Site icon Vistara News

Kabza Movie | ಇಂದು ರಿಲೀಸ್‌ ಆಗುತ್ತಿದೆ ಕಬ್ಜ ಟೀಸರ್‌ : ರಾಣಾ ದಗ್ಗುಬಾಟಿ, ಶಿವರಾಜ್ ಕುಮಾರ್ ಸ್ಪೆಷಲ್‌ ಗೆಸ್ಟ್‌!

Kabza Movie

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಇಬ್ಬರು ಪ್ಯಾನ್‌ ಇಂಡಿಯಾ ಸ್ಟಾರ್‌ ನಟರಾದ ಕಿಚ್ಚ ಸುದೀಪ್‌, ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಬಹುನಿರೀಕ್ಷಿತ ಕಬ್ಜ ಚಿತ್ರದ ಟೀಸರ್‌ (Kabza Movie) ಕಾರ್ಯಕ್ರಮ ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ (ಸೆ. 17) ನಡೆಯಲಿದೆ. ಆರ್‌ ಚಂದ್ರು ನಿರ್ದೇಶನದ ಈ ಚಿತ್ರದ ಮೇಲೆ ಅಭಿಮಾನಿಗಳು ನಿರೀಕ್ಷೆಯನ್ನು ಇಟ್ಟಿದ್ದಾರೆ. ಈಗಾಗಲೇ ಕಬ್ಜ ಸಿನಿಮಾದ ಪೋಸ್ಟರ್‌ಗಳು ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ ಮತ್ತು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಟೀಸರ್‌ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಹೊರ ರಾಜ್ಯಗಳಿಂದಲೂ ಪತ್ರಕರ್ತರು ಆಗಮಿಸಲಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಶುಭ ಹಾರೈಸಿದ್ದಾರೆ. ಸೆ. 18ಕ್ಕೆ ಉಪೇಂದ್ರ ಜನುಮದಿನವಿದ್ದು, ಇದಕ್ಕೆ ಒಂದು ದಿನ ಮುಂಚಿತವಾಗಿಯೇ ಟೀಸರ್‌ ಬಿಡುಗಡೆಗೊಳ್ಳುತ್ತಿದೆ.

ಈ ಚಿತ್ರದಲ್ಲಿ ಬಹುಭಾಷಾ ನಟಿ ಶ್ರೀಯಾ ಶರಣ್‌ ಸಹ ನಟಿಸಿದ್ದು, ಸಾಕಷ್ಟು ಕುತೂಹಲವನ್ನು ಈಗಾಗಲೇ ಹುಟ್ಟುಹಾಕಿದೆ. ಈ ಚಿತ್ರದ ವಿಶೇಷವೆಂದರೆ ಮೊದಲ ಹಂತದಲ್ಲಿಯೇ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದ ಟೆಕ್ನಿಕಲ್‌ ಹೆಡ್‌ ಸಿ.ವಿ.ರಾವ್‌ ಹಾಗೂ ನಿರ್ದೇಶಕ ರಾಜಮೌಳಿ ಅವರ ಗಮನ ಸೆಳೆದಿತ್ತು. ಚಿತ್ರದ ವಿಷ್ಯುವಲ್‌ ನೋಡಿ ಈ ಇಬ್ಬರು ಘಟಾನುಘಟಿಗಳು ಮೆಚ್ಚಿಕೊಂಡಿದ್ದರು. ಇದು ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಇದನ್ನೂ ಓದಿ | Shivaji Surathkal-2 | ಹೊಸ ಕೇಸ್ ಹಿಂದೆ ಬಿದ್ದ ಶಿವಾಜಿ ಸುರತ್ಕಲ್: ಟೀಸರ್‌ ಔಟ್‌!

ಕಬ್ಜ ಸಿನಿಮಾದ ಟೀಸರ್‌ ಆನಂದ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಸಂಜೆ 5.4ಕ್ಕೆ ಬಿಡುಗಡೆ ಆಗುತ್ತಿದೆ. ಭೂಗತ ಲೋಕದ ಗ್ಯಾಂಗ್‌ ಸ್ಟಾರ್‌ ಕಥೆಯನ್ನು ಹೇಳಲು ಹೊರಟಿದೆ ಚಿತ್ರತಂಡ. ಕಬ್ಜ ಸಿನಿಮಾ ಏಳು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿರುವುದು ವಿಶೇಷ.

ಪ್ಯಾನ್‌ ಇಂಡಿಯಾ ಸಿನಿಮಾವಾದ ಈ ಸಿನಿಮಾ ಕನ್ನಡದ ಜತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಏಕಕಾಲದಲ್ಲಿ ಏಳು ಬಾಷೆಗಳಲ್ಲಿ ಡಬ್ಬಿಂಗ್‌ ಆಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಒಂದು ಹಾಡಿನ ಚಿತ್ರೀಕರಣ ಬಿಟ್ಟು ಉಳಿದೆಲ್ಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Kabza Movie | ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಟೀಸರ್‌ ಗಿಫ್ಟ್‌

Exit mobile version