಿ ಅಲ್ಲು ಶೂಟಿಂಗ್‌ ವೇಳೆ ಜ್ಯೂನಿಯರ್‌ ಎನ್‌ಟಿಆರ್‌ ಭೇಟಿ ಕೊಟ್ಟ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪುಷ್ಪ 2 ಸೆಟ್‌ಗೆ ಜ್ಯೂನಿಯರ್‌ ಎನ್‌ಟಿಆರ್‌ ಭೇಟಿಯ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ. ಫೋಟೊ ವೈರಲ್‌ ಆಗುತ್ತಿದ್ದಂತೆ ಅವರ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ನಟ ಬೂದು ಬಣ್ಣದ ಪ್ಯಾಂಟ್‌ನೊಂದಿಗೆ ಬಿಳಿ ಶರ್ಟ್ ಧರಿಸಿದ್ದರು. ಬ್ರೇಕ್‌ ಬಳಿಕ ಪುಷ್ಪ 2 ಚಿತ್ರೀಕರಣ ಸದ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಚಿತ್ರತಂಡ ಕೆಲವು ಹೈ- ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಚಿತ್ರೀಕರಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ

ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ನಟನೆಯ ಪುಷ್ಪ 2: ದಿ ರೂಲ್‌ (Pushpa 2: The Rule) ಸಿನಿಮಾ ಬಿಡುಗಡೆಗೆ ಮುನ್ನವೇ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಅದರಲ್ಲೂ, March 7 ಪುಷ್ಪ 2 (Pushpa 2) ಸೀಕ್ವೆಲ್‌ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಅಲ್ಲು ಅರ್ಜುನ್‌ ಅವರ ವಿಭಿನ್ನ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್‌ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Junior NTR: ರಾಮ್‌ಚರಣ್‌ ಬರ್ತ್‌ಡೇ ಪಾರ್ಟಿಗೆ ಜ್ಯೂ. ಎನ್‌ಟಿಆರ್‌ ಗೈರು; ಇಬ್ಬರ ನಡುವೆ ಬಿರುಕು ಮೂಡಿದ್ಯಾಕೆ?

ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಜ್ಯೂನಿಯರ್‌ ಎನ್‌ಟಿಆರ್‌

ಜ್ಯೂನಿಯರ್‌ ಎನ್‌ಟಿಆರ್‌ ಪ್ರಸ್ತುತ ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜಾಹ್ನವಿ ಕಪೂರ್ ಈ ಸಿನಿಮಾದ ನಾಯಕಿಯಾಗಿದ್ದಾರೆ. 2024ರ ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.

ಅನಿರುದ್ಧ ಸಂಗೀತ ನಿರ್ದೇಶಕರಾಗಿದ್ದು, ರತ್ನವೇಲು ಛಾಯಾಗ್ರಹಣ ಮಾಡಲಿದ್ದಾರೆ. ನಂದಮೂರಿ ಕಲ್ಯಾಣರಾಮ್ ಪ್ರಸ್ತುತಪಡಿಸಿದ್ದು, ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಡಿಯಲ್ಲಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿ ಕೃಷ್ಣ ಕೆ ನಿರ್ಮಿಸಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಷ್ಟೇ ಅಲ್ಲದೇ ಪ್ರಶಾಂತ್‌ ನೀಲ್‌ ಜತೆ NTR 31 ಸಿನಿಮಾ ಕೂಡ ನಟ ಹೊಂದಿದ್ದಾರೆ.

Exit mobile version