ಬೆಂಗಳೂರು: ‘ಆರ್‌ಆರ್‌ಆರ್’ ಚಿತ್ರದಲ್ಲಿ ‘ಕೊಮರಂ ಭೀಮ್’ ಪಾತ್ರದಲ್ಲಿ ನಟಿಸಿರುವ ಜ್ಯೂನಿಯರ್ ಎನ್‌ಟಿಆರ್ (Junior NTR) ಅವರು ಮಾರ್ಚ್ 12ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿ 2023ಗಾಗಿ (Junior NTR) ಅಮೆರಿಕಾಕ್ಕೆ ತೆರಳಿದ್ದಾರೆ. ಮಾರ್ಚ್ 6ರಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ನಾಟು ನಾಟು…ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಇತ್ತೀಚೆಗೆ ಅಮೆರಿಕದಲ್ಲಿ ಚಿತ್ರ ಮರು-ಬಿಡುಗಡೆಯಾಗಿದ್ದು, ಜೂ. ಎನ್‌ಟಿಆರ್ ಹೊರತುಪಡಿಸಿ ಚಿತ್ರತಂಡ ಭಾಗಿಯಾಗಿತ್ತು. ನಟನ ಅನುಪಸ್ಥಿತಿಯಿಂದ ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಸೋಷಿಯಲ್ ಮೀಡಿಯಾ ಮೂಲಕ ಬೇಸರ ಹೊರಹಾಕಿದ್ದರು. ಇದೀಗ ನಟ ಅಮೆರಿಕಾಕ್ಕೆ ತೆರಳಿದ್ದಾರೆ.
ಇವೆಂಟ್ ಬಳಿಕ ಜ್ಯೂನಿಯರ್ ಎನ್‌ಟಿಆರ್ ಹೈದರಾಬಾದ್‌ನಲ್ಲಿ ಕೊರಟಾಲ ಶಿವ ಅವರೊಂದಿಗೆ ತಮ್ಮ ಬಹುನಿರೀಕ್ಷಿತ ಚಿತ್ರ NTR30 ಸಿನಿಮಾವನ್ನು ಪ್ರಾರಂಭಿಸಲಿದ್ದಾರೆ. NTR31 ಸಿನಿಮಾವನ್ನೂ ‘KGF2’ ಮತ್ತು ‘ಸಲಾರ್’ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಪ್ರಾರಂಭಿಸಲಿದ್ದಾರೆ. NTR30ಯಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಇದು ಜಾನ್ವಿ ಅವರ ಮೊದಲ ತೆಲುಗು ಸಿನಿಮಾವಾಗಿದೆ.
ಇದನ್ನೂ ಓದಿ: JUNIOR NTR | ನಟ ಜೂ.ಎನ್‌ಟಿಆರ್ ಭೇಟಿಯಾದ ಟೀಮ್ ಇಂಡಿಯಾ ಆಟಗಾರರು; ಫೋಟೊ ವೈರಲ್
ಜಾನ್ವಿ ಕಪೂರ್ ಲುಕ್
ಜಾನ್ವಿ ಅವರ ಜನುಮದಿನ ಪ್ರಯುಕ್ತವಾಗಿ ಫಸ್ಟ್ ಲುಕ್ ಬಿಡುಗಡೆಗೊಂಡಿದೆ, ತಮಿಳಿನ ಸಂಗೀತ ಸಂಯೋಜಕ ಅನಿರುದ್ಧ ರವಿಚಂದರ್ ಸಂಗೀತವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ನಿರ್ಮಾಪಕರು ಶೀಘ್ರದಲ್ಲೇ ಚಿತ್ರದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ.