Site icon Vistara News

Raj B Shetty: ಡೂಪ್ಲಿಕೇಟ್ ಮಾರಿಗೆ ದಾರಿಬಿಡಿ; ಕುದುರೆ ಏರಿ ಬಂದ ಜ್ಯೂನಿಯರ್‌ ʻಟೋಬಿʼ!

junior Raj B Shetty

ಬೆಂಗಳೂರು: ರಾಜ್‌ ಬಿ ಶೆಟ್ಟಿ (Raj B Shetty) ಅವರ ಟೋಬಿ ಸಿನಿಮಾ (Toby Movie) ಆಗಸ್ಟ್‌ 25ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಸಿನಿಮಾದಲ್ಲಿನ ರಾಜ್‌ ಬಿ ಶೆಟ್ಟಿ ಅವರ ಲುಕ್‌ ಕಂಡು ಪ್ರೇಕ್ಷಕರು ಹಾಡಿ ಹೊಗಳಿದ್ದರು. ಅದರಲ್ಲಿಯೂ ರಾಜ್‌ ಬಿ ಶೆಟ್ಟಿ ಅವರ ಮೂಗುತಿ ಪ್ರಮುಖ ಹೈಲೈಟ್‌ ಆಗಿತ್ತು. ಇದೀಗ ಜ್ಯೂನಿಯರ್‌ ರಾಜ್ ಬಿ ಶೆಟ್ಟಿ ಪ್ರತ್ಯಕ್ಷವಾಗಿದ್ದಾರೆ. ಟೋಬಿ’ ಸಿನಿಮಾದ ಕೊನೆಯಲ್ಲಿ ಬರುವಂತೆಯೇ ಜೂನಿಯರ್ ರಾಜ್ ಬಿ ಶೆಟ್ಟಿ ಕುದುರೆ ಏರಿ ಸೀರಿಯಸ್ ಆಗಿ ‘ಟೋಬಿ’ ಲುಕ್ ಕೊಟ್ಟು ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿಟ್ಲ ಪಿಂಡಿ ಹಬ್ಬವನ್ನು ಮೊಸರು ಕುಡಿಕೆ ಹಬ್ಬ ಅಂತಲೂ ಕರೆಯುತ್ತಾರೆ. ಇದೇ ಹಬ್ಬದಲ್ಲಿ ಜ್ಯೂನಿಯರ್‌ ಟೋಬಿ ಕಾಣಿಸಿಕೊಂಡಿದ್ದಾರೆ. ರಾಜ್‌ ಬಿ ಶೆಟ್ಟಿಯಂತೆ ಕಾಣುವ ಈ ವ್ಯಕ್ತಿ ಉಡುಪಿಯಲ್ಲಿ ಕಂಡಿದ್ದಾರೆ. ಆದರೆ, ಈ ವ್ಯಕ್ತಿಯ ಹಿನ್ನೆಲೆ ಇನ್ನಷ್ಟೆ ಗೊತ್ತಾಗಬೇಕಿದೆ. ಉಡುಪಿಯ ವಿಟ್ಲ ಪಿಂಡಿ ಹಬ್ಬದಲ್ಲಿ ರಾಜ್ ಬಿ ಶೆಟ್ಟಿ ಅವತಾರಿಯಾಗಿ ಗಮನ ಸೆಳೆದಿದ್ದಾರೆ. ಉಡುಪಿಯ ಜನರು ಕೂಡ ಜೂನಿಯರ್ ‘ಟೋಬಿ’ಯನ್ನು ಕಂಡು ಖುಷಿ ಪಟ್ಟಿದ್ದಾರೆ. ನೆಟ್ಟಿಗರು ಈ ವಿಡಿಯೊ ಕಂಡು ʻʻರಾಜ್‌ ಬಿ ಶೆಟ್ಟಿ ನೋಡಿ ನಿಮ್ಮ ಡೂಪ್ಲಿಕೇಟ್ʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಟೋಬಿ ಅಲ್ಲ ಗೋಬಿʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Raj B Shetty: ಚೈತ್ರಾ ಆಚಾರ್-ರಾಜ್‌ ಅಭಿನಯಕ್ಕೆ ಜನ ಫಿದಾ! ʻಟೋಬಿʼ ನೋಡಿ ಫ್ಯಾನ್ಸ್‌ ಹೇಳಿದ್ದೇನು?

ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ಲೈಟರ್‌ ಬುದ್ಧ ಫಿಲ್ಮ್ಸ್‌ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿತ್ತು. ಅದರೊಂದಿಗೆ ಅಗಸ್ತ್ಯ ಫಿಲ್ಮ್ಸ್‌ ಕೂಡ ಸಾಥ್‌ ಕೊಟ್ಟಿದೆ. ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರ ಜತೆಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌ ಸೇರಿದಂತೆ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ.ಇನ್ನು ರಾಜ್‌ ಬಿ ಶೆಟ್ಟಿ ಅವರು ಈ ಸಿನಿಮಾದ ಜತೆ ಜತೆಯಲ್ಲಿ ʼಸ್ವಾತಿ ಮುತ್ತಿನ ಮಳೆಹನಿಯೇʼ, ʼರಾಮನ ಅವತಾರʼ ಸೇರಿದಂತೆ ಅನೇಕ ಸಿನಿಮಾಗಳ ಕೆಲಸದಲ್ಲಿ ಬಿಜಿ ಇದ್ದಾರೆ.

Exit mobile version