Site icon Vistara News

Kalki 2898 AD 2: ಶೀಘ್ರದಲ್ಲೇ ಬರಲಿದೆ ಕಲ್ಕಿ 2898ಎಡಿ ಭಾಗ- 2!

Kalki 2898 AD 2

ವಿಶ್ವದಾದ್ಯಂತ (world) ಅದ್ಧೂರಿಯಾಗಿ ಬಿಡುಗಡೆಯಾದ 2024ರ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898ಎಡಿ (Kalki 2898 AD) ಭಾರತೀಯ ಚಿತ್ರರಂಗದಲ್ಲಿ (Indian cinema) ಮೂರನೇ ಅತೀ ದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೇ ಚಿತ್ರದ ಮುಂದಿನ ಸರಣಿ (Kalki 2898 AD 2) ಶೀಘ್ರದಲ್ಲೇ ತೆರೆ ಕಾಣುವ ನಿರೀಕ್ಷೆಯನ್ನು ಮೂಡಿಸಿದೆ.

ಕಲ್ಕಿ 2898ಎಡಿ ದೊಡ್ಡ ಪರದೆಯ ಮೇಲೆ ದಾಖಲೆಯನ್ನೇ ಬರೆದಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದ್ದು, ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿದೆ. ಮಾತ್ರವಲ್ಲದೆ ಇದೀಗ ಚಿತ್ರ ತಂಡ ಪ್ರೇಕ್ಷಕರಿಗೆ ಇನ್ನೊಂದು ಸಿಹಿ ಸುದ್ದಿಯನ್ನೂ ನೀಡಿದೆ.

ಚಿತ್ರದ ಮುಂದುವರಿದ ಭಾಗ ಶೀಘ್ರದಲ್ಲೇ ತೆರೆ ಕಾಣಲಿದೆ ಎಂಬ ಸಂದೇಶದೊಂದಿಗೆ ಕಲ್ಕಿ 2898ಎಡಿ ಚಲನಚಿತ್ರವು ಮುಕ್ತಾಯಗೊಂಡಿರುವುದರಿಂದ 2898ಎಡಿ ಚಿತ್ರ ಭಾಗ 2 ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.

ಮಹಾಕಾವ್ಯವನ್ನು ಆಧರಿಸಿದ ಚಿತ್ರವೂ ಸಂಪೂರ್ಣವಾಗಿ ತೆರೆದುಕೊಳ್ಳಲು ಒಂದಕ್ಕಿಂತ ಹೆಚ್ಚು ಕಂತುಗಳ ಅಗತ್ಯವಿದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಕೂಡ ದೃಢಪಡಿಸಿದ್ದಾರೆ.

ಕಮಲ್ ಹಾಸನ್ ನಿರ್ವಹಿಸಿರುವ ಅಸಾಧಾರಣ ಪಾತ್ರ ಯಾಸ್ಕಿನ್ ನ ಅಪಾಯಕಾರಿ ಕಾರ್ಯಾಚರಣೆಯೊಂದಿಗೆ ‘ಕಲ್ಕಿ 2898ಎಡಿ ಭಾಗ 2 ಪ್ರಾರಂಭವಾಗುವ ನಿರೀಕ್ಷೆ ಇದೆ. ಚಿತ್ರದ ಮೊದಲ ಭಾಗದಲ್ಲಿ ಕಮಲ್ ಹಾಸನ್ ಅವರ ಚಿಕ್ಕ ಪಾತ್ರವನ್ನು ಮಾತ್ರ ತೋರಿಸಲಾಗಿದೆ. ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ, ಪ್ರಭಾಸ್ ಭೈರವ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯಾಸ್ಕಿನ್ ಅವರನ್ನು ಹೇಗೆ ಎದುರಿಸಲು ಯೋಜಿಸುತ್ತಾರೆ ಎಂಬುದರ ಸುತ್ತ ಕಥೆ ಕೇಂದ್ರೀಕೃತವಾಗಿದೆ.

ಕಲ್ಕಿ 2898ಎಡಿ ಭಾಗ 2 ಚಿತ್ರ ನಿರ್ಮಾಣಕ್ಕೆ ಮೂರು ವರ್ಷಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಭಾಸ್ ಈ ವಿಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸುವ ಬಗ್ಗೆ ಸುಳಿವು ನೀಡಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ತಮ್ಮ ಮುಂದಿನ ಸರಣಿಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು ಮೂರು ವರ್ಷಗಳಲ್ಲಿ ಎರಡನೇ ಕಂತನ್ನು ಅಭಿಮಾನಿಗಳು ಎದುರು ನೋಡಬಹುದು ಎಂದು ನಾಗ್ ಅಶ್ವಿನ್ ಕೂಡ ಖಚಿತಪಡಿಸಿದ್ದಾರೆ.

ಭವ್ಯವಾದ ವೈಜ್ಞಾನಿಕ ಮಹಾಕಾವ್ಯ ‘ಕಲ್ಕಿ 2898ಎಡಿ’ ಚಿತ್ರಮಂದಿರಗಳಿಗೆ ಆಗಮಿಸಿದ್ದು, ಹಿಂದೂ ಧರ್ಮಗ್ರಂಥಗಳಿಂದ ಪ್ರೇರಿತವಾಗಿದೆ. ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ದೈವಿಕ ಜೀವಿಗಳ ಮೂಲವನ್ನು ವಿವರಿಸುವ ಈ ಚಿತ್ರವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಥಾಹಂದರ, ಉಸಿರುಕಟ್ಟುವ ದೃಶ್ಯವಳಿಗಳು ಮತ್ತು ವಿಶಿಷ್ಟ ಪರಿಕಲ್ಪನೆ ಮಂತ್ರಮುಗ್ಧರನ್ನಾಗಿಸುತ್ತದೆ. ಇದು ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಸಾಧನೆಯನ್ನು ಸೂಚಿಸುತ್ತದೆ.

ಈ ಚಿತ್ರವು ಭಾರತದ ‘ಅವೆಂಜರ್ಸ್ ಕ್ಷಣ’. ವೈಜ್ಞಾನಿಕ, ಕಾಲ್ಪನಿಕ ಮತ್ತು ಪುರಾಣದ ಅಂಶಗಳನ್ನು ಅದ್ಭುತವಾಗಿ ಸಂಯೋಜಿಸುತ್ತದೆ. ಚಿತ್ರದ ಸುತ್ತ ಹೆಚ್ಚಿನ ನಿರೀಕ್ಷೆಗಳಿವೆ ಎಂದು ರಾಣಾ ದಗ್ಗುಬಾಟಿ ಅಭಿಪ್ರಾಯ ಪಟ್ಟಿದ್ದಾರೆ.


Sacnilk.com ನ ಅಂದಾಜು ಪ್ರಕಾರ ಚಿತ್ರವು ಆರಂಭದ ದಿನದಂದು 180 ಕೋಟಿ ರೂ. ಗೂ ಅಧಿಕ ಆದಾಯ ಗಳಿಸಿ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತೀ ದೊಡ್ಡ ಓಪನರ್ ಆಗುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದೆ.

ಇಂಡಸ್ಟ್ರಿ ಟ್ರ್ಯಾಕರ್ ಪ್ರಕಾರ, ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898ಎಡಿ ಎಲ್ಲಾ ಭಾಷೆಗಳಲ್ಲಿ ಮೊದಲ ದಿನದಲ್ಲಿ ಭಾರತದಲ್ಲಿ ಸುಮಾರು 95 ಕೋಟಿ ರೂಪಾಯಿ ಗಳಿಸಿದೆ. ಆದರೆ ಅದರ ಒಟ್ಟು ಸಂಗ್ರಹವು ಸುಮಾರು 115 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

ಒಟ್ಟಾರೆಯಾಗಿ ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿದೆ. ಈ ಭಾರಿ ಸಂಗ್ರಹದೊಂದಿಗೆ ಕಲ್ಕಿ 2898 ಎಡಿ ಕೆಜಿಎಫ್ 2 ನ 159 ಕೋಟಿ ರೂ., ಸಲಾರ್ ನ 158 ಕೋಟಿ ರೂ., ಲಿಯೋ ನ 142.75 ಕೋಟಿ ರೂ. ಜಾಗತಿಕ ಆರಂಭಿಕ ದಾಖಲೆಗಳನ್ನು ಹಿಂದಿಕ್ಕಿದೆ.

ಸಾಹೂ 130 ಕೋಟಿ ರೂ., ಜವಾನ್ 129 ಕೋಟಿ ರೂ., ಆರ್ ಆರ್ ಆರ್ ಇನ್ನೂ 223 ಕೋಟಿ ರೂ. ಕಲೆಕ್ಷನ್‌ಗಳೊಂದಿಗೆ ಅತೀ ಹೆಚ್ಚು ಭಾರತೀಯ ಓಪನರ್ ಆಗಿ ಉಳಿದಿದೆ. ಬಾಹುಬಲಿ 2 ತನ್ನ ಆರಂಭಿಕ ದಿನದಲ್ಲಿ 217 ಕೋಟಿ ರೂ. ಗಳಿಸಿತು.

Exit mobile version