Site icon Vistara News

Kangana Ranaut | ನಾನು ಯಾವತ್ತೂ ಆ ರೀತಿ ಡ್ಯಾನ್ಸ್‌ ಮಾಡಿಲ್ಲ: ಕಂಗನಾ ರಣಾವತ್

Kangana Ranaut

ಬೆಂಗಳೂರು : ʻʻಮದುವೆ, ಬರ್ತ್‌ಡೇ ಪಾರ್ಟಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನಟ ನಟಿಯರು ಹಣ ಪಡೆದು ನೃತ್ಯ ಮಾಡುತ್ತಾರೆ. ಆದರೆ, ನಾನು ಯಾವತ್ತೂ ಆ ರೀತಿಯಲ್ಲಿ ಡ್ಯಾನ್ಸ್ ಮಾಡಿಲ್ಲʼʼ ಎಂದು ಕಂಗನಾ ರಣಾವತ್ (Kangana Ranaut) ಹೇಳಿಕೊಂಡಿದ್ದಾರೆ.ಆಶಾ ಭೋಂಸ್ಲೆ ಅವರು ಸಹೋದರಿ, ಗಾಯಕಿ ಲತಾ ಮಂಗೇಶ್ಕರ್ ಅವರ ಕುರಿತು ಮಾತನಾಡಿರುವ ವಿಡಿಯೊವನ್ನು ಕಂಗನಾ ಹಂಚಿಕೊಂಡಿದ್ದಾರೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕುರಿತು ಕಂಗನಾ, ಕೆಲವು ಸಾಲುಗಳನ್ನೂ ಬರೆದುಕೊಂಡಿದ್ದಾರೆ.  

ʻʻನಾನು ಮದುವೆಗಳಲ್ಲಿ ಅಥವಾ ಖಾಸಗಿ ಪಾರ್ಟಿಗಳಲ್ಲಿ ಎಂದಿಗೂ ನೃತ್ಯ ಮಾಡಿಲ್ಲ, ನನ್ನ ಬಳಿ ಅತ್ಯಂತ ಜನಪ್ರಿಯ ಹಾಡುಗಳಿದ್ದರೂ ಹಣವನ್ನು ನಿರಾಕರಿಸಿದೆ. ಈ ವಿಡಿಯೊವನ್ನು ನೋಡಲು ಸಂತೋಷವಾಗಿದೆ. ಲತಾಜಿ ನಿಜವಾಗಿಯೂ ಸ್ಫೂರ್ತಿದಾಯಕ” ಎಂದು ಕಂಗನಾ ಬರೆದುಕೊಂಡಿದ್ದಾರೆ. ʻʻಖಾಸಗಿ ಸಮಾರಂಭವೊಂದರಲ್ಲಿ ಲತಾ ಅವರಿಗೆ ಹಾಡಲು ಕೇಳಿಕೊಳ್ಳಲಾಗಿತ್ತು. ಆ ಹಾಡಿಗೆ ದೊಡ್ಡಮೊತ್ತದಲ್ಲೇ ಹಣ ನೀಡುವುದಾಗಿಯೂ ಆಯೋಜಕರು ಹೇಳಿದ್ದರು. ಆದರೆ, ಹಾಡಲು ಲತಾ ನಿರಾಕರಿಸಿದರಂತೆ. ದುಡ್ಡಿಗಾಗಿ ನಾನು ಹಾಡಲಾರೆ ಎಂದು ಹೇಳಿದ್ದರಂತೆʼʼ. ಇದನ್ನು ಸ್ವತಃ ಆಶಾ ಭೋಂಸ್ಲೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Pathaan Controversy | ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟ ಕಂಗನಾ ರಣಾವತ್: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ!

ಲತಾ ಅವರ ಮಾತುಗಳನ್ನು ಉಲ್ಲೇಖ ಮಾಡಿರುವ ಕಂಗನಾ, ʻʻನನಗೆ ಲತಾ ಅವರು ಯಾವತ್ತಿಗೂ ಆದರ್ಶ. ಅವರ ಮಾತನ್ನು ಒಪ್ಪುತ್ತೇನೆ ಮತ್ತು ಪಾಲಿಸಿಕೊಂಡು ಬಂದಿದ್ದೇನೆʼʼ ಎಂದಿದ್ದಾರೆ. ಲತಾ ಮಂಗೇಶ್ಕರ್ ಅವರು ಭಾರತದ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರು. ಅವರ ಮರಣದ ನಂತರ ಆಸ್ಕರ್ ಪ್ರಶಸ್ತಿಗಳಲ್ಲಿ ಲತಾ ಅವರಿಗೆ ಗೌರವ ಸಲ್ಲಿಸದಿದ್ದಾಗ ಕಂಗನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಹ ಪ್ರಶಸ್ತಿಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ | Emergency Movie | ಸಂಸತ್‌ನಲ್ಲಿ ಸಿನಿಮಾ ಶೂಟಿಂಗ್‌ಗೆ ಅವಕಾಶ ಕೋರಿದ ಕಂಗನಾ ರಣಾವತ್‌, ಸಮ್ಮತಿಸುವುದೇ ಸರ್ಕಾರ?

Exit mobile version