Site icon Vistara News

Kaduva Film | ಬೆಂಗಳೂರಿನಲ್ಲಿ ‘ಕಡುವ’ ಪ್ರೀ-ರಿಲೀಸ್ ಇವೆಂಟ್: ಜೂನ್‌ 30ಕ್ಕೆ ರಿಲೀಸ್‌

Kaduva Film

ಬೆಂಗಳೂರು : ಮಾಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಅಮೋಘ ಅಭಿನಯದ ಮೂಲಕ, ತಮ್ಮ ಸ್ಟೈಲ್‌ನಲ್ಲಿ ಸಿನಿಮಾ ನಿರ್ದೇಶನ ಮಾಡುವ ಮೂಲಕ ಖ್ಯಾತಿ ಗಳಿಸಿರುವ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕ ಪೃಥ್ವಿರಾಜ್ ಸುಕುಮಾರನ್ ಲೂಸಿಫರ್, ಜನಗಣಮನ, ಬ್ರೋ ಡ್ಯಾಡಿ ಸೂಪರ್ ಹಿಟ್ ಚಿತ್ರದ ಬಳಿಕ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿದ್ದಾರೆ. ಪೃಥ್ವಿರಾಜ್ ನಟನೆಯ ಕಡುವ (Kaduva Film) ಬೆಂಗಳೂರಿನಲ್ಲಿ ಇದೇ ಜೂನ್‌ 30ಕ್ಕೆ ರಿಲೀಸ್‌ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಜೂನ್ 30ರಂದು ಪಂಚ ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಪೃಥ್ವಿರಾಜ್‌ಗೆ ಜೋಡಿಯಾಗಿ ಸಂಯುಕ್ತಾ ಮೆನನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ವಿವೇಕ್‌ ಓಬೆರಾಯ್‌ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಶಾಜಿ ಕೈಲಾಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಡುವ ಟೀಸರ್ ಈಗಾಗಲೇ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ | Tyson: ಮಲಯಾಳಂಗೆ ಹೊಂಬಾಳೆ ಫಿಲ್ಮ್ಸ್‌ ಎಂಟ್ರಿ, ಸೂಪರ್‌ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್ ಸಾ‍ಥ್‌

ಕಡುವಕ್ಕುಣ್ಣೇಲ್ ಗುರುವಚ್ಚನ್ ಎಂಬ ವ್ಯಕ್ತಿಯ ನೈಜ ಕತೆಯನ್ನಾಧರಿಸಿ ಕಡುವ ಸಿನಿಮಾದ ಪ್ರಚಾರಕ್ಕಾಗಿ ನಾಯಕ ಪೃಥ್ವಿರಾಜ್ ಸುಕುಮಾರನ್, ನಾಯಕಿ ಸಂಯುಕ್ತಾ ಮೆನನ್ ಬೆಂಗಳೂರಿಗೆ ಆಗಮಿಸಿದ್ದರು.

ಪೃಥ್ವಿರಾಜ್ ಸುಕುಮಾರನ್ ಮಾತನಾಡಿ, “ಕಳೆದ 6 ತಿಂಗಳಿಂದ ನಾನು ಅನಧಿಕೃತವಾಗಿ ಕೇರಳದಲ್ಲಿ ಕನ್ನಡ ಸಿನಿಮಾದ ರಾಯಭಾರಿಯಾಗಿರುವೆ. ಪೃಥ್ವಿರಾಜ್ ಪ್ರೊಡಕ್ಷನ್ ಅಡಿಯಲ್ಲಿ ವಿತರಣೆ ಮಾಡಿದ ಕೆಜಿಎಫ್, 777 ಚಾರ್ಲಿ ಎರಡು ಸಿನಿಮಾಗಳು ಕೇರಳದಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ. ಕಡುವ ನನಗೆ ತುಂಬಾ ವಿಶೇಷವಾದ ಸಿನಿಮಾ. ಜನ ಗಣ ಮನ ಸಿನಿಮಾವನ್ನು ಬೆಂಗಳೂರಿನಲ್ಲಿ ಹೆಚ್ಚು ಜನರು ನೋಡಿದ್ದಾರೆ. ನನ್ನ ಈ ಹಿಂದಿನ ಸಿನಿಮಾಗಳಿಗೆ ಕರ್ನಾಟಕದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿವೆ. ಇಂದು ಭಾರತದಾದ್ಯಂತ ನಾವು ನಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದೇವೆ. ‘ಬಾಹುಬಲಿ’ ಮೂಲಕ ಪ್ಯಾನ್ ಇಂಡಿಯಾ ಚಿತ್ರ ಹೆಚ್ಚು ಪ್ರಚಲಿತಕ್ಕೆ ಬಂತು. ಅದನ್ನು ಕೆಜಿಎಫ್ ಸಿನಿಮಾದ ಪ್ರಶಾಂತ್ ನೀಲ್, ಯಶ್ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಹೀಗಾಗಿ ಇಂದು ಚಿತ್ರರಂಗ ಒಂದಾಗಿದೆ, ದೊಡ್ಡದಾಗಿದೆ. ನಾನು ಕಡುವ ಸಿನಿಮಾವನ್ನು ವ್ಯವಹಾರ, ಉದ್ಯಮದ ವಿಚಾರವಾಗಿ 5 ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವುದು ಒಂದು ವಿಚಾರವಾದರೆ ಇನ್ನೊಂದು ಜನರಿಗೆ ತಲುಪಬೇಕುʼʼ ಎಂದರು.

ಸಂಯುಕ್ತ ಮೆನನ್ ಮಾತನಾಡಿ, ಜೂನ್ 30ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಪೃಥ್ವಿರಾಜ್ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಭಾರತೀಯ ಚಿತ್ರರಂಗದಲ್ಲಿ ಅವರೊಬ್ಬರು ಅದ್ಭುತ ನಟ. ಎಂಟರ್‌ಟೇನ್‌ಮೆಂಟ್, ಡ್ರಾಮಾ, ಥ್ರಿಲ್ಲರ್ ಎಲ್ಲವೂ ಸಿನಿಮಾದಲ್ಲಿದೆ ಎಂದರು.

ಕರ್ನಾಟಕದ ನಂಟು

ಕನ್ನಡದ ಕೆಜಿಎಫ್‌-2 ಚಿತ್ರವನ್ನು ಮಲಯಾಳಂನಲ್ಲಿ ರಿಲೀಸ್‌ ಮಾಡುವ ಜವಾಬ್ದಾರಿಯನ್ನು ಅವರೇ ಹೊತ್ತು ಕೊಂಡಿದ್ದರು. ಪೃಥ್ವಿರಾಜ್ ಪ್ರೊಡಕ್ಷನ್ ಅಡಿಯಲ್ಲಿ ಕೆಜಿಎಫ್, 777 ಚಾರ್ಲಿ ಚಿತ್ರಕ್ಕೆ ವಿತರಣೆ ಮಾಡಿದ್ದರು. ಕೆಜಿಎಫ್‌ ಚಿತ್ರದ ಟ್ರೈಲರ್‌ ಲಾಂಚ್‌ ವೇಳೆ ಬೆಂಗಳೂರಿಗೆ ಆಗಮಿಸಿದ್ದರು. ಹೊಂಬಾಳೆ ಫಿಲ್ಮ್ಸ್‌ ಬಂಡವಾಳ ಹೂಡುತ್ತಿರುವ ಟೈಸನ್‌ (Tyson) ಚಿತ್ರಕ್ಕೆ ಅವರೇ ನಿರ್ದೇಶನ ಮಾಡಿ, ನಟಿಸುತ್ತಿದ್ದಾರೆ.

ಇದನ್ನೂ ಓದಿ | ಆಶಿಕ್‌ ಬಾಬು ಹೊಸ ಚಿತ್ರ Neelavelicham ಫಸ್ಟ್‌ ಲುಕ್‌ ರಿಲೀಸ್‌, ಇದು ಬಶೀರ್‌ ಹಾರರ್‌!

Exit mobile version