Site icon Vistara News

Kaatera Movie: ಕೇವಲ 40 ರೂ.ಗೆ ಸಿಕ್ತಾ ಇದ್ಯಂತೆ ʻಕಾಟೇರʼ; ಆರೋಪಿ ಬಂಧನ!

Kaatera Movie piracy crime

ದರ್ಶನ್‌ ಅಭಿನಯದ ʻಕಾಟೇರʼ ಸಿನಿಮಾ (Kaatera Movie) 100 ಕೋಟಿ ರೂ. ಕ್ಲಬ್‌ ಸೇರಿದೆ. ಇದರ ಬೆನ್ನಲ್ಲೇ ಸಿನಿಮಾಗೆ ಪೈರಸಿ ಕಾಟ ಕೂಡ ಹೆಚ್ಚಾಗಿದೆ.

ರಾಯಚೂರಿನ ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಯುವಕನೊಬ್ಬ 40 ರೂ.ಗೆ ‘ಕಾಟೇರ’ ಸಿನಿಮಾದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.

ಕೆಲವು ಕಿಡಿಗೇಡಿಗಳು ಈ ಸಿನಿಮಾದ ಪೈರಸಿ ಕಾಪಿಯನ್ನು ಟಿಲಿಗ್ರಾಂ ಮೂಲಕ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ರಾಯಚೂರಿನಲ್ಲಿ ‘ಕಾಟೇರ’ ಚಿತ್ರದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಮೌನೇಶ್ ಎಂಬಾತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಉಪೇಂದ್ರ ಎಂಬಾತನಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Kaatera Movie: 50 ಕೋಟಿ ರೂ. ಭರ್ಜರಿ ಕಲೆಕ್ಷನ್‌; 100 ಕೋಟಿ ರೂ. ಗಳಿಕೆಯತ್ತ ʻಕಾಟೇರʻ!

ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕನ್ನಡದಲ್ಲಿ ಮಾತ್ರ ʻಕಾಟೇರʼ ಸಿನಿಮಾ ರಿಲೀಸ್‌ ಆಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್‌ ಮಾಡಿದ್ದು ಹೆಮ್ಮೆಯ ವಿಚಾರ ಎನ್ನುತ್ತಿದ್ದಾರೆ ಫ್ಯಾನ್ಸ್‌. ಕಾಲಿವುಡ್‌ ಹಾಗೂ ಟಾಲಿವುನಲ್ಲಿ ಈ ಸಿನಿಮಾ ಚರ್ಚೆ ಜೋರಾಗಿದೆ. ಸಿನಿಮಾ ಮುಂದಿನ ದಿನಗಳಲ್ಲಿ ಡಬ್‌ ಆಗಲಿದೆ ಎನ್ನುತ್ತಿದೆ ವರದಿ.

ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ʼರಾಬರ್ಟ್ʼ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದಾರೆ.

Exit mobile version