Site icon Vistara News

Kajol | ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ನಟಿ ಕಾಜೋಲ್‌: ಅಜಯ್‌ ದೇವಗನ್‌ ಹೇಳಿದ್ದೇನು?

Kajol

ಬೆಂಗಳೂರು: ಬಾಲಿವುಡ್‌ ನಟಿ ಕಾಜೋಲ್‌ (Kajol) ಅವರು ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ಕಾಜೋಲ್‌ ತಮ್ಮ ಇನ್ಸ್ಟಾ ಮೂಲಕ ಸಂತಸವನ್ನು ಹಂಚಿಕೊಂಡಿದ್ದು, ಪತಿ ಅಜಯ್ ದೇವಗನ್ ಕೂಡ ಪೋಸ್ಟ್‌ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಕಾಜೋಲ್ ಅವರು 1992ರಲ್ಲಿ ‘ಬೇಖುದಿ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಕಾಜೋಲ್‌, 30 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಷಯವನ್ನು ಅವರು ಇನ್ಸ್ಟಾ ಮೂಲಕ ಹಂಚಿಕೊಂಡಿದ್ದಾರೆ. “ಪ್ರತಿಯೊಬ್ಬರೂ ನನ್ನ ಮೇಲೆ ತೋರಿದ ಪ್ರೀತಿಗೆ ಧನ್ಯವಾದ. ಈ ಸಂತೋಷವನ್ನು ಪದಗಳಲ್ಲಿ ಹೇಳುವುದು ಕಷ್ಟಕರ. ಚಿತ್ರರಂಗದಲ್ಲಿ ಇನ್ನೂ 30 ವರ್ಷಗಳನ್ನು ಆನಂದಿಸಲು ಎದುರು ನೋಡುತ್ತಿದ್ದೇನೆʼʼ ಎಂದು ಕಾಜೋಲ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Anushka Shetty | ತೆಲುಗಿನಲ್ಲಿ 17 ವರ್ಷ ಪೂರೈಸಿದ ಕನ್ನಡದ ನಟಿ

ಇನ್ನು ತಮ್ಮ ಮೆಚ್ಚಿನ ಮಡದಿ ಬಗ್ಗೆ ಅಜಯ್‌ ದೇವಗನ್‌ ಸಹ ಬರೆದುಕೊಂಡಿದ್ದಾರೆ. “‘ಇಷ್ಕ್’, ‘ಪ್ಯಾರ್ ತೋ ಹೋನಾ ಹಿ ಥಾ’, ಮತ್ತು ‘ದಿಲ್ ಕ್ಯಾ ಕರೇ’ ಚಿತ್ರಗಳಲ್ಲಿ ಕಾಜೋಲ್ ಜತೆ ಅವರು ತೆರೆಯನ್ನು ಹಂಚಿಕೊಂಡಿದ್ದರು. ಅವರು ಈ ವಿಶೇಷ ಸಂದರ್ಭದಲ್ಲಿ ತಮ್ಮಿಬ್ಬರ ನಟನೆಯ ಕೊನೆಯ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ತನ್ಹಾಜಿ: ದಿ ಅನ್‌ಸಂಗ್ ವಾರಿಯರ್’ ಸೆಟ್‌ನಿಂದ ಒಟ್ಟಿಗೆ ನೃತ್ಯ ಮಾಡುತ್ತಿರುವ ಫೋಟೋವನ್ನು ಶೇರ್‌ ಮಾಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಜಯ್ ದೇವಗನ್ ಪಡೆದಿರುವುದು ಇನ್ನೂ ವಿಶೇಷ.

ಅಜಯ್ ದೇವಗನ್ ಪೋಸ್ಟ್‌ನಲ್ಲಿ “ಸಿನಿಮಾದಲ್ಲಿ ಮೂರು ದಶಕಗಳು ಕಳೆದಿವೆ. ಚಿತ್ರರಂಗಕ್ಕೆ ನಿನ್ನೆ, ಮೊನ್ನೆಯೋ ಎಂಟ್ರಿ ಕೊಟ್ಟಿರುವಂತೆ ಭಾಸವಾಗುತ್ತಿದೆ. ನನ್ನ ಸೂಪರ್‌ ಸ್ಟಾರ್‌ ಪತ್ನಿಗೆ ಈ ಪೋಸ್ಟ್‌ ಸಮರ್ಪಿತʼʼ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಅಜಯ್ ದೇವಗನ್ ಈ ಹಿಂದೆ ಕೂಡ ಕಾಜೋಲ್ ಅವರ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್‌ ಬಗ್ಗೆ ಹಂಚಿಕೊಂಡಿದ್ದರು. ಆಸ್ಕರ್ ಪ್ಯಾನೆಲ್‌ಗೆ ಆಹ್ವಾನಿಸಿದ್ದಕ್ಕಾಗಿ ಕಾಜೋಲ್‌ಗೆ ಅಭಿನಂದನೆ ಹೇಳಿದ್ದರು. ಅಜಯ್ ದೇವಗನ್ ಮತ್ತು ಕಾಜೋಲ್ 1999ರಂದು ಸಪ್ತಪದಿ ತುಳಿದಿದ್ದಾರೆ. ಇವರಿಗೆ ನೈಸಾ ಮತ್ತು ಯುಗ್ ಎಂಬ ಇಬ್ಬರು ಮಕ್ಕಳಿದ್ದಾರೆ.

ʻದಿಲ್ವಾಲೆ’ ‘ದುಲ್ಹನಿಯಾ ಲೇ ಜಾಯೇಂಗೆ’, ‘ಗುಪ್ತ್’, ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’, ‘ಪ್ಯಾರ್ ತೋ ಹೋನಾ ಹಿ ಥಾ’, ‘ಕುಚ್ ಕುಚ್’ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’, ‘ಫನಾ’, ‘ಮೈ ನೇಮ್ ಈಸ್ ಖಾನ್’, ‘ಹೆಲಿಕಾಪ್ಟರ್ ಈಲಾ’, ‘ತನ್ಹಾಜಿ’ ಹೀಗೆ ಹಲವು ಹಿಟ್‌ ಸಿನಿಮಾಗಳಲ್ಲಿ ಕಾಜೋಲ್‌ ನಟಿಸಿದ್ದಾರೆ. ‘ತ್ರಿಭಂಗಾ’ ಅವರು ಇತ್ತೀಚೆಗೆ ನಟಿಸಿದ ಕೊನೆಯ ಚಿತ್ರವಾಗಿದೆ.

ಇದೀಗ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಕಾಜೋಲ್‌ ಅವರ ವೆಬ್‌ ಸರಣಿ ಪ್ರಸಾರ ಆಗಲಿದೆ. ಜುಲೈ 11 ಶೂಟಿಂಗ್‌ ಪ್ರಾರಂಭಗೊಂಡಿದ್ದು, ಪ್ರತಿ ಎಪಿಸೋಡ್‌ಗೆ ಕಾಜೋಲ್‌ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ | 20 Years Of Devdas | 20 ವರ್ಷ ಪೂರೈಸಿದ ದೇವದಾಸ್‌ ಸಿನಿಮಾ: ಐಶ್‌ ಕಿವೀಲಿ ರಕ್ತ ಬಂದಿತ್ತಂತೆ!

Exit mobile version