Site icon Vistara News

Kabzaa Movie : ಕಬ್ಜ ಚಿತ್ರಕ್ಕೆ 25 ದಿನಗಳ ಸಂಭ್ರಮ, ಇದೇ ಖುಷಿಯಲ್ಲಿ ಕಬ್ಜ 2 ಘೋಷಣೆ ಮಾಡಿದ ಡೈರೆಕ್ಟರ್

#image_title

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ, ಕಿಚ್ಚ ಸುದೀಪ್‌ ಮತ್ತು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟನೆಯ ಕಬ್ಜ ಸಿನಿಮಾ (Kabzaa Movie) ಬಿಡುಗಡೆಯಾಗಿ 25 ದಿನಗಳು ಕಳೆದಿವೆ. ಆ ಸಂಭ್ರಮದಲ್ಲಿರುವ ಸಿನಿಮಾ ತಂಡ ಇದೀಗ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದೆ. ಪ್ಯಾನ್‌ ಇಂಡಿಯಾ ಸಿನಿಮಾವಾದ ಕಬ್ಜದ ಎರಡನೇ ಭಾಗವಾಗಿ ಕಬ್ಜ 2 ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.

ಈ ಬಗ್ಗೆ ಚಿತ್ರದ ನಿರ್ದೇಶಕರಾಗಿರುವ ಆರ್‌.ಚಂದ್ರು ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಟ್ಟಿದ್ದಾರೆ. “ಕಬ್ಜ ಸಿನಿಮಾಕ್ಕಿಂತ ಕಬ್ಜ 2 ಸಿನಿಮಾ ಅದ್ಧೂರಿಯಾಗಿರಲಿದೆ. ಇಂದಿನಿಂದಲೇ ನಾವು ಈ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ಸಿನಿಮಾಕ್ಕೆ ಭಾರೀ ಪ್ರಮಾಣದ ಬಂಡವಾಳ ಹೂಡಲಿದ್ದೇವೆ. ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರನ್ನು ಈ ಸಿನಿಮಾದಲ್ಲಿ ಒಟ್ಟುಗೂಡಿಸಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

“ಸದ್ಯ ನಾನು ಸಿನಿಮಾದ ಕಥೆ ಮಾಡುವ ಕೆಲಸದಲ್ಲಿದ್ದೇನೆ. ಕಬ್ಜ 2 ಸಿನಿಮಾದಲ್ಲಿ ಕಥೆ, ಮೇಕಿಂಗ್‌, ತಾರಾಗಣ, ಬಜೆಟ್‌ ಯಾವುದಕ್ಕೂ ಕೊರತೆ ಇರುವುದಿಲ್ಲ. ಅಷ್ಟು ಶಕ್ತಿಯನ್ನು ನೀವು ಕಬ್ಜ ಸಿನಿಮಾಕ್ಕೆ ಬೆಂಬಲ ನೀಡುವ ಮೂಲಕ ನಮಗೆ ಕೊಟ್ಟಿದ್ದೀರಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Kabzaa Movie: ಕಬ್ಜ ಒಟಿಟಿ ರಿಲೀಸ್‌ ಯಾವಾಗ? ಕಬ್ಜ 2ಗೆ ತಯಾರಿ ನಡೆದಿದ್ಯಾ?
ಕಬ್ಜ ಸಿನಿಮಾ ಬಿಡುಗಡೆ ಆಗಿ ಎರಡು ದಿನಗಳಲ್ಲೇ ನೂರು ಕೋಟಿ ರೂ. ಕ್ಲಬ್‌ ಸೇರಿತ್ತು. ಹಾಗೆಯೇ ಸಿನಿಮಾ 25 ದಿನ ಸಂಪೂರ್ಣವಾಗಿರುವ ಹಿನ್ನೆಲೆ ಸಿನಿಮಾವನ್ನು ಅಮೆಜಾನ್‌ ಪ್ರೈಮ್‌ನಲ್ಲಿಯೂ ಬಿಡುಗಡೆ ಮಾಡಲಾಗಿದೆ. ಒಟಿಟಿ ಪ್ಲಾಟ್‌ಫಾರಂನಲ್ಲೂ ಕೂಡ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Exit mobile version