ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್ ನಟರಾದ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ಕಬ್ಜ ಚಿತ್ರದ (Kabza Movie) ಟೀಸರ್ ಬಿಡುಗಡೆಗೊಂಡಿದೆ. ಟೀಸರ್ ಸಖತ್ ಮಾಸ್ ಆಗಿದ್ದು. ಉಪೇಂದ್ರ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರೆಟ್ರೋ ಶೈಲಿಯಲ್ಲಿ ಇದು ಮೂಡಿಬಂದಿದ್ದು, ಟೀಸರ್ ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾದಿದ್ದರು. ಭೂಗತ ಲೋಕದ ಗ್ಯಾಂಗ್ ಸ್ಟಾರ್ ಕಥೆಯನ್ನು ಟೀಸರ್ ಮೂಲಕ ಚಿತ್ರತಂಡ ಅನಾವರಣಗೊಳಿಸಿದೆ. ಇದೀಗ ಟೀಸರ್ ಬಗ್ಗೆ ಪ್ರೇಕ್ಷಕರು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರವಿ ಬಸ್ರೂರ್ ಸಂಗೀತ ಇದಕ್ಕೆ ಇನ್ನಷ್ಟು ಮೆರುಗು ನೀಡಿದೆ. ಈಗಾಗಲೇ ಕಬ್ಜ ಸಿನಿಮಾದ ಪೋಸ್ಟರ್‌ಗಳು ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಈ ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಟೀಸರ್ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಹೊರ ರಾಜ್ಯಗಳಿಂದಲೂ ಪತ್ರಕರ್ತರು ಆಗಮಿಸಿದ್ದರು. ಈಗಾಗಲೇ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಶುಭ ಹಾರೈಸಿದ್ದಾರೆ. ಸೆ. 18ಕ್ಕೆ ಉಪೇಂದ್ರ ಜನುಮದಿನವಿದ್ದು, ಇದಕ್ಕೆ ಒಂದು ದಿನ ಮುಂಚಿತವಾಗಿಯೇ ಟೀಸರ್ ಬಿಡುಗಡೆಗೊಂಡಿರುವುದು ವಿಶೇಷ.
ಇದನ್ನೂ ಓದಿ | Kabza Movie | ಉಪ್ಪಿKabza Movie ಹುಟ್ಟುಹಬ್ಬಕ್ಕೆ ಕಬ್ಜ ಟೀಸರ್ ಗಿಫ್ಟ್
ಈ ಚಿತ್ರದಲ್ಲಿ ಬಹುಭಾಷಾ ನಟಿ ಶ್ರೀಯಾ ಶರಣ್ ಸಹ ನಟಿಸಿದ್ದು, ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಚಿತ್ರ ಮೊದಲ ಹಂತದಲ್ಲಿಯೇ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದ ಟೆಕ್ನಿಕಲ್ ಹೆಡ್ ಸಿ.ವಿ.ರಾವ್ ಹಾಗೂ ನಿರ್ದೇಶಕ ರಾಜಮೌಳಿ ಅವರ ಗಮನ ಸೆಳೆದಿತ್ತು. ಚಿತ್ರದ ವಿಷ್ಯುವಲ್ ನೋಡಿ ಈ ಇಬ್ಬರು ಘಟಾನುಘಟಿಗಳು ಮೆಚ್ಚಿಕೊಂಡಿದ್ದರು. ಇದು ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಕಬ್ಜ ಸಿನಿಮಾದ ಟೀಸರ್ ಆನಂದ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ. ಕಬ್ಜ ಸಿನಿಮಾ ಏಳು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿರುವುದು ವಿಶೇಷ.
ಪ್ಯಾನ್ ಇಂಡಿಯಾ ಸಿನಿಮಾವಾದ ಈ ಸಿನಿಮಾ ಕನ್ನಡದ ಜತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಏಕಕಾಲದಲ್ಲಿ ಏಳು ಬಾಷೆಗಳಲ್ಲಿ ಡಬ್ಬಿಂಗ್ ಆಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಒಂದು ಹಾಡಿನ ಚಿತ್ರೀಕರಣ ಬಿಟ್ಟು ಉಳಿದೆಲ್ಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | Kabza Movie | ಇಂದು ರಿಲೀಸ್ ಆಗುತ್ತಿದೆ ಕಬ್ಜ ಟೀಸರ್ : ರಾಣಾ ದಗ್ಗುಬಾಟಿ, ಶಿವರಾಜ್ ಕುಮಾರ್ ಸ್ಪೆಷಲ್ ಗೆಸ್ಟ್!