Site icon Vistara News

Kabir Duhan Singh: ಶಿಕ್ಷಕಿಯ ಜತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ʻಕಬ್ಜʼ ಖ್ಯಾತಿಯ ಕಬೀರ್ ದುಹಾನ್ ಸಿಂಗ್

Kabir Duhan Singh

ಬೆಂಗಳೂರು: 50ಕ್ಕೂ ಹೆಚ್ಚು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿರುವ ಕಬೀರ್ ದುಹಾನ್ ಸಿಂಗ್ (Kabir Duhan Singh) ಜೂನ್ 23ರಂದು ಹರಿಯಾಣ ಮೂಲದ ಹುಡುಗಿಯೊಂದಿಗೆ ವಿವಾಹವಾಗಲಿದ್ದಾರೆ. ಕಬೀರ್ ಸಿಂಗ್ ಅವರು ಸೀಮಾ ಚಾಹಲ್ ಎಂಬ ಶಿಕ್ಷಕಿಯನ್ನು ಮದುವೆಯಾಗಲಿದ್ದಾರೆ.

ವಿವಾಹ ಸಮಾರಂಭಗಳು ಜೂನ್ 21ರಿಂದ ನೆರವೇರಲಿದೆ. ಮೂರು ದಿನಗಳ ಕಾಲ ದೆಹಲಿಯ ರೆಸಾರ್ಟ್ ನಲ್ಲಿ ವಿವಾಹ ಮಹೋತ್ಸವ ನಡೆಯಲಿದ್ದು ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಜೂನ್ 21 ರಂದು ಸಂಗೀತ, 22ಕ್ಕೆ ಮೆಹೆಂದಿ ಮತ್ತು 23 ರಂದು ವಿವಾಹ ನಡೆಯಲಿದೆ. ಸೀಮಾ ಚಾಹಲ್ ಹರಿಯಾಣ ಮೂಲದವರಾಗಿದ್ದು, ಗಣಿತ ಶಿಕ್ಷಕಿಯಾಗಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಉಪೇಂದ್ರ ಮತ್ತು ಸುದೀಪ್ ಅವರ ಕಬ್ಜ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಸಿಂಗ್, ಕೆಲವು ತಮಿಳು ಮತ್ತು ತೆಲುಗು ಪ್ರಾಜೆಕ್ಟ್‌ಗಳು ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿವೆ.

ಇದನ್ನೂ ಓದಿ: Actor Sharwanand: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಖ್ಯಾತ ನಟ; ಮದುವೆಯ ಆನಂದದ ಫೋಟೊಗಳು ವೈರಲ್‌!

ಗೊಹಾನಾದಲ್ಲಿ ಹುಟ್ಟಿ ಬೆಳೆದ ಕಬೀರ್ ದುಹಾನ್ ಸಿಂಗ್ ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು 2011 ರಲ್ಲಿ ಮುಂಬೈಗೆ ತೆರಳಿದರು. ಕನ್ನಡವೂ ಸೇರಿದಂತೆ ತಮಿಳು, ತೆಲಗು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಕಬೀರ್ ದುಹಾನ್ ಸಿಂಗ್ ಸಾಕ್ಷಿಂ, ಸರ್ದಾರ್ ಗಬ್ಬರ್ ಸಿಂಗ, ಶಾಕುಂತಲಂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

Exit mobile version