Site icon Vistara News

Kaatera Movie: ಇದು ನಮ್ಮ ಸಿನಿಮಾ, ನಮ್‌ ಜಾಗ, ಹೆದರಿಕೆ ಯಾಕೆ? ಡಂಕಿ, ಸಲಾರ್‌ಗೆ ದರ್ಶನ್‌ ಚಾಲೆಂಜ್‌!

Kaatera Movie Darshan Press Meet

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾ (Kaatera Movie) ಸುದ್ದಿಗೋಷ್ಠಿ ಡಿಸೆಂಬರ್ 14 ನಡೆಯಿತು. ನಟ ದರ್ಶನ್, ಸಿನಿಮಾದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ನಾಳೆ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗುತ್ತಿದೆ.

ದರ್ಶನ್‌ ಮಾತನಾಡಿ ʻʻಹುಬ್ಬಳ್ಳಿಯಲ್ಲಿ ಟ್ರೈಲರ್‌ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ರೈತರ ರಿಲೇಟೆಡ್‌ ಇದೆ. ನಮ್ಮ ಕಾಟೇರ ಸಿನಿಮಾ ತುಂಬ ಭಿನ್ನವಾಗಿದೆ. ದರ್ಶನ್‌ ಮೊದಲೇ ಗ್ರ್ಯಾಂಡ್‌ ಓಪ್‌ನಿಂಗ್‌ ಅಲ್ಲಿ ಸಾಂಗ್ ಅಥವಾ ಫೈಟ್​ನಲ್ಲಿ ಎಂಟ್ರಿ ತೆಗೋತಾರೆ ಎಂದು ಊಹಿಸಿರಬಹುದು. ಆದರೆ ಇಲ್ಲಿ ಹಾಗಿಲ್ಲ. ಈ ಸಿನಿಮಾದಲ್ಲಿ ಮೊದಲ ಹಾಡು ಬರುವುದು 20 ನಿಮಿಷ ಆದಮೇಲೆ, ಮೊದಲ ಫೈಟ್ ನೋಡಲು ಬರೋಬ್ಬರಿ 40 ನಿಮಿಷ ಕಾಯಬೇಕು. ಈ ಮುಂಚೆ ಮಾಡಿದ ಕಮರ್ಶಿಯಲ್‌ ಸಿನಿಮಾಗಿಂತ ಇದು ಬಹಳ ವಿಭಿನ್ನವಾಗಿದೆʼʼಎಂದರು.

ನಮಗ್ಯಾಕೆ ಹೆದರಿಕೆ?

ಇನ್ನು ‘ಕಾಟೇರ’ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಡಂಕಿ ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ. ಈ ಬಗ್ಗೆ ದರ್ಶನ್‌ ಮಾತನಾಡಿ ʻʻಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದರೆ , ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕು?. ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ.” ಎಂದರು ದರ್ಶನ್‌.

ಅಷ್ಟೇ ಅಲ್ಲದೇ ನಾವು ಯಾವುದೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿಲ್ಲ. ಇದು ಅಪ್ಪಟ ಕನ್ನಡಿಗರ ಸಿನಿಮಾ. ರಾಕ್​ಲೈನ್ ಅವರು ಸಹ ಇಂತಹಾ ಭಿನ್ನ ಸಬ್ಜೆಕ್ಟ್ ಅನ್ನು ಒಪ್ಪಿ ಅವರು ಮಾಡಿರುವ ಧೈರ್ಯಕ್ಕೆ ಮೆಚ್ಚುಗೆ ಸಲ್ಲಲೇ ಬೇಕು. ಇದು ನನ್ನ ಹಾಗೂ ಅವರ ಎರಡನೇ ಸಿನಿಮಾ. ತರುಣ್ ಕೂಡ ಸಿನಿಮಾ ಕಥೆಯನ್ನು ಒಂದೇ ಸಿಟಿಂಗ್​ನಲ್ಲಿ ಎರಡು ಗಂಟೆಯಲ್ಲಿ ಕತೆ ಹೇಳಿ ಓಕೆ ಮಾಡಿಸಿದ್ದಾರೆʼʼ ಎಂದರು.

ಇದನ್ನೂ ಓದಿ: Kaatera Movie: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ `ಕಾಟೇರ’ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

ಸಿನಿಮಾ ತಡ ಆಗಿದ್ದೇಕೆ?

ಮೊದಲು ನಮ್ಮ ಪ್ರೊಡ್ಯೂಸರ್‌ಗೆ ಧನ್ಯವಾದ ಹೇಳುತ್ತೇನೆ. ಕಲಾವಿದರ ಡೇಟ್ಸ್‌ ಸಿಕ್ಕಿಲ್ಲ ಎಂದು ತಡವಾಗಿಲ್ಲ. ಎರಡು ಹಳ್ಳಿಗಳ ಸೆಟ್ ನಿರ್ಮಾಣ ಮಾಡಬೇಕಿತ್ತು. ಒಂದು ಹಳ್ಳಿಯ ಸೆಟ್ ಅನ್ನೇ ಬದಲಾಯಿಸಿ ಚಿತ್ರೀಕರಣ ಮಾಡಿ ಎಂದು ಹೇಳಿದೆ. ಆದರೆ ರಾಕ್​ಲೈನ್ ಒಪ್ಪಲಿಲ್ಲ, ಬದಲಿಗೆ ಸಮಯ ತೆಗೆದುಕೊಂಡು ಎರಡು ಹಳ್ಳಿಗಳ ಸೆಟ್ ನಿರ್ಮಿಸಿದರು. ಸೆಟ್ ನಿರ್ಮಾಣವಾಗುವವರೆಗೆ ನಾನು ಮನೆಯಲ್ಲಿ ಖಾಲಿ ಕೂರಬೇಕಾಯ್ತು, ಆಗ ಬೇಸರವಾಗಿತ್ತು, ಆದರೆ ಸೆಟ್​ಗೆ ಬಂದು ನಿರ್ಮಾಣ ಮಾಡಿರುವ ನೋಡಿದಾಗ ದೃಶ್ಯ ನಿಜಕ್ಕೂ ಖುಷಿಯಾಯ್ತು’’ ಎಂದರು.

ನಾನು ಪೂರ್ಣ ಸಿನಿಮಾ ನೋಡಿಲ್ಲ

ಸಿನಿಮಾ ನಾನು ಕೂಡ ಪೂರ್ತಿಯಾಗಿ ನೋಡಿಲ್ಲ. ಡಬ್ಬಿಂಗ್ ಮಾಡುವಾಗ ಸ್ವಲ್ಪ ನೋಡಿದ್ದು ಬಿಟ್ಟರೆ, ಇಡೀ ಸಿನಿಮಾ ನೋಡಿಲ್ಲ. ಡಿಸೆಂಬರ್ 29ಕ್ಕೆ ಜನರೊಂದಿಗೆ ಕೂತು ನೋಡುತ್ತೇನೆ ಎಂದು ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ. ಸಿನಿಮಾದಲ್ಲಿ ನಟಿಸಿರುವ ಶ್ರುತಿ, ಕುಮಾರ್ ಗೋವಿಂದ್, ಅವಿನಾಶ್, ನಾಯಕಿ ರಾಧನಾ ಎಲ್ಲರ ಪ್ರತಿಭೆ, ಸಿನಿಮಾ ಪ್ರೀತಿಯನ್ನು ದರ್ಶನ್‌ ಹೊಗಳಿದರು. ʻʻಡಿಸೆಂಬರ್ 29ರಂದು ಬಿಡುಗಡೆ ಮಾಡುತ್ತಿದ್ದೇವೆ, ಸಿನಿಮಾದ ಟ್ರೈಲರ್ ಅನ್ನು ಇದೇ ತಿಂಗಳು 16ರಂದು ಹುಬ್ಬಳ್ಳಿಯಲ್ಲಿ ತೆರೆಗೆ ತರಲಿದ್ದೇವೆ’’ ಎಂದರು.

ನೈಜ ಘಟನೆ!

‘ಕಾಟೇರ’ ದರ್ಶನ್‌ ಅಭಿನಯದ 56ನೇ ಸಿನಿಮಾ. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗಿದೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನೊಳಗೊಂಡ ಈ ಚಿತ್ರದಲ್ಲಿ ದರ್ಶನ್‌ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಾರಂಭದಲ್ಲಿ ʼಕ್ರಾಂತಿʼ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಚಾಲೆಂಜಿಂಗ್‌ ಸ್ಟಾರ್‌ ವರ್ಷಾಂತ್ಯದಲ್ಲಿ ʼಕಾಟೇರʼ ಮೂಲಕ ದರ್ಶನ ನೀಡುತ್ತಿದ್ದಾರೆ.

ಇದನ್ನೂ ಓದಿ: Kaatera Movie: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ `ಕಾಟೇರ’ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

ಕಾಟೇರʼ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನವಿದೆ. ಸುಧಾಕರ್ ಎಸ್‌. ರಾಜ್ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪಂಚೆಯುಟ್ಟು ಹಳ್ಳಿ ಹೈದನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಭರಪೂರ ಮನರಂಜನೆ ಜತೆಗೆ ಮಾಸ್ ದೃಶ್ಯಗಳು ರೋಮಾಂಚನಗೊಳಿಸಲಿದೆ ಎಂದು ಅಭಿಮಾನಿಗಳು ಈಗಾಗಲೆ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ.

Exit mobile version