ಬೆಂಗಳೂರು: ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಮುಖ್ಯಭೂಮಿಕೆಯಲ್ಲಿರುವ ʻಕಲ್ಕಿ 2898 ADʼ ಸಿನಿಮಾದ (Kalki 2898 AD) ಬಿಡುಗಡೆ ದಿನಾಂಕ ಘೋಷಣೆ ಆಗಿದೆ. 2024ರ ಮೇ9ರಂದು ಥಿಯೇಟರ್‌ಗಳಲ್ಲಿ ಲಗ್ಗೆ ಇಡಲಿದೆ. ಸೋಷಿಯಲ್ ಮೀಡಿಯಾ ಮೂಲಕ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ.
2024ರ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದ ಚಿತ್ರವು ಈಗ ಮೇ 9ರಂದು ಪರದೆಯ ಮೇಲೆ ಬರಲಿದೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಜನುಮದಿನ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿತ್ತು. ಹಿಂದೆ ಈ ಸಿನಿಮಾವನ್ನು ‘ಪ್ರಾಜೆಕ್ಟ್ ಕೆ’ ಎಂದು ತಾತ್ಕಾಲಿಕ ಟೈಟಲ್ ಇಡಲಾಗಿತ್ತು.
ಈ ಚಿತ್ರದಲ್ಲಿ ಪ್ರಭಾಸ್ ಅವರು ಕಲ್ಕಿ ಅವತಾರ ತಾಳಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಸೂಪರ್ ಹೀರೊ ಮಾದರಿಯ ಪಾತ್ರಗಳು ಕಾಣಿಸಿವೆ. ದೀಪಿಕಾ ಪಡುಕೋಣೆ ಅವರು ಕೂಡ ‘ಕಲ್ಕಿ 2898-ಎಡಿ’ ಚಿತ್ರದಲ್ಲಿದ್ದಾರೆ. ಅವರ ಪಾತ್ರ ಕೂಡ ಇಲ್ಲಿ ಕಾಣಿಸಿದೆ.ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 600 ಕೋಟಿ ರೂ. ಬೃಹತ್ ಬಜೆಟ್‌ನಲ್ಲಿ ‘ಕಲ್ಕಿ 2898 AD’ ನಿರ್ಮಾಣವಾಗಿದ್ದು, ಇದು ಅತ್ಯಂತ ದುಬಾರಿ ಭಾರತೀಯ ಚಲನಚಿತ್ರವಾಗಿದೆ.
ಇದನ್ನೂ ಓದಿ: Amitabh Bachchan: ‘ಕಲ್ಕಿ 2898 AD’ ಚಿತ್ರದಿಂದ ಅಮಿತಾಭ್ ಫಸ್ಟ್ ಲುಕ್ ಔಟ್!
T 4888 – The story that ended 6000 years ago.
— Amitabh Bachchan (@SrBachchan) January 12, 2024
𝐁𝐞𝐠𝐢𝐧𝐬 𝐌𝐚𝐲 𝟗𝐭𝐡, 𝟐𝟎𝟐𝟒.
The future unfolds. #Kalki2898AD@SrBachchan @ikamalhaasan #Prabhas @deepikapadukone @nagashwin7 @DishPatani @Music_Santhosh @VyjayanthiFilms @Kalki2898AD #Kalki2898ADonMay9 pic.twitter.com/bb6wRqnMG3
ದಿಶಾ ಪಟಾನಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಡಿಜೋರ್ಜೆ ಸ್ಟೋಜಿಲ್ಕೋವಿಕ್ ಅವರ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ ಸಿನಿಮಾಕ್ಕಿದೆ.
ಪ್ರಾಜೆಕ್ಟ್ ಕೆ ಸಿನಿಮಾ ( ‘ಕಲ್ಕಿ 2898 ಎಡಿ’ ) ಅಮೆರಿಕದ ಸ್ಯಾನ್ ಡಿಯಾಗೊದಲ್ಲಿ ಕಾಮಿಕ್ ಕಾನ್‌ನ ಭಾಗವಾಗಲಿದೆ ಎಂದು ಘೋಷಿಸಲಾಗಿತ್ತು. ಈ ರೀತಿ ಕಾಮಿಕ್ ಕಾನ್‌ಗೆ ಆಯ್ಕೆಯಾದ ಮೊದಲನೇ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಇದು ಪಡೆದುಕೊಂಡಿತ್ತು.