ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʻಕಾಟೇರʼ ಸಿನಿಮಾ (Kaatera Movie) ಎರಡನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮೂಲಗಳ ಪ್ರಕಾರ ಎರಡು ದಿನಕ್ಕೆ ‘ಕಾಟೇರ’ ಸಿನಿಮಾ (Kaatera Movie) ಗಳಿಸಿರುವುದು ಬರೋಬ್ಬರಿ 37.14 ಕೋಟಿ ರೂ. ಎನ್ನಲಾಗುತ್ತಿದೆ. ಈಗಾಗಲೇ ದರ್ಶನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಗೆಲ್ಲಿಸಿದ್ದಕ್ಕಾಗಿ ಧನ್ಯವಾದ ಸೂಚಿಸಿದ್ದಾರೆ.
ಮೊದಲ ದಿನ ಸಿನಿಮಾ 19.79 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಒಟ್ಟು ಕಲೆಕ್ಷನ್ 37.14 ಕೋಟಿ ರೂಪಾಯಿ ಆಗಿದೆ. ಇಂದು ಭಾನುವಾರ ಮತ್ತಷ್ಟು ಸಿನಿಪ್ರೇಮಿಗಳು ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸಲಿದ್ದಾರೆ. ಈ ಮೂಲಕ ದರ್ಶನ್ ಅವರ ಈ ಸಿನಿಮಾ ರೆಕಾರ್ಡ್ ಮಾಡೋದಂತೂ ಗ್ಯಾರಂಟಿ ಎನ್ನುತ್ತಿದ್ದಾರೆ ಫ್ಯಾನ್ಸ್.
ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ದರ್ಶನ್
“ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟೀಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ. ಮಾತೇ ಬರುತ್ತಿಲ್ಲʼʼಎಂದು ಇನ್‌ಸ್ಟಾದಲ್ಲಿ ದರ್ಶನ್ ಬರೆದುಕೊಂಡಿದ್ದಾರೆ. ‘ಕಾಟೇರ’ ಮೂಲಕ ಗೆದ್ದಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.ವಯಸ್ಸಾದ ವ್ಯಕ್ತಿಯ ಗೆಟಪ್ನಲ್ಲಿ ಅವರು ಎಂಟ್ರಿ ನೀಡುತ್ತಾರೆ. ಅದೇ ಫೋಟೊವನ್ನು ಹಂಚಿಕೊಂಡು ದರ್ಶನ್ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.ಮಾಸ್ ಅಂಶಗಳ ಜತೆಗೆ ಕಥೆಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರ ನೋಡಿದ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸತ್ಯ ಘಟನೆ ಆಧಾರಿತ ಈ ಸಿನಿಮಾ ನೋಡಿ ಹಲವರು ಕಣ್ಣೀರು ಸುರಿಸಿದ್ದಾರೆ. ದರ್ಶನ್ ಅವರು ‘ಕಾಟೇರ’ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಂದೇಶ ನೀಡುವ ಸಿನಿಮಾ ಕೂಡ ಇದು.
ಇದನ್ನೂ ಓದಿ: Kaatera Movie: ಧನ್ಯೋಸ್ಮಿ ಸೆಲೆಬ್ರಿಟೀಸ್, ಮನತುಂಬಿದೆ; ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ದರ್ಶನ್!
ದರ್ಶನ್ ಅವರಿಗೆ ಈ ಹಿಂದೆ ತರುಣ್ ಸುಧೀರ್ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ದರ್ಶನ್ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದಾರೆ.