Site icon Vistara News

K S Chithra | ಮಗಳನ್ನು ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ಗಾಯಕಿ ಕೆ.ಎಸ್. ಚಿತ್ರಾ

K S Chithra

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ (K S Chithra ) ಮಗಳ ನೆನಪಿನಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಚಿತ್ರಾ ತಮ್ಮ ಮಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರು. ಚಿತ್ರ ಅವರ ಮುದ್ದಾದ ಮಗಳು ನಂದನಾ 9 ವರ್ಷದವಳಿದ್ದಾಗಲೇ ಮೃತಪಟ್ಟರು. ಇದೀಗ ಮಗಳ ಜನುಮದಿನಕ್ಕೆ ಭಾವುಕ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಕೆ.ಎಸ್. ಚಿತ್ರಾ ಅವರು ಮೂಲತಃ ಕೇರಳದವರು. ಅನೇಕ ಭಾಷೆಯ ಹಾಡುಗಳಿಗೆ ಧ್ವನಿ ನೀಡಿದ್ದಾರೆ. 1986ರಿಂದ ಕನ್ನಡ ಹಾಡುಗಳಿಗೆ ಧ್ವನಿಯಾಗಿರುವ ಅವರು ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 

ಡಿಸೆಂಬರ್‌ 18 ಭಾನುವಾರ ಮಗಳು ನಂದನಾ ಅವರ ಜನುಮದಿನ. ಈ ವಿಶೇಷ ದಿನದಂದ ಮಗಳನ್ನು ನೆನೆದು ಪೋಸ್ಟ್‌ನಲ್ಲಿ ʻವರ್ಷಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ನಿನಗೆ ಎಂದಿಗೂ ವಯಸ್ಸಾಗುವುದಿಲ್ಲ. ನೀನು ದೂರದಲ್ಲಿದ್ದರೂ ನೀನು ಸುರಕ್ಷಿತವಾಗಿರುತ್ತೀಯಾ ಎಂದು ಭಾವಿಸುತ್ತೇನೆ. ಮಿಸ್‌ ಯೂʼʼಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ʼಬದಲಾಗಲು ಸಾಧ್ಯವೇ ಇಲ್ಲ ರೂಪಿ’: ಸಾನ್ಯ ಅಯ್ಯರ್‌ ಭಾವುಕ ಪೋಸ್ಟ್‌ ವೈರಲ್‌!

ಮಲಯಾಳಂನ ಜನಪ್ರಿಯ ಚಿತ್ರ ʻನಂದನಂʼ ನಂತರದಲ್ಲಿ ಚಿತ್ರಾ ಅವರು ತನ್ನ ಮಗಳಿಗೆ ನಂದನಾ ಎಂದು ಹೆಸರಿಟ್ಟಿದ್ದರು. ಕೇರಳ ಸರ್ಕಾರ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಆ ಸಮಯದಲ್ಲಿ ನೀಡಿತ್ತು. ಮಗಳು ನಂದನಾ 2011ರಲ್ಲಿ ಆಕಸ್ಮಿಕವಾಗಿ ಈಜುಕೊಳದಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದರು.

ಇದನ್ನೂ ಓದಿ | Amitabh Bachchan | ತಮ್ಮ ಮುದ್ದು ನಾಯಿ ಮರಿ ನಿಧನಕ್ಕೆ ಭಾವುಕ ಪೋಸ್ಟ್‌ ಹಂಚಿಕೊಂಡ ಅಮಿತಾಭ್‌ ಬಚ್ಚನ್‌!

   

Exit mobile version