Site icon Vistara News

Kaala Bhairava : ಪ್ರಸಿದ್ಧ ಗಾಯಕಿ ರಿಹಾನ್ನಾರನ್ನು ಭೇಟಿಯಾದ ಸಂತಸ ಹಂಚಿಕೊಂಡ ನಾಟು ನಾಟು ಗಾಯಕ ಕಾಲ ಭೈರವ

#image_title

ಲಾಸ್‌ ಏಂಜಲೀಸ್‌: ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಾಡಿನ ಮೂಲ ಗಾಯಕರಾಗಿರುವ ಕಾಲ ಭೈರವ (Kaala Bhairava) ಮತ್ತು ರಾಹುಲ್‌ ಸಿಪ್ಲಿಗುಂಜ್‌ ಅವರು ಹಾಡನ್ನು ಹಾಡಿದ್ದಾರೆ ಕೂಡ. ಈ ಕಾರ್ಯಕ್ರಮದಲ್ಲಿ ವಿಶ್ವದ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದು, ಅವರೆಲ್ಲರನ್ನು ಭೇಟಿಯಾಗುವ ಅದೃಷ್ಟ ಆರ್‌ಆರ್‌ಆರ್‌ ತಂಡದ್ದಾಗಿತ್ತು.

ಇದನ್ನೂ ಓದಿ: Oscars 2023: ದಿ ಎಲಿಫೆಂಟ್​ ವಿಸ್ಪರರ್ಸ್, ಆರ್‌ಆರ್‌ಆರ್‌ ತಂಡವನ್ನು ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಕಾರ್ಯಕ್ರಮದಲ್ಲಿ ಗಾಯಕ ಕಾಲ ಭೈರವ ಅವರು ವಿಶ್ವದ ಪ್ರಖ್ಯಾತ ಗಾಯಕಿ ಆಗಿರುವ ರಿಹಾನ್ನಾ ಅವರನ್ನು ಭೇಟಿ ಮಾಡಿದ್ದಾರೆ. ಗರ್ಭಿಣಿಯಾಗಿರುವ ರಿಹಾನ್ನಾ ಅವರನ್ನು ಭೇಟಿಯಾಗಿರುವ ಅವರು, ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


“ಇದು ಸಾಧ್ಯವಾದಾಗ ನನಗೆ ಪದಗಳೇ ಕೊರತೆಯಾಗಿಬಿಟ್ಟಿತ್ತು. ನಾನು ಯಾವಾಗಲೂ ಎದುರು ನೋಡುತ್ತಿದ್ದ ಮತ್ತು ಆಳವಾಗಿ ಮೆಚ್ಚಿಕೊಂಡ ಕಲಾವಿದೆ. ನನ್ನ ಸ್ಫೂರ್ತಿ ರಿಹನ್ನಾ. ಅವರ ಸ್ಟೇ ಹಾಡನ್ನು ನಾನು ಅದೆಷ್ಟು ಪ್ರೀತಿಸುತ್ತೇನೆ ಮತ್ತು ಅದೆಷ್ಟು ಬಾರಿ ಕೇಳಿದ್ದೇನೆ ಎಂದು ಅವರ ಬಳಿ ಹೇಳಬೇಕು ಎಂದುಕೊಂಡಿದ್ದೆ. ಈ ನೆನಪು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ರಿಹನ್ನಾ ಅವರು ನಿನ್ನೆ ರಾತ್ರಿ ಪ್ರದರ್ಶನ ನೀಡಿದಾಗ ನಾವು ಅಕ್ಷರಶಃ ಮಂತ್ರಮುಗ್ಧರಾಗಿದ್ದೇವೆ! ನಂಬಲಸಾಧ್ಯ!” ಎಂದು ಕಾಲ ಭೈರವ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Exit mobile version