Site icon Vistara News

Jyothi Rai: ಹಾಟ್‌ ಫೋಟೊಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕಡೆಸಿದ ‘ಜೋಗುಳ’ ಖ್ಯಾತಿಯ ನಟಿ ಜ್ಯೋತಿ ರೈ!

Jyothi Rai
ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ.
ನಟಿ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೊವನ್ನು ಶೇರ್ ಮಾಡುತ್ತ ಇರುತ್ತಾರೆ. ಕಮೆಂಟ್ ಸೆಕ್ಷನ್ ಬಂದ್ ಮಾಡಿದ್ದಾರೆ. ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೊಗಳು ಇವೆ
ಬೋಲ್ಡ್‌ ಫೋಟೊ ಅಲ್ಲದೇ ವೈಯಕ್ತಿಕ ವಿಚಾರಗಳಿಗೂ ಸುದ್ದಿಯಾಗಿದ್ದರು. ನಟಿ ‘ಶುಕ್ರ’, ‘ಮಾತರಾನಿ ಮೌನಮಿದಿ’, ‘ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ: Jyothi Rai: ಮಗನ ʻಆಟಿಸಂʼ ಕಾಯಿಲೆ ವಿರುದ್ಧ ಹೋರಾಡಿದ್ದ ಜ್ಯೋತಿ ರೈ‌ ಈಗ ಯುವ ನಿರ್ದೇಶಕನ ಜತೆ ಅಫೇರ್?

ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು. 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .
ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಜ್ಯೋತಿ ರೈ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಮಗನಿಗೆ ಒಂದು ವರ್ಷ ತುಂಬಿದ ಬಳಿಕ ಆತ ಯಾರೊಂದಿಗೆ ಐ ಕಾಂಟ್ಯಾಕ್ಟ್‌ ಮಾಡಿ ಮಾತನಾಡಿಸುತ್ತಿರಲಿಲ್ಲ. ಇಎನ್‌ಟಿ ಡಾಕ್ಟರ್‌ ಬಳಿ ಹೋದಾಗಲೂ ಯಾವುದೇ ಸಹಾಯವಾಗಲಿಲ್ಲ. ಬಳಿಕ ಥೆರಫಿ, ಶ್ಯಾಡೋ ಟೀಚರ್‌ ಮುಖಾಂತರ ಜ್ಯೋತಿ ರೈ ಪುತ್ರ ಬೆಳವಣಿಗೆಗೆ ಸಹಾಕಾರಿ ಆಗಿದೆ ಎಂದು ನಟಿ ಹಿಂದೊಮ್ಮೆ ಹೇಳಿಕೆ ನೀಡಿದ್ದರು.
ಸದ್ಯ ಹಾಟ್‌ ಫೋಟೊ ಹಂಚಿಕೊಂಡು ನಟಿ ಮತ್ತೆ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲದೇ ತೆಲುಗು ನಿರ್ದೇಶಕ ಸುಕು ಪೂರ್ವಜ್ ಜತೆಗಿನ ಪೋಟೋಗಳನ್ನು ಹಂಚಿಕೊಂಡು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಜ್ಯೋತಿಪುರ್ವಜ್ ಹ್ಯಾಷ್‌ಟ್ಯಾಗ್ (#Jyothipurvaj)ಹಾಕುತ್ತ ಬರುತ್ತಿದ್ದಾರೆ ಜ್ಯೋತಿ ರೈ. ಇವೆಲ್ಲ ಗಮನಿಸಿದ ನೆಟ್ಟಿಗರು ಇಬ್ಬರ ಮಧ್ಯೆ ಸಂಬಂಧ ಇರೋದು ಗ್ಯಾರೆಂಟಿ ಎನ್ನುತ್ತಿದ್ದಾರೆ.
Exit mobile version