Site icon Vistara News

Kajol Controversial: ರಾಜಕಾರಣಿಗಳಿಗೆ ಶೈಕ್ಷಣಿಕ ಹಿನ್ನೆಲೆ ಇಲ್ಲ ಎಂದ ಕಾಜೋಲ್‌; ಟೀಕೆ ಬಳಿಕ ಸ್ಪಷ್ಟನೆ!

Kajol Clarifies Her Controversial

ಬೆಂಗಳೂರು: ಕಾಜೋಲ್ ಅವರ (Kajol Controversial) ಮುಂಬರುವ ‘ದಿ ಟ್ರಯಲ್​’ (The Trail) ವೆಬ್​ ಸಿರೀಸ್​ ಬಿಡುಗಡೆಗೆ ಸಜ್ಜಾಗಿದೆ. ಸಿರೀಸ್‌ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ನೀಡಿದ ಹೇಳಿಕೆಯಿಂದ ವಿವಾದಕ್ಕೆ ಒಳಗಾಗಿದ್ದಾರೆ. ʻʻಬಹುತೇಕ ರಾಜಕೀಯ ನಾಯಕರಿಗೆ ಶೈಕ್ಷಣಿಕ ಹಿನ್ನೆಲೆ ಇಲ್ಲʼʼಎಂದು ಕಾಜೋಲ್​ ಹೇಳಿದ್ದಾರೆ. ಅದೇ ಈಗ ವಿವಾದಕ್ಕೆ ಕಾರಣ ಆಗಿದೆ. ಇದೀಗ ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಪ್ರಿಯಾಂಕಾ ಚತುರ್ವೇದಿ ಅವರಂತಹ ಹಲವಾರು ರಾಜಕೀಯ ನಾಯಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದೀಗ ಕಾಜೋಲ್ ತಮ್ಮ ಹೇಳಿಕೆಯ ಹಿಂದಿರುವ ಉದ್ದೇಶ ಏನು ಎಂಬುದನ್ನು ಅವರು ತಿಳಿಸಿದ್ದಾರೆ.

ಕಾಜೋಲ್‌ ಈ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ವತಃ ಕಾಜೋಲ್​ ಅವರೇ ಶಾಲೆಯನ್ನು ಅರ್ಧಕ್ಕೆ ಬಿಟ್ಟವರು. ಈಗ ಆಕೆಯ ಅತಿಯಾದ ಆತ್ಮವಿಶ್ವಾಸ ಹೇಗಿದೆ ನೋಡಿ’ ಎಂದು ಟ್ರೋಲ್​ ಮಾಡಲಾಗಿದೆ. ಇನ್ನೂ ಕೆಲವರು ಕಾಜೋಲ್​ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದಾದ ಬಳಿಕ ನಟಿ ಈ ಬಗ್ಗೆ ಟ್ವೀಟ್‌ ಮಾಡಿ ʻನಾನು ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಕೇವಲ ಒಂದು ಅಂಶವನ್ನು ಹೇಳುತ್ತಿದ್ದೆ. ಯಾವುದೇ ರಾಜಕೀಯ ನಾಯಕರನ್ನು ಕೀಳಾಗಿ ಕಾಣುವುದು ನನ್ನ ಉದ್ದೇಶವಲ್ಲ, ದೇಶವನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಿರುವ ಕೆಲವು ಮಹಾನ್ ನಾಯಕರು ನಮ್ಮಲ್ಲಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Kajol : ಭಾರತದ ಲೀಡರ್​ ಅನಕ್ಷರಸ್ಥರು; ಸೋಶಿಯಲ್​ ಮೀಡಿಯಾದಲ್ಲಿ ಕಿಡಿ ಹಚ್ಚಿದ ಕಾಜೋಲ್​ ಹೇಳಿಕೆ

ಕಾಜೋಲ್‌ ಟ್ವೀಟ್‌

ಅನ್‌ವರ್ಸ್‌ಗಾಗಿ, ದಿ ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ, ಕಾಜೋಲ್ ಭಾರತದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ್ದರು. “ನಮ್ಮಲ್ಲಿ ಬದಲಾವಣೆ ನಿಧಾನ ಗತಿಯಲ್ಲಿ ಸಾಗುತ್ತಿದೆ. ವಿಶೇಷವಾಗಿ ಭಾರತದಂತಹ ದೇಶದಲ್ಲಿ ನಿಧಾನವಾಗಿದೆ. ಇದು ತುಂಬಾ ನಿಧಾನವಾಗಿದೆ ಏಕೆಂದರೆ ನಾವು ನಮ್ಮ ಸಂಪ್ರದಾಯಗಳಲ್ಲಿಯೇ ತೊಡಗಿದ್ದೇವೆ. ಇದೆಲ್ಲದರ ಆಲೋಚೆನಯಿಂದ ಹೊರ ಬರಲು ಶಿಕ್ಷಣ ಮುಖ್ಯ. ಬಹುತೇಕ ರಾಜಕೀಯ ನಾಯಕರಿಗೆ ಶೈಕ್ಷಣಿಕ ಹಿನ್ನೆಲೆ ಇಲ್ಲ. ಸೂಕ್ತ ದೃಷ್ಟಿಕೋನ ಇಲ್ಲದವರು ನಮ್ಮನ್ನು ಆಳುತ್ತಿದ್ದಾರೆ. ಶಿಕ್ಷಣ ಪಡೆದಿದ್ದರೆ ನೀವು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಬಹುದು’ ಎಂದಿದ್ದರು ಕಾಜೋಲ್​.

ಕಾಜೋಲ್ ಕೊನೆಯದಾಗಿ ಲಸ್ಟ್ ಸ್ಟೋರೀಸ್ 2ನಲ್ಲಿ ಕಾಣಿಸಿಕೊಂಡರು. ಕಾಜೋಲ್ ಸದ್ಯ ದಿ ಟ್ರಯಲ್‌ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ರಾಬರ್ಟ್ ಕಿಂಗ್ ಮತ್ತು ಮಿಚೆಲ್ ಕಿಂಗ್ ಅವರ ದಿ ಗುಡ್ ವೈಫ್ ಎಂಬ ಕಾರ್ಯಕ್ರಮದ ರೂಪಾಂತರವಾಗಿದೆ. ಈ ಸಿರೀಸ್‌ವನ್ನು ಸುಪರ್ಣ್ ವರ್ಮಾ ನಿರ್ದೇಶಿಸಲಿದ್ದಾರೆ. ಇದರಲ್ಲಿ ಜಿಶು ಸೇನ್‌ಗುಪ್ತಾ, ಅಲಿ ಖಾನ್, ಕುಬ್ರ ಸೇಟ್ ಮತ್ತು ಶೀಬಾ ಚಡ್ಡಾ ಕೂಡ ನಟಿಸಿದ್ದಾರೆ.

Exit mobile version