Site icon Vistara News

Kalyan Kumar | ನಟ ಕಲ್ಯಾಣ್‌ ಕುಮಾರ್‌ ಸೊಸೆ ನಿಧನ: ಡಯಟ್‌ ಪ್ಲ್ಯಾನ್‌ ಮುಳುವಾಯ್ತಾ?

Kalyan Kumar

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಲ್ಯಾಣ್‌ ಕುಮಾರ್‌ (Kalyan Kumar) ಅವರ ಸೊಸೆ ಪ್ರಿಯದರ್ಶಿನಿ ನವೆಂಬರ್‌ ೨ ರಂದು ನಿಧನರಾಗಿದ್ದಾರೆ. ಮೂಲಗಳ ಪ್ರಕಾರ ಪ್ಯಾಲಿಯೋ ಡಯಟ್‌ನಿಂದ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ. ಭರತ್‌ ಕಲ್ಯಾಣ್‌ ಕುಮಾರ್‌ ಅವರ ಪತ್ನಿ ಪ್ರಿಯದರ್ಶಿನಿ ಅವರಿಗೆ ೪೩ ವರ್ಷ ವಯಸ್ಸಾಗಿದ್ದು, ಕೆಲವು ವಾರಗಳ ಹಿಂದೆ ಕೋಮಾಗೆ ಜಾರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ೫ ಗಂಟೆ ಸುಮಾರಿಗೆ ಕೊನೆಯುಸಿರೆಳಿದಿದ್ದಾರೆ.

ಮೂರು ತಿಂಗಳ ಹಿಂದೆ ಚೆನ್ನೈ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲವು ತಿಂಗಳ ಹಿಂದೆ ಪ್ಯಾಲಿಯೋ ಆಹಾರ ಕ್ರಮ ಅನುಸರಿಸುತ್ತಿದ್ದರು. ಡಯಟ್‌ನಲ್ಲಿ ಹಠಾತ್ ಬದಲಾವಣೆಯಿಂದ ಅವರ ಮಧುಮೇಹ ಏರಿಕೆಗೆ ಕಾರಣವಾಗಿತ್ತು ಎನ್ನಲಾಗಿದೆ. ಪ್ರಿಯದರ್ಶಿನಿ ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಭರತ್‌ ಅವರು ಕಿರುತೆರೆಯಲ್ಲಿ ಹೆಸರು ಗಳಿಸಿದ್ದರು.

ಇದನ್ನೂ ಓದಿ | J J Irani Died | ಭಾರತದ ಸ್ಟೀಲ್ ಮ್ಯಾನ್ ಜೆ ಜೆ ಇರಾನಿ ನಿಧನ

Exit mobile version